Chanakya Neeti: ಸಂಬಂಧಿಕರ ಜತೆ ಈ 5 ವಿಚಾರಗಳ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ ಚಾಣಕ್ಯರು

Chanakya Neeti: ಸಂಬಂಧಿಕರು ಎಂದರೆ, ಎಲ್ಲರೂ ನಮ್ಮ ಖುಷಿಯನ್ನೇ ಬಯಸುವವರಾಗಿರುವುದಿಲ್ಲ. ನಮ್ಮ ಕೆಡುಕನ್ನು ಕಂಡು ಮನಸ್ಸಿನಲ್ಲೇ ಖುಷಿ ಪಡುವವರು, ಸಮಾಧಾನ ಮಾಡಿಕ“ಳ್ಳುವವರೂ ಇದ್ದಾರೆ. ಹಾಗಾಗಿ ಸಂಬಂಧಿಕರ ಬಳಿ ನೀವು ಕೆಲ ವಿಷಯಗಳನ್ನು ಹೇಳಬಾರದು ಅಂತಾರೆ ಚಾಣಕ್ಯರು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹಣ ಮತ್ತು ಆಸ್ತಿ, ಆದಾಯದ ವಿಚಾರ: ನಿಮ್ಮ ಬಳಿ ಇರುವ ಆಸ್ತಿ, ಹಣ, ಆದಾಯದ ವಿಚಾರವನ್ನು ನೀವು ನಿಮ್ಮ ಯಾವ ಸಂಬಂಧಿಕರಲ್ಲಿಯೂ ಹೇಳಬಾರದು ಅಂತಾರೆ ಚಾಣಕ್ಯರು. ನಿಮ್ಮ ಬಳಿ ಉತ್ತಮ ಹಣವಿದ್ದರೆ, ಅವರು ಅಸೂಯೆ ವ್ಯಕ್ತಪಡಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರದಿದ್ದಲ್ಲಿ, ನಿಮ್ಮನ್ನು ಕೀಳಾಗಿಯೂ ಕಾಣಬಹುದು. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಬಹುದು ಅಂತಾರೆ ಚಾಣಕ್ಯರು.

ಮನೆ ಜಗಳದ ವಿಚಾರ: ಇನ್ನು ನಿಮ್ಮ ಮನೆಯಲ್ಲಿ ಪೋಷಕರು ಮಕ್ಕಳು, ಪತಿ-ಪತ್ನಿ, ಅಣ್ಣ-ತಂಗಿ ಹೀಗೆ ಯಾವುದೇ ಸಂಬಂಧದಲ್ಲಿ ಬಿರುಕು ಉಂಟಾಗಿ ಜಗಳ ನಡೆಯುತ್ತಿದ್ದಲ್ಲಿ ಈ ಬಗ್ಗೆ ನೀವು ನಿಮ್ಮ ಸಂಬಂಧಿಕರಲ್ಲಿ ಹೇಳಬಾರದು. ಹಾಗೇನಾದರೂ ನೀವು ನಿಮ್ಮ ವೈಯಕ್ತಿಕ ವಿಷಯ ಹೇಳಿದ್ದಲ್ಲಿ, ಅದನ್ನು ಅವರು ಮಸಾಲೆ ಹಾಕಿ ಪ್ರಚಾರ ಮಾಡಿ, ಮಜಾ ತೆಗೆದುಕ“ಳ್ಳುತ್ತಾರೆ. ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೆ. ಹಾಗಾಗಿ ನಿಮ್ಮ ಮನೆಯ ವಿಷಯಗಳು ನಾಲ್ಕು ಗೋಡೆಯ ಮಧ್ಯೆ ಇರುವಂತೆ ನೋಡಿಕೋಳ್ಳಿ.

ನಡೆದು ಹೋದ ತಪ್ಪುಗಳು: ನಿಮ್ಮಿಂದ ಭೂತಕಾಲದಲ್ಲಿ ಯಾವುದೋ ತಪ್ಪು ನಡೆದು ಹೋಗಿದೆ. ಅದನ್ನು ಹಾಗೆ ಇರಲು ಬಿಡಿ. ಆದರೆ ಯಾವುದೇ ಕಾರಣಕ್ಕೂ ಮನಸ್ಸಿಗೆ ಸಮಾಧಾನ ಸಿಗುತ್ತದೆ ಅನ್ನೋ ಭ್ರಮೆಯಿಂದ ಯಾವುದೇ ಸಂಬಂಧಿಕರ ಬಳಿ ಹೇಳಲು ಹೋಗಬೇಡಿ. ಇದನ್ನು ಅವರು ಅಸ್ತ್ರವಾಗಿ ನಿಮ್ಮ ಮೇಲೇ ಉಪಯೋಗಿಬಹುದು.

ಭವಿಷ್ಯದ ಪ್ಲಾನ್‌ಗಳು: ನಿಮ್ಮ ಭವಿಷ್ಯದ ಪ್ಲಾನ್‌ಗಳ ಬಗ್ಗೆ ಸಂಬಂಧಿಕರ ಬಳಿ ಮಾತ್ರವಲ್ಲ. ನಿಮ್ಮ ಮನೆಯವರ ಬಳಿ, ಸ್ನೇಹಿತರ ಬಳಿಯೂ ಹೇಳಬೇಡಿ. ಏಕೆಂದರೆ, ಭವಿಷ್ಯದಲ್ಲಿ ನಿಮಗೆ ಆ ಕೆಲಸ ಮಾಡಲು ಆಗಲಿಲ್ಲ ಅಥವಾ ಆ ಕೆಲಸ ವಿಫಲವಾದಲ್ಲಿ, ನಿಮ್ಮ ಬಗ್ಗೆ ತಮಾಷೆ ಮಾಡುವವರೇ ಹೆಚ್ಚು. ಹಾಗಾಗಿ ಭವಿಷ್ಯದ ಪ್ಲಾನ್ ನಿಮ್ಮ ಮನಸ್ಸಿನಲ್ಲೇ ಇರಲಿ. ಅದರಲ್ಲಿ ನೀವು ಸಕ್ಸಸ್ ಆದ ಬಳಿಕ, ಆ ಯಶಸ್ಸೇ ಸದ್ದು ಮಾಡಲಿ.

ಆರ್ಥಿಕ ಸಂಕಷ್ಟ: ನಿಮ್ಮ ಬಳಿ ಹಣವಿಲ್ಲ. ಅಥವಾ ನಿಮಗೆ ಸಾಲವಿದೆ. ಇಂಥದ್ದನ್ನೆಲ್ಲ ನೀವು ನಿಮ್ಮ ಸಂಬಂಧಿಕರ ಬಳಿ ಹೇಳದೇ, ಆದಷ್ಟು ನೀವು ದುಡಿದು ಹಣ ಮಾಡಿ, ಪರಿಹಾರ ಕಂಡುಕ“ಳ್ಳಲು ಪ್ರಯತ್ನಿಸುವುದು ಉತ್ತಮ.

About The Author