Chanakya Neeti: ನಾವು ಸಂಬಂಧಿಕರ ಮನೆಗೆ ಹೋದಾಗ, ಅವರಿಗೆ ಹೇಗನ್ನಿಸಬೇಕು ಅಂದ್ರೆ, ಛೇ ಇವ್ರು ನಾಳೆನೇ ಹೋಗ್ತಾರಾ? ಇನ್ನು 1-2 ದಿನ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತಾ ಅನ್ನಿಸಬೇಕು. ಅಥವಾ ಬಂದಿದ್ದು ಖುಷಿಯಾಯ್ತು ಅನ್ನೋ ರೀತಿ ಇರಬೇಕು. ಹಾಗನ್ನಿಸಬೇಕು ಅಂದ್ರೆ ನಾವು ಕೆಲ ವಿಷಯಗಳಲ್ಲಿ ಗಮನ ಹರಿಸಬೇಕು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ವಿವರಣೆ ತಿಳಿಯೋಣ ಬನ್ನಿ.
ಬರಿಗೈಯಲ್ಲಿ ಹೋಗಬೇಡಿ: ನೀವು ಯಾವ ಸಂಬಂಧಿಕರ ಮನೆಗೆ ಹೋಗುತ್ತಿದ್ದೀರೋ, ಅವರ ಮನೆಯಲ್ಲಿ ಮಕ್ಕಳು ಇರಲಿ ಇಲ್ಲದಿರಲಿ, ನೀವು ಏನಾದರೂ ತಿನ್ನಲು, ತೆಗೆದುಕ“ಂಡು ಹೋಗಿ. ಹಣ್ಣು- ಸಿಹಿ ತಿಂಡಿ ಇಂಥದ್ದೇನಾದರೂ ಇರಲಿ. ಏಕೆಂದರೆ, ಯಾರ ಮನೆಗಾದರೂ ಹೋಗುವಾಗ ಖಾಲಿ ಕೈಯ್ಯಲ್ಲಿ ಹೋಗಬಾರದು.
ಹೆಚ್ಚು ದಿನ ಸಂಬಂಧಿಕರ ಮನೆಯಲ್ಲಿ ಉಳಿಯಬೇಡಿ: ಇನ್ನು ನೀವು ಯಾವ ಸಂಂಬಂಧಿಕರ ಮನೆಗೆ ಹೋಗಿರುತ್ತೀರೋ, ಅವರ ಮನೆಯಲ್ಲಿ ಹೆಚ್ಚು ದಿನ ಉಳಿಯಬೇಡಿ. ಹೆಚ್ಚೆಂದರೆ 2 ದಿನ ಮಾತ್ರ, ಅದಕ್ಕಿಂತ ಹೆಚ್ಚು ದಿನ ಇದ್ದರೆ, ನಿಮ್ಮ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ.
ಇತರ ಸಂಬಂಧಿಕರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ: ನೀವು ಸಂಬಂಧಿರ ಮನೆಗೆ ಹೋದಾಗ, ಇತರ ಸಂಬಂಧಿಕರ ಬಗ್ಗೆ ಎಂದಿಗೂ ಕೆಟ್ಟದಾಗಿ, ಕೀಳಾಗಿ ಮಾತನಾಡಬೇಡಿ. ಇದರಿಂದ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ. ಅಲ್ಲದೇ, ನಿಮ್ಮ ಬಗೆಗಿನ ಪ್ರೀತಿ, ಕಾಳಜಿ, ನಂಬಿಕೆ ಕುಸಿಯುವ ಸಾಧ್ಯತೆ ಹೆಚ್ಚು. ಹಾಗಾಗಿ ಚಾಡಿ ಹೇಳುವ ಬುದ್ಧಿ ಬೇಡ.
ವೈಯಕ್ತಿಕ ವಿಚಾರಗಳನ್ನು ಕೆದಕಬೇಡಿ: ನಾವು ಯಾರ ಮನೆಗೆ ಹೋಗುತ್ತೇವೋ, ಅವರಿಗೆ ಸಂಬಂಧಿಸಿದ ಹಣ, ಆಸ್ತಿ, ಆದಾಯದ ವಿಚಾರವನ್ನು ಕೆದಕಿ ಕೆದಕಿ ಕೇಳಬಾರದು. ವೈಯಕ್ತಿಕ ವಿಷಯ, ಮನೆಯಲ್ಲಿ ನಡೆದಿದ್ದ ಜಗಳ ಇಂಥ ವಿಷಯಗಳ ಬಗ್ಗೆ ಕೇಳಬಾರದು.
ಏಕೆಂದರೆ, ಕೆಲವರಿಗೆ ತಮ್ಮ ಆಸ್ತಿ ಪಾಸ್ತಿ ಬಗ್ಗೆ ಹೇಳುವುದು ಇಷ್ಟವಾದರೂ, ಕೆಲವರಿಗೆ ಆ ಬಗ್ಗೆ ಗುಟ್ಟು ಬಿಟ್ಟುಕ“ಡಲು ಇಷ್ಟವಾಗುವುದಿಲ್ಲ. ಹಾಗಾಗಿ ಪದೇ ಪದೇ ಆಸ್ತಿ, ಆದಾಯ, ಹಣಕಾಸಿನ ವಿಚಾರದ ಬಗ್ಗೆ ಕೇಳಬೇಡಿ. ಅಲ್ಲದೇ ವೈಯಕ್ತಿಕ ವಿಷಯ ಬಗ್ಗೆ ಅಧಿಕಪ್ರಸಂಗತನ ಬೇಡ.
ಧನ್ಯವಾದ ಹೇಳುವುದನ್ನು ಮರಿಯಬೇಡಿ: ನೀವು ನಿಮ್ಮ ಸಂಬಂಧಿಕರ ಮನೆಯಲ್ಲಿ ಉಳಿದು, ಹೋಗುವಾಗ, ಧನ್ಯವಾದ ತಿಳಿಸಿ. ಯಾವುದೇ ಕಾರಣಕ್ಕೂ ಸಂಬಂಧಿಕರಿಗೆ ತಿಳಿಸದೇ ಮನೆಯಿಂದ ಹೋಗುವ ತಪ್ಪು ಮಾಡಬೇಡಿ. ತಿಳಿಸಿ, ಧನ್ಯವಾದ ಹೇಳಿ ಹೋಗಿ. ಇಂಥ ಅಭ್ಯಾಸವೇ, ನಿಮ್ಮ ಗೌರವ ಹೆಚ್ಚಲು ಕಾರಣವಾಗುತ್ತದೆ.




