Chanakya Neeti: ಚಾಣಕ್ಯರು ಯಾವ ರೀತಿ ಆರ್ಥಿಕಾಗಿ ಬಲವಾಗಬೇಕು, ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು, ವಧು- ವರ ಹುಡುಕುವಾಗ ಯಾವ ವಿಷಯ ಗಮನದಲ್ಲಿರಿಸಬೇಕು ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಕೆಲ ವಾತಾವರಣವಿರುವ ಮನೆಗಳು ಸ್ಮಶಾನಕ್ಕೆ ಸಮ ಎಂದಿದ್ದಾರೆ. ಹಾಗಾದ್ರೆ ಎಂಥ ವಾತಾವರಣವಿರುವ ಮನೆ ಸ್ಮಶಾನಕ್ಕೆ ಸಮ ಅಂತಾ ತಿಳಿಯೋಣ ಬನ್ನಿ..
ಶುಭಕಾರ್ಯ ಮಾಡದ ಮನೆ: ಮನೆ ಎಂದಮೇಲೆ ಅದರಲ್ಲೂ ಹಿಂದೂಗಳ ಮನೆ ಎಂದಮೇಲೆ, ಅಲ್ಲಿ ಶುಭಕಾರ್ಯಗಳು ನಡೆಯುತ್ತಲೇ ಇರಬೇಕು. ಅಂದ್ರೆ ಬರೀ ಮುಂಜಿ, ಮದುವೆ, ಗೃಹಪ್ರೇವಶ, ನಾಮಕರಣ ಅಲ್ಲಾ. ಪೂಜೆ, ಹೋಮ- ಹವನ ಇತ್ಯಾದಿಗಳು ಕೂಡ ಶುಭಕಾರ್ಯಗಳೇ. ಇವುಗಳನ್ನು ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗುತ್ತದೆ.
ಆದರೆ ಯಾವ ಮನೆಯಲ್ಲಿ ಶುಭಕಾರ್ಯಗಳು, ಪೂಜೆಗಳು ನಡೆಯುವುದಿಲ್ಲವೋ, ಅಂಥ ಮನೆಗಳು ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು. ಏಕೆಂದರೆ, ಭಕ್ತಿ ಇಲ್ಲದ ಜನ, ಪೂಜೆ, ಶುಭಕಾರ್ಯ ನಡೆಯದ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಜೋರಾಗಿರುತ್ತದೆ. ಹಾಗಾಗಿ ಅಂಥ ಮನೆ ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು.
ಪೂಜೆ ಇಲ್ಲದ ಮನೆ: ಇದೇ ರೀತಿ ಪ್ರತಿದಿನ ಯಾವ ಮನೆಯಲ್ಲಿ ಪೂಜೆ ಮಾಡುವುದಿಲ್ಲವೋ, ಯಾವ ಮನೆಯಲ್ಲಿ ಭಕ್ತಿ ಇರುವ ಮನುಷ್ಯರಿರುವುದಿಲ್ಲವೋ, ಅಂಥ ಮನೆ ಕೂಡ ಸ್ಮಶಾನಕ್ಕೆ ಸಮ. ಏಕೆಂದರೆ, ದೇವರ ಮೇಲೆ ನಂಬಿಕೆ, ಭಕ್ತಿ, ಪೂಜೆ ಇಲ್ಲದ ಮನೆಯಲ್ಲಿ ವಾಸಿಸುವ ಜನರಿಗೆ ಹೆಚ್ಚು ಮಾನಸಿಕ ಖಿನ್ನತೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಅಲ್ಲಿ ವಾಸಿಸುವ ಜನ, ಬದುಕಿದ್ದು ಉಪಯೋಗವಿಲ್ಲದಂತಿರುತ್ತಾರೆ.
ಗುರು- ಹಿರಿಯರನ್ನು ಗೌರವಿಸದ ಮನೆ: ಯಾವ ಮನೆಯಲ್ಲಿ ಗುರು ಹಿರಿಯರನ್ನು ಗೌರವಿಸುವುದಿಲ್ಲವೋ, ಯಾವ ಮನೆಯಲ್ಲಿ ತಂದೆ ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕ“ಳ್ಳುವುದಿಲ್ಲವೋ ಅಂಥ ಮನೆ ಕೂಡ ಸ್ಮಶಾನಕ್ಕೆ ಸಮವಾಗಿರುತ್ತದೆ. ಏಕೆಂದರೆ, ಅಲ್ಲಿ ಸಂಬಂಧ ಸರಿಯಾಗಿ ಇರುವುದಿಲ್ಲ. ಮತ್ತು ಯಾವ ಮನೆಯಲ್ಲಿ ಸಂಬಂಧ ಸರಿ ಇರುವುದಿಲ್ಲವೋ, ಅಂಥ ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ. ಮನಸ್ಸಿಗೆ ನೋವಾಗುವಂಥ ಮಾತು, ನಡುವಳಿಕೆ, ಹೀಯಾಳಿಸುವುದು ಇದೆಲ್ಲ ಇರುವ ಮನೆಯಲ್ಲಿ ಮಾನಸಿಕ ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಇಂಥ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.