Wednesday, October 15, 2025

Latest Posts

Chanakya Neeti: ಜೀವನ ಈ ರೀತಿಯಾಗಿದ್ದರೇ ಚೆಂದ ಎನ್ನುತ್ತಾರೆ ಚಾಣಕ್ಯರು

- Advertisement -

Chanakya Neeti: ಚಾಣಕ್ಯ ನೀತಿಯಲ್ಲಿ ಜೀವನದ ಹಲವಾರು ನಿಯಮಗಳನ್ನು ಹೇಳಲಾಗಿದೆ. ಅದರಲ್ಲಿ ಜೀವನ ಹೇಗಿದ್ದರೆ ಉತ್ತಮ ಅಂತಲೂ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ಜೀವನ ಹೇಗಿದ್ದರೆ ಚೆಂದ ಎಂದು ತಿಳಿಯೋಣ ಬನ್ನಿ..

ಜೀವನದಲ್ಲಿ ಸುಖ ದುಃಖಗಳೆರಡೂ ಇರಬೇಕು. ಚಾಣಕ್ಯರ ಪ್ರಕಾರ ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಬರೀ ಸುಖವನ್ನೇ ಎಂದಿಗೂ ಬಯಸಬಾರದು. ಬಂದ ದುಃಖವನ್ನು ಎದುರಿಸುವ ಶಕ್ತಿ ಇರಬೇಕು. ಆಗಲೇ ನಿಮಗೆ ಜೀವಿಸಲು ಉತ್ಸಾಹ ಬರುತ್ತದೆ. ಬರೀ ಸುಖವೇ ಇದ್ದರೆ, ದುಃಖವನ್ನು ಎದುರಿಸುವ ಶಕ್ತಿ ಬರುವುದಿಲ್ಲ. ಹಾಗಾಗಿಯೇ ಮಕ್ಕಳಿಗೆ ಬಡತನ ಎಂದರೇನೆಂದು ತಿಳಿದಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಬಡತನವೇನೆಂದು ತಿಳಿದಿದ್ದರೆ, ಮುಂದೆ ಅಪ್ಪ- ಅಮ್ಮನಿಗೆ ಕಷ್ಟ ಬಂದಾಗ, ಆ ಕಷ್ಟದ ಬೆಲೆ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ಜೀವನದಲ್ಲಿ ಸುಖ ದುಃಖವೆರಡೂ ಇರಬೇಕು ಅಂತಾರೆ ಚಾಣಕ್ಯರು.

ಇನ್ನು ಎರಡನೇಯದಾಗಿ ನಮ್ಮ ವರ್ತನೆ ಉತ್ತಮವಾಗಿರಬೇಕು. ನಾವು ಹೇಗೆ ಇರುತ್ತೇವೆ ಎನ್ನುವುದರ ಮೇಲೆ ನಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಶಿಸ್ತು, ಉತ್ತಮ ನಡುವಳಿಕೆ ಇವೆಲ್ಲವೂ ನಮ್ಮ ಜೀವನದಲ್ಲಿದ್ದರೆ, ನಮಗೆ ಎಲ್ಲೆಡೆ ಗೌರವ ಸಿಗುತ್ತದೆ.

ಮೂರನೇಯದಾಗಿ ಹಣವಿದ್ದರೆ ಗೌರವ ಹೆಚ್ಚು. ನಮ್ಮ ಬಳಿ ಹಣವಿದ್ದರೆ ನಮಗೆ ಗೌರವ ಹೆಚ್ಚು ಅನ್ನೋದು ಈಗಾಗಲೇ ಹಲವರಿಗೆ ಅರ್ಥವಾಗಿರುತ್ತದೆ. ಹಾಗಾಗಿಯೇ ನಿಯತ್ತು, ಬುದ್ಧಿವಂತಿಕೆಯಿಂದ ಹಣ ಸಂಪಾದಿಸಿದರೆ, ಸಮಾಜದಲ್ಲಿ ಗೌರವವೂ ಸಿಗುತ್ತದೆ. ಸ್ನೇಹಿತರು, ಸಂಬಂಧಿಕರು ಹಣವಂತರಿಗೆ ಹೆಚ್ಚು ಅನ್ನೋ ಹಾಗೆ, ಮನುಷ್ಯನ ಬಳಿ ಹಣವಿರುವವರೆ ಮಾತ್ರ, ಸ್ನೇಹಿತರು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಅನ್ನೋದು ಕಹಿ ಸತ್ಯ.

ನಾಲ್ಕನೇಯದಾಗಿ ನಮ್ಮ ಮಾತು ಸರಿಯಾಗಿರಬೇಕು. ಮಾತಿನಲ್ಲಿ ಹಿತ ಮತ್ತು ಹಿಡಿತವಿದ್ದಲ್ಲಿ ಮಾತ್ರ, ಜನ ನಿಮ್ಮನ್ನು ಇಷ್ಟ ಪಡುತ್ತಾರೆ. ಮಾತಲ್ಲಿ ವಿನಮೃತೆ ಇಲ್ಲವೆಂದಲ್ಲಿ ನಿಮ್ಮನ್ನು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಸಮಾಜದಲ್ಲಿ ಗೌರವ ಸಿಗಲು ಹಣ ಹೇಗೆ ಮುಖ್ಯವೋ, ಹಾಗೆ ನಮ್ಮ ಮಾತನಾಡುವ ರೀತಿ ಕೂಡ ಮುಖ್ಯವಾಗಿರುತ್ತದೆ.

- Advertisement -

Latest Posts

Don't Miss