Chanakya Neeti: ಚಾಣಕ್ಯರು ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮದುವೆ ವಿಷಯ, ಹಣದ ವಿಷಯ, ಕೆಲಸ ಇತ್ಯಾದಿ ವಿಷಯಗಳ ಬಗ್ಗೆ ಜೀವನ ನಡೆಸುವ ರೀತಿಯನ್ನು ವಿವರಿಸಿದ್ದಾರೆ. ಅದೇ ರೀತಿ ಕೆಲವು ವಸ್ತುಗಳು ಜೀವನದಲ್ಲಿ ಎಷ್ಟಿದ್ದರೂ ಕಡಿಮೆ ಎನ್ನಿಸುತ್ತದೆ. ಎಷ್ಟಿದ್ದರೂ ಮತ್ತೂ ಬೇಕು ಬೇಕು ಎನ್ನಿಸುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಹಣ. ಹಣದ ಬಗ್ಗೆ ಎಲ್ಲರಿಗೂ ಗೊತ್ತು. ಎಷ್ಟಿ್ದರೂ ಸಾಾಲ ಎಂಬ ವಾಕ್ಯ ನೋಡಿದಾಗಲೇ ನಿಮಗೆ ಹಣ ನೆನಪಿಗೆ ಬಂದಿರುತ್ತದೆ. ಹೌದು ಚಾಣಕ್ಯರು ಹೇಳುವ ಪ್ರಕಾರ, ಮನುಷ್ಯನ ಬಳಿ ಎಷ್ಟು ದುಡ್ಡಿದ್ದರೂ, ಮತ್ತು ಬೇಕು ಬೇಕು ಎನ್ನಿಸುತ್ತದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಶ್ರೀಮಂತರ ಹಣ, ಅಂತಸ್ತು ಕಂಡು, ಇವರೆಷ್ಟು ಶ್ರೀಮಂತರು. ಇವರ ಬಳಿ ಬೇಕಾದಷ್ಟು ದುಡ್ಡಿರಬೇಕು.. ಇವರು ಆ ದುಡ್ಡನ್ನೆಲ್ಲ ಏನು ಮಾಡುತ್ತಾರೆ..? ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ. ಆದರೆ ಶ್ರೀಮಂತನಿಗೆ ನಾನು ಇಷ್ಟು ಶ್ರೀಮಂತನಾಗಿರುವುದು ಸಾಲುವುದಿಲ್ಲ. ಇನ್ನೂ ಶ್ರೀಮಂತಿಕೆ ಬೇಕು ಎನ್ನಿಸುತ್ತದೆ. ಹಾಗಾಗಿಯೇ ಚಾಣಕ್ಯರು ಹಣ ಎಷ್ಟಿದ್ದರೂ ಮತ್ತೂ ಬೇಕು ಮತ್ತೂ ಬೇಕು ಎನ್ನಿಸುತ್ತದೆ ಎಂದು ಹೇಳಿದ್ದಾರೆ.
ಆಯಸ್ಸು. ನೀವು ಯಾರಾದರೂ ಬೇಸರದಲ್ಲಿದ್ದಾಗ ಅವರು ಹೇಳುವ ಮಾತು ಕೇಳಿ, ಸಾವು ಬರಲಿ ಎಂದು ಆ ಕ್ಷಣ ಅವರು ಬಯಸುತ್ತಾರೆ. ಆದರೆ ಅವರಿಗೇನಾದರೂ ಆರೋಗ್ಯ ಸಮಸ್ಯೆ ಇದೆ ಅಂತಾದಾಗ, ಅಥವಾ ಸಣ್ಣ ಜ್ವರ ಬಂದಾಗ, ಬೇಗ ಬೇಗ ಅದನ್ನು ವಾಸಿ ಮಾಡಿಕೊಳ್ಳಲು ಬಯಸುತ್ತಾರೆ. ಯಾಕಂದ್ರೆ ಯಾವ ಮನುಷ್ಯನು ನಿಜವಾಗಿಯೂ ಸಾಯಲು ಬಯಸುವುದಿಲ್ಲ. ಸಾವೆಂದರೆ, ಎಲ್ಲ ಮನುಷ್ಯರಿಗೂ ಭಯ. ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಸಾವಿಗೆ ಅಂಜುತ್ತಾರೆ.
ಕಾಮ. ಪ್ರತೀ ಪುರುಷ ಅಥವಾ ಪ್ರತೀ ಮಹಿಳೆ ಅಲ್ಲದಿದ್ದರೂ, ನಮ್ಮ ನಿಮ್ಮ ಸುತ್ತ ಮುತ್ತಲಿರುವ ಎಷ್ಟೋ ಜನ, ಎಲ್ಲ ಹೆಣ್ಣು ಮಕ್ಕಳನ್ನೂ ಕಾಮದ ಕಣ್ಣಿನಿಂದಲೇ ನೋಡುತ್ತಾರೆ. ಮನೆಯಲ್ಲಿ ಪತ್ನಿ ಇದ್ದರೂ, ಹೊರಗಿನ ಹೆಣ್ಣಿನ ಮೇಲೆ ಕಾಮದ ಭಾವನೇ ಬಂದೇ ಬರುತ್ತದೆ.
ಊಟ. ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಅವನ ದೇಹಕ್ಕೆ ಶಕ್ತಿ ತುಂಂಬುವುದೇ ಆಹಾರ. ಒಮ್ಮೆಗೆ ಎಲ್ಲ ಊಟವನ್ನು ತಿಂದು ಬಿಡಲು ಅಸಾಧ್ಯವಾದರೂ ಕೂಡ, ಹಸಿವು ಶುರುವಾದಾಗ, ನಮಗೆ ರುಚಿಕರ ಆಹಾರದ ನೆನಪು ಬಂದೇ ಬರುತ್ತದೆ. ಹಾಗಾಗಿ ಊಟ ಎಷ್ಟಿದ್ದರೂ ಮತ್ತೂ ಬೇಕು ಎನ್ನಿಸುತ್ತದೆ.