Friday, July 18, 2025

Latest Posts

Chanakya Neeti : ಹಣಕ್ಕಿಂತಲೂ ಈ ವಿಚಾರಗಳು ಮುಖ್ಯ ಅಂತಾರೆ ಚಾಣಕ್ಯರು

- Advertisement -

Chanakya Neeti : ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಹಣಕ್ಕಿಂತಲೂ ನಮ್ಮ ಜೀವನದಲ್ಲಿ ಕೆಲವು ವಿಚಾರಗಳು ಮುಖ್ಯವಾಗಿರುತ್ತದೆ ಎಂದಿದ್ದಾರೆ. ಹಾಗಾದ್ರೆ ಆ ವಿಚಾರಗಳಾದರೂ ಏನು ಅಂತಾ ತಿಳಿಯೋಣ ಬನ್ನಿ..

ಸ್ವಾಭಿಮಾನ: ಹಣ ಇದೆ ಎಂದು ನೀವು ಯಾರ ಜತೆಯೂ ಸ್ವಾಭಿಮಾನ ಬಿಟ್ಟು ಇರಲು ಸಾಧ್ಯವಿಲ್ಲ. ಹಾಗಿದ್ದರೆ, ನಿಮಗೆ ಯಾರೂ ಬೆಲೆ ನೀಡುವುದಿಲ್ಲ. ಹಣಕ್ಕಾಗಿ ಎಂದಿಗೂ ಸ್ವಾಭಿಮಾನ ಮಾರಿಕ“ಳ್ಳಬೇಡಿ ಅಂತಾರೆ ಚಾಣಕ್ಯರು.

ಆರೋಗ್ಯ: ಆರೋಗ್ಯವೇ ಭಾಗ್ಯ ಎನ್ನುವುದನ್ನು ನೀವು ಕೇಳಿರಬಹುದು. ಹಣದಿಂದ ನೀವು ಆರೋಗ್ಯ ಖರೀದಿಸಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಆರೋಗ್ಯವಾಗಿರಬೇಕು ಅಂದ್ರೆ, ನಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕ“ಳ್ಳಬೇಕು. ಆ ಶಿಸ್ತೇ ನಮ್ಮ ಆರೋಗ್ಯ ವೃದ್ಧಿಸುವಂತೆ ಮಾಡುತ್ತದೆ.

ಸಂಬಂಧ: ಹಣಕ್ಕಿಂತ ಸಂಬಂಧವೇ ಮೇಲು. ಈ ವಿಷಯವನ್ನು ಚಾಣಕ್ಯರು ಅದ್ಭುತವಾಗಿ ವಿವರಿಸಿದ್ದಾರೆ. ಅದೇನೆಂದರೆ, ಮನುಷ್ಯನ ಬಳಿ ಎಷ್ಟೇ ಹಣವಿರಬಹುದು. ಅವರು ಶ್ರೀಮಂತನೇ ಆಗಿರಬಹುದು. ಆದರೆ ಅವನು ಪ್ರೀತಿ, ವಾತ್ಸಲ್ಯ, ಮಮತೆ, ಕಾಳಜಿ, ನೆಮ್ಮದಿ ಬಿಟ್ಟು ಬರೀ ಹಣದ ಹಿಂದೆ ಹೋಗಲಾಗುವುದಿಲ್ಲ. ಹಾಗಾಗಿ ಜೀವನದ ಎಲ್ಲಾ ಆನಂದವನ್ನು ಅನುಭವಿಸಲು ಅವನಿಗೆ ಹಣದ ಜತೆ ಸಂಬಂಧವೂ ಮುಖ್ಯವಾಗಿರುತ್ತದೆ.

ಧರ್ಮ: ಹಣಕ್ಕಿಂತಲೂ ಧರ್ಮ ಮೇಲು ಅಂತಾರೆ ಚಾಣಕ್ಯರು. ಇಂದಿನ ಕಾಲದಲ್ಲಿ ಸ್ವಲ್ಪ ಹಣದ ಆಸೆ ತೋರಿಸಿದರೆ ಸಾಕು, ಕೆಲವರು ತಮ್ಮ ಧರ್ಮ, ನೀತಿ, ನಿಯಮ ಎಲ್ಲವನ್ನೂ ಮರೆತು, ಬೇರೆ ಧರ್ಮಕ್ಕೆ ಮತಾಂತರವಾಗಲು ಹೋಗುತ್ತಾರೆ. ಆದರೆ ಮತಾಂತರವಾದ ಬಳಿಕವೇ ಅವರಿಗೆ ತಮ್ಮ ಧರ್ಮದ ಬಗೆಗಿನ ಸತ್ಯ ತಿಳಿಯುತ್ತದೆ. ಆಗ ಸಮಯ ಮೀರಿರುತ್ತದೆ.

- Advertisement -

Latest Posts

Don't Miss