Chanakya Neeti : ಯಾರನ್ನಾದರೂ ಮನೆಗೆ ಕರೆದು ಆತಿಥ್ಯ ಮಾಡೋದು ಉತ್ತಮ ಸಂಂಗತಿ. ಆದರೆ ನಾವು ಕೆಲವರನ್ನು ಮಾತ್ರ ಮನೆಗೆ ಕರಿಯಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಯಾಕೆ..? ಮತ್ತು ಎಂಥವರನ್ನು ಮನೆಗೆ ಕರಿಯಬಾರದು ಅಂತಾ ತಿಳಿಯೋಣ ಬನ್ನಿ..
ನಾಸ್ತಿಕರು: ದೇವರ ಮೇಲೆ ಭಕ್ತಿ ಇಲ್ಲದವನ ಮನಸ್ಸು ಎಂದಿಗೂ ಪರಿಶುದ್ಧವರಿಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು. ಏಕೆಂದರೆ ದೇವರ ಮೇಲೆ ಭಕ್ತಿ ಇರುವವನು ಬೇಡದ ಕೆಲಸ ಮಾಡುವ ಮುನ್ನ 100 ಬಾರಿ ಯೋಚಿಸುತ್ತಾನೆ. ಆದರೆ ನಾಸ್ತಿಕನಿಗೆ ಯಾವ ಕೆಲಸ ಮಾಡುವಾಗಲೂ ಹೆದರಿಕೆಯಾಗುವುದಿಲ್ಲ. ಅಂಥವರನ್ನು ಕರೆದು ಆತಿಥ್ಯ ಮಾಡುವುದು ಉತ್ತಮವಲ್ಲ ಅಂತಾರೆ ಚಾಣಕ್ಯರು.
ಮಾತಿನಿಂದ ಬೇರೆಯವರ ಮನಸ್ಸನ್ನು ನೋಯಿಸುವವರು: ಮಾತಾಡಿದರೆ ಸಾಕು, ಅದರಲ್ಲಿ ಕಹಿಯೇ ತುಂಬಿರುವವರು. ಇನ್ನ“ಬ್ಬರ ಬಗ್ಗೆ ಕೀಳು ಭಾವನೆ ಇರುವವರು. ಬರೀ ಇನ್ನ“ಬ್ಬರನ್ನು ಹೀಯಾಳಿಸುವವರು. ಯಾರ ಬಗ್ಗೆಯೂ ಉತ್ತಮ ಭಾವನೆ ಇರದೇ, ಎಲ್ಲರನ್ನೂ ಬೈಯ್ಯುವವರು. ಇಂಥವರನ್ನು ಮನೆಗೆ ಕರೆದು ಆತಿಥ್ಯ ಮಾಡುವ ಬದಲು ದೂರವಿಡುವುದೇ ಉತ್ತಮ ಅಂತಾರೆ ಚಾಣಕ್ಯರು.
ಲಂಚ ಪಡೆದು ಜೀವನ ಮಾಡುವವರು: ಲಂಚ ಎಂದರೆ, ಪಾಪದವರ ದುಡ್ಡು. ಉಚಿತವಾಗಿ ಮಾಡಿಕ“ಡಬೇಕಾದ ಕೆಲಸವನ್ನು, ಡಬಲ್ ಹಣ ಪಡೆದು ಕೆಲಸ ಮಾಡುವುದನ್ನೇ ಲಂಚ ಎನ್ನುತ್ತಾರೆ. ಕಷ್ಟಪಟ್ಟು ದುಡಿದವರ ದುಡ್ಡನ್ನು ಪಡೆದು, ಅದರಿಂದ ಜೀವನ ಮಾಡುವ ಮನಸ್ಸುಳ್ಳವರನ್ನು ಸದಾ ದೂರವಿಡಿ ಅಂತಾರೆ ಚಾಣಕ್ಯರು.
ಮೋಸಗಾರರು: ಮೋಸ ಮಾಡುವ ಗುಣವುಳ್ಳವರನ್ನು ಹತ್ತಿರಕ್ಕೂ ಸೇರಿಸಬಾರದು. ಇಂಥವರು ಆಡುವ ಮಾತಿನಿಂದಲೇ, ಇವರ ಗುಣವನ್ನು ಅಳಿಯಬಹುದು.
ಬದುಕಲು ಕೆಟ್ಟ ಕೆಲಸ ಮಾಡುವವರು: ದರೋಡೆ, ಹತ್ಯೆ, ಕಳ್ಳತನ, ವೈಶ್ಯಾವಾಟಿಕೆ ಸೇರಿ ಹಲವು ಕೆಲಸಗಳು ಅಡ್ಡದಾರಿ ಕೆಲಸಗಳಾಗಿದೆ. ಇಂಥ ಕೆಲಸಗಳನ್ನು ಇಂದಿನ ಜನ ಮಾಡರ್ನ್ ಆಗಿಯೇ ಮಾಡುತ್ತಾರೆ. ಕಳ್ಳರು ಸ್ಮಾರ್ಟ್ ಆಗಿಯೇ ಕಾರ್ಯನಿರ್ವಹಿಸುತ್ತಾರೆ. ಇಂಥವರಿಗೆ ಆತಿಥ್ಯ ಮಾಡಿದರೆ, ಅವರ ಪಾಪಕರ್ಮದ ಭಾಗ ನೀವಾಗುತ್ತೀರಿ ಅಂತಾರೆ ಚಾಣಕ್ಯರು.