Saturday, December 6, 2025

Latest Posts

Chanakya Neeti: ಈ 3 ಸ್ಥಳಗಳು ಸ್ಮಶಾನಕ್ಕೆ ಸಮ, ಇಂಥ ಜಾಗದಲ್ಲಿ ಎಂದಿಗೂ ಇರಬೇಡಿ

- Advertisement -

Chanakya Neeti: ಚಾಣಕ್ಯರು ಕೆಲವು ಸ್ಥಳಗಳನ್ನು ಸ್ಮಶಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ, ಆ ಜಾಗದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ, ನಮ್ಮ ಆರ್ಥಿಕ ಪರಿಸ್ಥಿತಿ, ಅರ್ಹತೆ, ಜೀವನ ಎಂದಿಗೂ ಅಭಿವೃದ್ಧಿಯಾಗುವುದಿಲ್ಲ ಎಂದಿದ್ದಾರೆ. ಹಾಗಾದ್ರೆ ಯಾವ ಸ್ಥಳವನ್ನು ಚಾಣಕ್ಯರು ಸ್ಮಶಾನ ಎಂದಿದ್ದಾರೆ, ಏಕೆ ಎಂದಿದ್ದಾರೆ ಅಂತಾ ತಿಳಿಯೋಣ ಬನ್ನಿ..

ಧಾರ್ಮಿಕ ಕಾರ್ಯ ನಡೆಯದ ಮನೆ: ಮನೆಯಲ್ಲಿ ವರ್ಷಕ್ಕೆ 1 ಬಾರಿಯಾದರೂ ಪೂಜೆ, ಪುನಸ್ಕಾರ, ಅಥವಾ ಯಾವುದಾದರೂ 1 ಕಾರ್ಯಕ್ರಮ ನಡೆಯಲೇಬೇಕು. ಹೆಚ್ಚು ಹಣ ಖರ್ಚು ಮಾಡದಿದ್ದರೂ, ತಕ್ಕ ಮಟ್ಟಿಗಾದರೂ ಕೆಲವರಿಗೆ ಅನ್ನದಾನ ಮಾಡಿಯಾದರೂ ಧಾರ್ಮಿಕ ಕಾರ್ಯ ಮಾಡಬೇಕು. ಯಾವ ಮನೆಯಲ್ಲಿ ವರ್ಷದಲ್ಲಿ 1 ಬಾರಿಯೂ ಪೂಜೆ ನಡೆಯುವುದಿಲ್ಲವೋ, ಅಂಥ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.

ಪೂಜೆ ಮಾಡದ, ಭಕ್ತಿ ಇರದ ಜನರಿರುವ ಮನೆ: ಪ್ರತೀ ಹಿಂದೂಗಳ ಮನೆಯಲ್ಲಿ ಪ್ರತಿದಿನ ಪೂಜೆಯಾಗಬೇಕು. ಮನೆ ಎಲ್ಲ ಗುಡಿಸಿ, ಸ್ವಚ್ಛ ಮಾಡಿ. ನಾಲ್ಕು ಹೂವು ತಂದು, ಊದುಬತ್ತಿ ಹಚ್ಚಿ, ದೀಪ ಬೆಳಗಿ, ದೇವರಿಗೆ 1 ಕೈ ಮುಗಿದರೂ, ಅದರಲ್ಲಿ ಭಕ್ತಿ ಎನ್ನುವುದಿದ್ದರೆ, ಅದು ಪೂಜೆಯೇ. ಅಷ್ಟು ಮಾಡಲಾಗದ. ಭಕ್ತಿಯೇ ಇಲ್ಲದ ಜನರಿರುವ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.

ಗುರು-ಹಿರಿಯರನ್ನು ಗೌರವಿಸದ ಮನೆ: ಯಾವ ಮನೆಯಲ್ಲಿ ಗುರು ಹಿರಿಯರಿಗೆ ಗೌರವವಿರುವುದಿಲ್ಲವೋ, ಅಂಥ ಮನೆ ಸ್ಮಶಾನಕ್ಕೆ ಸಮವಂತೆ. ಯೋಗ್ಯತೆ ಮೀರದಿದ್ದರೂ, ಯೋಗ್ಯತೆ ಇರುವಷ್ಟು ಮನೆಯ ಜವಾಬ್ದಾರಿ ವಹಿಸಿ, ಗುರು ಹಿರಿಯರ ಕಷ್ಟಕ್ಕೆ ಸ್ಪಂದಿಸುವುದು ಕೂಡ ಗೌರವಿಸಿದಂತೆ.

- Advertisement -

Latest Posts

Don't Miss