ಬೆಂಗಳೂರು: ಸಿಎಂ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಬರೀ ರಾಜಕೀಯ ಸ್ಟಂಟ್ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಮಾಜಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಒಂದು ವರ್ಷದಲ್ಲಿ ಯಾರೂ ಮಾಡಿಕೊಳ್ಳಲಾಗದಿರೋ ಡ್ಯಾಮೇಜನ್ನು ಕುಮಾರಸ್ವಾಮಿ ಅವರಾಗಿ ಅವರೇ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳಿಂದ ಮಾತ್ರ ಅವರು ಜನರಿಗೆ ಹತ್ತಿರವಾಗಬೇಕು. ಅದು ಬಿಟ್ಟು ಈ ರೀತಿ ವಾಸ್ತವ್ಯದಿಂದ ಒಬ್ಬರನ್ನು ಮಾತನಾಡಿಸಿ ಒಬ್ಬರಿಗೆ ಕೊಡೋ ನೆರವು ಶಾಶ್ವತವಲ್ಲ. ಇಡೀ ರಾಜ್ಯದ ಎಲ್ಲಾ ಬಡವರ ಪರ ಕಾರ್ಯಕ್ರಮಗಳನ್ನು ನೀಡೋ ಕಾರ್ಯಕ್ರಮಗಳಿಂದ ಸರ್ಕಾರ ನೆರವಾಗಬೇಕು. ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡೋ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಅಂತ ಸಿಎಂ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ಇದೇ ತಿಂಗಳ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟಕಲ್ ತಾಲೂಕಿನ ಚಂಡರಕಿ ಗ್ರಾಮದ ಶಾಲೆಯಲ್ಲಿ ಸಿಎಂ ಗ್ರಾಮ ವಾಸ್ತವ್ಯ ಶುರುಮಾಡಲಿದ್ದಾರೆ.
ನಾಳೆ ಬಸ್ ಇದ್ರೂ ಈ ರೋಡ್ ಇರೋದಿಲ್ವಂತೆ…!!ಮಿಸ್ ಮಾಡದೇ ಈ ವಿಡಿಯೋ ನೋಡಿ