Chanakya Neeti: ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ಶ್ರೀಮಂತರಾಗಬೇಕು ಅಂದ್ರೆ ನಮ್ಮ ಜೀವನದಲ್ಲಿ ಎಂಥ ಗುಣಗಳನ್ನು ಅಳವಡಿಸಿಕ~`ಳ್ಳಬೇಕು ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ದಾನ ಮಾಡಿ: ನೀವು ದುಡಿದ ಹಣದಲ್ಲಿ ಸಣ್ಣ ಭಾಗವಾದರೂ ಸರಿ, ದಾನ ಮಾಡಿ. ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ಓರ್ವ ಉತ್ತಮ ಮನಸ್ಸಿರುವ, ದಾನ ಮಾಡುವ ಸ್ವಭಾವವಿರುವರಿಗೆ ದೇವರೇ ಸಹಾಯ ಮಾಡುತ್ತಾನೆ ಅಂತಾ ಹಿರಿಯರು ಹೇಳುತ್ತಾರೆ. ಹಾಗಾಗಿ ಅವಶ್ಯಕತೆ ಇರುವವರಿಗೆ ದಾನ ಮಾಡುವ ಸ್ವಭಾವ ನಿಮ್ಮದಾದರೆ, ಶ್ರೀಮಂತರಾಗುವ ಯೋಗವೂ ದೇವರು ನಿಮಗೆ ನೀಡುತ್ತಾನೆ.
ಪ್ರಾಮಾಣಿಕರಾಗಿರಿ: ಜೀವನದಲ್ಲಿ ಯಾರು ಪ್ರಾಮಾಣಿಕರಾಗಿ ಇರುತ್ತಾರೋ, ಅಂಥವರಿಗೆ ಅದೃಷ್ಟ ದಕ್ಕುತ್ತದೆ. ಆ ಪ್ರಾಮಾಣಿಕತೆಯೇ ಎಷ್ಟೋ ಸಮಸ್ಯೆಗಳಿಂದ ಅವರನ್ನು ಕಾಪಾಡುತ್ತದೆ. ಪ್ರಾಮಾಣಿಕರಿಗೆ ಸಮಯ ಹೆಚ್ಚಾದರೂ, ಮುಂದೆ 1 ದಿನ ನೆಮ್ಮದಿ ಸಿಕ್ಕೇ ಸಿಗುತ್ತದೆ.
ಜ್ಞಾನವಂತರಾಗಿರಿ: ನೀವು ಎಷ್ಟು ಜ್ಞಾನವಂತರಾಗಿರುತ್ತೀರೋ ಅಷ್ಟು ಉತ್ತಮ. ನಾವು ಸಾಯುವ ತನಕ ಕಲಿಯುವುದು ಇದ್ದೇ ಇರುತ್ತದೆ. ನಮಗೆ ವಯಸ್ಸು ಹೆಚ್ಚಾದಷ್ಟು, ಅನುಭವವೂ ಹೆಚ್ಚಾಗುತ್ತದೆ. ಆದ್ದರಿಂದ ನಾವು ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು. ಹಲವು ಶ್ರೀಮಂತರು, ಎಲ್ಲದರ ಬಗ್ಗೆ ಹೆಚ್ಚೆಚ್ಚು ಮಾಹಿತಿ ಪಡೆಯಲು ಇಚ್ಛಿಸುತ್ತಾರೆ. ಹಾಗಾಗಿ ಎಲ್ಲ ಕಾಲದಲ್ಲೂ ಅವರು, ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದ ಇದ್ದು, ತಮ್ಮ ಶ್ರೀಮಂತಿಕೆಯನ್ನು ಕಾಪಾಡಕ“ಳ್ಳುತ್ತಾರೆ.
ಧಾರ್ಮಿಕ ಗ್ರಂಥಗಳನ್ನು ಓದಿ: ಧಾರ್ಮಿಕ ಗ್ರಂಥಗಳನ್ನು ಓದಬೇಕು ಮತ್ತು ನಮ್ಮ ಧರ್ಮಪಾಲನೆ ಮಾಡಬೇಕು. ಏಕೆಂದರೆ ಯಾರು ಧರ್ಮಪಾಲನೆ ಮಾಡುತ್ತಾರೋ, ಅಂಥವರನ್ನು ಧರ್ಮ ಕಾಪಾಡುತ್ತದೆ. ಅಲ್ಲದೇ ಧಾರ್ಮಿಕ ಗ್ರಂಥದಲ್ಲಿ ಜೀವನಸಾರವನ್ನು ಅರ್ಥಮಾಡಿಕ“ಳ್ಳುವ ವಿಷಯವಿರುತ್ತದೆ. ಇದರಿಂದಲೇ ನಮ್ಮ ಜ್ಞಾನ ಹೆಚ್ಚುತ್ತದೆ.
ಇಂಥವರ ಸಹವಾಸ ಮಾಡಿ: ನಾವು ಸದಾಕಾಲ ಶ್ರೀಮಂತಿಕೆಯ ಬಗ್ಗೆ, ಉಳಿತಾಯದ ಬಗ್ಗೆ, ಬಂಡವಾಳ ಹೂಡಿಕೆಯ ಬಗ್ಗೆ ಮಾತನಾಡುವ, ಪ್ರಾಮಾಣಿಕವಾಗಿ ಜೀವನ ಮಾಡುವಂಥ ಜನರ ಜತೆ ಇರಬೇಕು. ಇದರಿಂದ ಆರ್ಥಕವಾಗಿ ನಾವು ಸಬಲರಾಗುತ್ತೇವೆ. ಅದೇ ರೀತಿ ಸಜ್ಜನ ಗುಣವುಳ್ಳವರ ಸಹವಾಸದಿಂದ ನಾವು ಉದ್ಧಾರವಾಗುತ್ತೇವೆ.