Tuesday, April 15, 2025

Latest Posts

Chamundi Hills : ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ…!

- Advertisement -

Film News : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಾಲಿವುಡ್ ನಟ ಕಾಣಿಸಿಕೊಂಡಿದ್ದಾರೆ. ಈ ನಟ ದೇವಿಯ ದರ್ಶನ ಪಡೆದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿ ಏನಪ್ಪ ಅಂದ್ರೆ ಕನ್ನಡ ನಾಯಕರೊಂದಿಗೆ ಬಾಲಿವುಡ್ ನಟ ನಟಿಸುತ್ತಿದ್ದಾರಂತೆ. ಹೊಸದೊಂದು ಸಿನಿಮಾ ವಿಚಾರವಾಗಿಯೇ ಮೈಸೂರಿಗೆ ಬಂದಿದ್ರಂತೆ …ಹಾಗಿದ್ರೆ ಯಾರೀ ನಟ …..ಯಾವುದು ಆ ಕನ್ನಡ ಸಿನಿಮಾ ಹೇಳ್ತೀವಿ ಈ ಸ್ಟೋರಿಯಲ್ಲಿ.

ಬಾಲಿವುಡ್ ನಟ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿಕೊಟ್ಟಿದ್ದಾರೆ. ‘ಕೆಜಿಎಫ್‌ 2’ಗಾಗಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು, ಸಂಜಯ್ ದತ್‌ಗೆ ಸೌತ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಸದ್ಯ ಧ್ರುವ ಸರ್ಜಾ ನಟಿಸುತ್ತಿರುವ ‘KD’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿರುವ ಸಂಜಯ್ ದತ್ ಮೈಸೂರಿನಲ್ಲಿರುವ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ಚಾಮುಂಡಿ ತಾಯಿಯ ದರ್ಶನದ ಬಳಿಕ ಸಂಜಯ್ ದತ್ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ. ಈ ವೇಳೆ ಚಾಮುಂಡೇಶ್ವರಿ ತಾಯಿ, ಪ್ರೇಮ್ ನಿರ್ದೇಶನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಸಂಜಯ್ ದತ್‌ಗೆ ಮೈಸೂರು ಹೊಸದೇನು ಅಲ್ಲ. ಆದರೆ, ಚಾಮುಂಡೇಶ್ವರಿ ದರ್ಶನ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಚಾಮುಂಡಿ ತಾಯಿಯ ದರ್ಶನ ಪಡೆದು ಬಂದಿದ್ದಾರೆ. ದೇವಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

“ನಾನು ಎಷ್ಟು ಬಾರಿ ಮೈಸೂರಿಗೆ ಬಂದಿದ್ದೇನೆ. ದೇವಿ ನನ್ನನ್ನು ಕರೆಸಿಕೊಂಡಿರಲಿಲ್ಲ. ಇಂದು ನನಗೆ ಬರುವಂತೆ ಆಜ್ಞೆ ಮಾಡಿದ್ದಾರೆ. ನನಗೆ ತುಂಬಾನೇ ಖುಷಿ ಆಗುತ್ತಿದೆ. ನಾನಿಲ್ಲಿ ದೇವಿಯ ದರ್ಶನ ಮಾಡುವುದಕ್ಕೆ ಬಂದಿದ್ದೇನೆ.” ಎಂದು ಹೇಳಿದ್ದಾರೆ.

“ಪ್ರೇಮ್ಸ್ ಜೊತೆ ಕೆಡಿ ಶೂಟಿಂಗ್ ಮಾಡುತ್ತಿದ್ದೇನೆ. ನನಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಖುಷಿ ಕೊಡುತ್ತಿದೆ. ಕೆಜಿಎಫ್ ಜೊತೆ ಕೆಲಸ ಮಾಡಿದ್ದು ಖುಷಿ. ಪ್ರೇಮ್ ಸರ್ ಜೊತೆ ಕೆಲಸ ಮಾಡುತ್ತಿರೋದು ಖುಷಿಯಿದೆ. ಪ್ರೇಮ್ ಬೆಸ್ಟ್ ಡೈರೆಕ್ಟರ್.” ಎಂದು ಸಂಜಯ್ ಜೋಗಿ ಪ್ರೇಮ್ ನಿರ್ದೇಶನವನ್ನು ಹೊಗಳಿದ್ದಾರೆ.

ದಕ್ಷಿಣ ಭಾರತದಲ್ಲಿ ಸಂಜಯ್ ದತ್ ಬ್ಯುಸಿ ಸಂಜಯ್ ದತ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಆಫರ್‌ಗಳು ಹೆಚ್ಚಾಗಿ ಬರುತ್ತಿದೆ. ಸದ್ಯ ಕನ್ನಡದಲ್ಲಿಯೇ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ಜೊತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಶೆಟ್ಟಿ ಸೇರಿದಂತೆ ದಿಗ್ಗಜರೇ ನಟಿಸುತ್ತಿದ್ದಾರೆ.

ಹಾಸ್ಟೆಲ್  ಹುಡುಗರಿಗೆ ರಮ್ಯಾ ನೋಟೀಸ್..?!

Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

Sandalwood-ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದು ಸರಿಯಲ್ಲ..! ಸಾರಾ ಗೋವಿಂದ್

- Advertisement -

Latest Posts

Don't Miss