Sarojni Diaries Part 4: ಇನ್ನು ನಾಲ್ಕನೇ ಉದಾಹರಣೆ ಅಂದ್ರೆ ಓರ್ವ ಹೌಸ್ ವೈಫ್ದು. ದೆಹಲಿಯಲ್ಲಿ ವಾಸವಿದ್ದ ಮಹಿಳೆ ಸರೋಜ್ನಿ ಮಾರ್ಕೇಟ್ಗೆ ಹೋಗಿ, ಅಲ್ಲಿ ತನಗೂ ತನ್ನ ಮನೆಯವರಿಗೆಲ್ಲ ರಾಶಿ ರಾಶಿ ಬಟ್ಟೆ ಖರೀದಿ ಮಾಡಿದ್ದಳು. ಬಟ್ಟೆ ಕಂಡು ಪತಿ- ಮಕ್ಕಳೆಲ್ಲ ಖುಷಿ ಪಟ್ಟರು. ಎಲ್ಲರೂ ಆದನ್ನು ಧರಿಸಿ, ಸೈಜ್ ಸರಿಯಾಗಿ ಇದೆಯಾ ಇಲ್ಲವಾ ಅಂತೆಲ್ಲಾ ನೋಡಿದ್ರು.
ಈ ಮಹಿಳೆ ಕೂಡ ತನಗೆ ತಂದ ಬಟ್ಟೆಯನ್ನು ಧರಿಸಿ, ನೋಡಿದ್ರು. ಆದರೆ ಅವರೆಲ್ಲ ಮಾಡಿದ ತಪ್ಪು ಅಂದ್ರೆ, ಅದನ್ನು ತೊಳೆಯದೇ ಅವರು ಧರಿಸಿದ್ದು. ಆ ಬಟ್ಟೆ ಮನೆಗೆ ಬಂದ ಬಳಿಕ ಪತಿ-ಪತ್ನಿ ಮಧ್ಯೆ ಪ್ರತೀ ದಿನ ಜೋರು ಜೋರಾಗಿ ಜಗಳವಾಗಲು ಶುರುವಾಯ್ತು. ಮಹಿಳೆ ಮತ್ತು ಮಕ್ಕಳ ಆರೋಗ್ಯ ಹಾಳಾಗಲು ಶುರುವಾಯ್ತು. ಸದಾ ಮೌನಿ, ಹಸನ್ಮುಖಿಯಾಗಿದ್ದ ಪತಿ ಸಿಟ್ಟು ಸಿಟ್ಟಾಗಿಯೇ ದಿನ ಶುರು ಮಾಡಿ, ಸಿಡುಕಿನಿಂದಲೇ ಮಲಗುತ್ತಿದ್ದ.
ಹೀಗೆ ದಿನಗಳೆದು ಜಗಳ ಹೆಚ್ಚಾಗಿ, ಮನೆಯ ನೆಮ್ಮದಿ ಸರ್ವನಾಶವಾಯಿತು. ಬಳಿಕ, ಸಂಬಂಧ ಮುರಿದು ಬೀಳುವ ಹಂತಕ್ಕೆ ಬಂತು. ಡಿವೋರ್ಸ್ ಆಗಿ ಪತಿ-ಪತ್ನಿ ದೂರವಾದ್ರು. ಮಹಿಳೆ ಈ ಬಗ್ಗೆ ಯೋಚಿಸಿದಾಗ, ಆಕೆಗೆ ಸರೋಜ್ನಿ ಮಾರ್ಕೇಟ್ನಲ್ಲಿ ಬಟ್ಟೆ ಖರೀದಿಸಿದ ನೆನಪಾಗಿದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಬಗ್ಗೆ ಹೇಳಿದಾಾಗ, ತಾನು ಬಟ್ಟೆ ಖರೀದಿಸಿದ ಬಳಿಕ ಜಗಳ ಶುರುವಾಗಿದೆ ಎಂದೇ ಆಕೆ ಇಂದಿಗೂ ನಂಬುತ್ತಾಳೆ.




