- Advertisement -
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಮೋಸ್ಟ್ ಅವೇಟೇಡ್ ರಾಬರ್ಟ್ ಸಿನಿಮಾ ತೆಲುಗು ನೆಲದಲ್ಲೂ ಹವಾ ಎಬ್ಬಿಸ್ತಿದೆ.. ಇಂದು ರಿಲೀಸ್ ಆದ ರಾಬರ್ಟ್ ತೆಲುಗು ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ದಚ್ಚು ಗೆಟಪ್ ನೋಡಿ ಆಂದ್ರ ಮಂದಿ ವಾರೇ ವಾವ್ಹ್ ಎನ್ನುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನಲ್ ಸೃಷ್ಟಿಸಿದ್ದ ರಾಬರ್ಟ್ ಟೀಸರ್ ತೆಲುಗಿನಲ್ಲೂ ಹೊಸ ಹವಾ ಎಬ್ಬಿಸ್ತಿದೆ.
ಬಟ್ ತೆಲುಗು ಟೀಸರ್ ನಲ್ಲಿ ದಚ್ಚು ವಾಯ್ಸ್ ಬದಲಿಗೆ ಬೇರೆ ಯಾರೋ ಡಬ್ ಮಾಡಿರೋದಕ್ಕೆ ದಾಸನ ಭಕ್ತಗಣ ಕೊಂಚ ಬೇಸರಗೊಂಡಿದ್ದಾರೆ. ಅದು ಬಿಟ್ರೆ ಟೀಸರ್ ಗೆ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಇನ್ನೂ ರಾಬರ್ಟ್ ಸಿನಿಮಾ ಕನ್ನಡ, ತೆಲುಗು ಎರಡು ಭಾಷೆಯಲ್ಲಿ ಮಾರ್ಚ್ 11ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ತೆಲುಗು ಭಾಷೆಯಲ್ಲಿ ರಿಲೀಸ್ ಗೆ ಆಂದ್ರ ಮಂದಿ ಕೊಂಚ ತಕರಾರು ಮಾಡಿದ್ರು. ಈ ಬಳಿಕ ರಿಲೀಸ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

- Advertisement -