Wednesday, September 11, 2024

Latest Posts

ಚಾಣಕ್ಯನ ಪ್ರಕಾರ ಇಂತಹ ಜನರು ಬಡತನದಲ್ಲಿ ಹುಟ್ಟಿದರೂ ಸಹ ಇವರ ಮೇಲೆ ಲಕ್ಷ್ಮಿಯ ಅಪಾರ ಕೃಪೆ ಇರುತ್ತದೆ..!

- Advertisement -

Devotional:

ಚಾಣಕ್ಯ ನೀತಿಯ ಪ್ರಕಾರ, ಕೆಲ ಜನರಲ್ಲಿ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುವ ವಿಶೇಷ ಗುಣಗಳಿರುತ್ತವೆ ಎನ್ನಲಾಗಿದೆ. ಈ ಗುಣಗಳಿಂದಾಗಿ ಈ ಜನರು ಬಡತನದಲ್ಲಿ ಹುಟ್ಟಿದರೂ ಕೂಡ ಮುಂದೊಂದು ದಿನ ಅಪಾರ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ.

ಚಾಣಕ್ಯರು ಹಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಸಂಪತ್ತಿನ ಅಧಿದೆವತೆಯಾಗಿರುವ ಲಕ್ಷ್ಮಿ ಯಾರ ಮೇಲೆ ಪ್ರಸನ್ನಳಾಗುತ್ತಾಳೆ ಎಂಬುದನ್ನು ಚಾಣಕ್ಯರು ತನ್ನ ನೀತಿಯಲ್ಲಿ ವಿವರಿಸಿದ್ದಾರೆ. ಹಾಗೂ ಲಕ್ಷ್ಮಿದೇವಿಯು ಪ್ರಸ್ಸನಳಾಗುವುದಕ್ಕೆ ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಯಾರಲ್ಲೂ ಜೀವನ ಸಾಗಿಸಲು ಹಾಗುವುದಿಲ್ಲ, ಹಾಗೆಯೆ ಹಣವನ್ನು ಸರಿಯಾಗಿ ಬಳಕೆ ಮಾಡಿಲಕೊಳ್ಳದೆ ವ್ಯರ್ಥ ಮಾಡಿದರೆ ನಿಮ್ಮ ಉತ್ತಮ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ ಸದಾ ಸಂತೋಷ ಶ್ರೀಮಂತಿಕೆಯಿಂದ ಇರಲು ಸರಿಯಾದ ಮಾರ್ಗದಲ್ಲಿ ಹಣ ಸಂಪಾದಿಸಿ ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ .

ಚಾಣಕ್ಯ ನೀತಿಯ ಪ್ರಕಾರ, ತಾಯಿ ಲಕ್ಷ್ಮಿದೇವಿಯು ಇಷ್ಟಪಡುವಂತಹ ಗುಣಗಳನ್ನು ನೀವೂ ಹೊಂದಿದ್ದರೆ ಅಂತಹವರ ಮೇಲೆ ಖಂಡಿತವಾಗಿಯೂ ಲಕ್ಷ್ಮೀದೇವಿ ಕರುಣೆತೋರುತ್ತಾಳೆ ಎನ್ನಲಾಗಿದೆ. ಶ್ರದ್ಧೆಯುಳ್ಳವರು ಕಷ್ಟಪಟ್ಟು ದುಡಿಯುವವರ ಮೇಲೆ ತಾಯಿ ಲಕ್ಷ್ಮಿದೇವಿಯು ಖಂಡಿತವಾಗಿಯೂ ಕೃಪೆ ತೋರುತ್ತಾಳೆ. ಇಂತಹ ಜನರು ತಮ್ಮ ಜೀವನದಲ್ಲಿ ತಡವಾಗಿ ಯಶಸ್ಸನ್ನು ಪಡೆಯಬಹುದು, ಆದರೆ ಅವರ ಯಶಸ್ಸು ಖಂಡಿತ ಪಡೆಯುತ್ತಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಶ್ರೀಮಂತರಾಗುತ್ತಾರೆ. ಇಂತಹ ಜನರಿಗೆ ಅವರ ಶ್ರಮದ ಫಲವನ್ನು ತಾಯಿ ಲಕ್ಷ್ಮಿ ಖಂಡಿತವಾಗಿಯೂ ನೀಡುತ್ತಾಳೆ.

ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಜನರು ಹಾಗೂ ಯಾರಿಗೂ ಮೋಸ ಮಾಡದೆ ಇರುವ ಜನರೆಂದರೆ ಲಕ್ಷ್ಮಿದೇವಿಗೆ ಬಹಳ ಇಷ್ಟ, ಹಣ ಸಂಪಾದಿಸಲು ತಪ್ಪು ಮಾರ್ಗಗಳನ್ನು ಇಡಿದು ಕೊಳ್ಳ ದಿರುವಂಥಹ  ಜನರನ್ನು ಲಕ್ಷ್ಮಿದೇವಿಯು ಶ್ರೀಮಂತರನ್ನಾಗಿ ಮಾಡುತ್ತಾಳೆ. ಇದಲ್ಲದೆ ಇಂತಹ ಜನರಿಗೆ ಅವರ ಒಳ್ಳೆಯ ಕಾರ್ಯಗಳಿಂದ ಸಮಾಜದಲ್ಲಿ ಗೌರವವೂ ಸಿಗುತ್ತದೆ. ಬಡವರಿಗೆ ಸಹಾಯ ಮಾಡುವ ಜನರಮೇಲೆ ಲಕ್ಷ್ಮೀದೇವಿಯು ಖಂಡಿತ ಕೃಪೆ ತೋರುತ್ತಾಳೆ ಇಂಥಹವರಿಗೆ ಎಂದೂ ಹಣದ ಕೊರತೆ ಎದುರಾಗುವುದಿಲ್ಲ, ಹೀಗಾಗಿ ತಾಯಿ ಲಕ್ಷ್ಮಿ ಅಂತಹವರಿಗೆ ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ, ಹಾಗೂ ತಮ್ಮ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ. ತಮ್ಮ ಜ್ಞಾನದಿಂದಾಗಿ, ಅವರು ಘನತೆ ಗೌರವವನ್ನು ಪಡೆಯುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ.

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?

​ ಮಹಾವಿಷ್ಣುವಿನ ಕೂರ್ಮಾವತಾರ..!

 

- Advertisement -

Latest Posts

Don't Miss