ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಕು ಅಂತಾರೆ ಚಾಣಕ್ಯ..

ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕೆಲವರು ಎಷ್ಟೇ ದುಡಿದರೂ ಶ್ರೀಮಂತರಾಗುವುದಿಲ್ಲ. ಯಾಕಂದ್ರೆ ಲಕ್ಷ್ಮ ದೇವಿಯ ಕೃಪೆ ಅವರ ಮೇಲಿರುವುದಿಲ್ಲ. ಯಾಕೆ ಲಕ್ಷ್ಮೀ ದೇವಿ ಅಂಥವರ ಮೇಲೆ ಕೃಪೆ ತೋರಿಸುವುದಿಲ್ಲ ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಯಾವ ವ್ಯಕ್ತಿ ಸ್ವಚ್ಛವಾಗಿರುತ್ತಾನೋ, ಅವನ ಬಳಿ ಲಕ್ಷ್ಮೀ ಇರುತ್ತಾಳೆ. ಅಂಥವರ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರುತ್ತಾಳೆ ಅಂತಾರೆ ಚಾಣಕ್ಯರು. ಅಂತೆಯೇ ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲ, ಯಾರು ಯಾವಾಗಲೂ ಕೊಳಕು ಬಟ್ಟೆ ಧರಿಸಿ ಓಡಾಡುತ್ತಾರೋ, ಅಂಥವರ ಮನೆ ಎಂದೂ ಉದ್ಧಾರವಾಗುವುದಿಲ್ಲ.

ಪ್ರತಿದಿನ ಹಲ್ಲು ಉಜ್ಜಿ, ಸ್ನಾನ ಮಾಡಿ, ಶುದ್ಧವಾಗಿ ತಯಾರಾಗಿ, ಸರಿಯಾದ ವೇಳೆಗೆ ಕೆಲಸಕ್ಕೆ ಹೋಗುವವರೋ ಅವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಅಂದಿದ್ದಾರೆ ಚಾಣಕ್ಯರು. ಯಾರು ಹಲ್ಲುಜ್ಜದೇ, ಸ್ನಾನ ಮಾಡದೇ, ಕೆಲಸಕ್ಕೆ ಹೋಗುವರೋ ಅವರಿಗೆ ಬಡತನ ಬರುವುದು ಖಚಿತವೆಂದು ಹೇಳಲಾಗಿದೆ.

ಇನ್ನು ನೀವು ಆಡುವ ಮಾತು ಉತ್ತಮವಾಗಿರಲಿ. ನಿಮ್ಮ ಮಾತಿನಿಂದ ಯಾರಿಗೂ ಬೇಸರವಾಗದಿರಲಿ. ನೀವು ಆಡುವ ಮಾತು ಬೇರೆಯವರ ಜೀವನ ಹಾಳುಮಾಡದಿರಲಿ. ಹಾಗೇನಾದರೂ ನೀವು ಮನಸ್ಸು ನೋವಿಸುವ ಮಾತನಾಡಿ, ಕೊಂಕು ಮಾತನಾಡಿ ಬೇರೆಯವರಿಗೆ ಬೇಸರವನ್ನುಂಟು ಮಾಡಿದರೆ, ನೀವೆಂದು ಉದ್ಧಾರವಾಗುವುದಿಲ್ಲ.

ಇನ್ನು ಮನೆಯಲ್ಲಿದ್ದಾಗ ನಾವು ಮನಸ್ಸಿಗೆ ಬಂದ ಹಾಗೆ ತಿನ್ನುತ್ತೇವೆ. ಆದರೆ ಹೊರಗೆ ಹೋದಾಗ ನಿಮ್ಮ ನಡುವಳಿಕೆ ಸೌಮ್ಯವಾಗಿರಲಿ. ಹೊಟ್ಟೆ ಬಾಕರ ರೀತಿ ಬಿಹೇವ್ ಮಾಡುವುದು ತಪ್ಪಾಗುತ್ತದೆ. ಆದ್ದರಿಂದ ನಿಮ್ಮ ಆಹಾರ ಸೇವನೆ ಇತಿ- ಮಿತಿಯಲ್ಲಿರಲಿ.

ಕೊನೆಯದಾಗಿ ನಿಯತ್ತಾಗಿ ದುಡಿಯಿರಿ. ನಿಯತ್ತಿನಿಂದ ಗಳಿಸಿದ ದುಡ್ಡು ಕೊನೆತನಕ ಉಳಿಯುತ್ತದೆ. ಮೋಸದಿಂದ ಗಳಿಸಿದ ದುಡ್ಡು ಪರರ ಪಾಲಾಗುತ್ತದೆ. ಹಾಗಾಗಿ ನೀವು ಉದ್ಧಾರವಾಗಬೇಕು, ಶ್ರೀಮಂತರಾಗಬೇಕು ಅಂದ್ರೆ ಬುದ್ಧಿವಂತಿಕೆಯಿಂದ ನಿಯತ್ತಾಗಿ ದುಡಿಯಿರಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author