Thursday, May 30, 2024

Latest Posts

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

- Advertisement -

Political News: ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್‌ ಪ್ರಸಾದ್(76) ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಹೃದಯಾಘಾತದಿಂದ ರಾತ್ರಿ 12.30ಕ್ಕೆ ಶ್ರೀನಿವಾಸ್‌ ಪ್ರಸಾದ್ ನಿಧನರಾಗಿದ್ದು, ಹಲವು ದಿನಗಳಿಂದ ಶ್ರೀನಿವಾಸ್ ಪ್ರಸಾದ್ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಶ್ರೀನಿವಾಸ್ ಪ್ರಸಾಾದ್ ನಿಧನರಾಗಿದ್ದಾರೆ. ರವಿವಾರದಿಂದಲೇ ಅವರು ಆಸ್ಪತ್ರೆಯಲ್ಲಿದ್ದು, ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಕೊನೆಯದಾಗಿ ಅವರು ಕಾಫಿ ಕುಡಿದು ಸಾವನ್ನಪ್ಪಿದ್ದಾರೆಂಬ ಮಾಹಿತಿ ಇದೆ.

ಇತ್ತೀಚಿಗಷ್ಟೇ ಶ್ರೀನಿವಾಸ್ ಪ್ರಸಾದ್ ರಾಜಕೀ ನಿವೃತ್ತಿ ಘೋಷಿಸಿದ್ದು, ಬಿಜೆಪಿ ಬಗ್ಗೆ ಅವರಿಗೆ ಸಣ್ಣ ಅಸಮಾಧಾನವಿತ್ತು. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗ, ಅವರ ಕಾರ್ಯಕ್ರಮಕ್ಕೆ ಬರಲು ಕೂಡ ಶ್ರೀನಿವಾಸ್ ಪ್ರಸಾದ್‌ ನಿರಾಕರಿಸಿದ್ದರು. ಸಿಎಂ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್‌ರನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿದ್ದರು.

ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗುವುದು ಮತ್ತು ಅಲ್ಲೇ, ವಿಧಿವತ್ತಾಗಿ ಅವರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಪುತ್ರಿಯರು ಹೇಳಿದ್ದಾರೆ.

ಕೇಂದ್ರದಿಂದ ಕಡಿಮೆ ಬರಪರಿಹಾರ ಬಿಡುಗಡೆ: ಕಾಂಗ್ರೆಸ್ ಪ್ರತಿಭಟನೆ

ಪ್ರಜ್ವಲ್ ಪೆಂಡ್ರೈವ್ ಕೇಸ್: ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನ

ಕಸಬ್ ವಿರುದ್ಧ ವಾದ ಮಂಡಿಸಿದ್ದ ವಕೀಲರಿಗೆ ಬಿಜೆಪಿ ಟಿಕೇಟ್

- Advertisement -

Latest Posts

Don't Miss