Spiritual: ಮನುಷ್ಯನಿಗೆ ಬದುಕಲು ದುಡ್ಡು ತುಂಬಾ ಮುಖ್ಯ. ಇಂದಿನ ಕಾಲದಲ್ಲಿ ದುಡ್ಡು ಇದ್ದವರಿಗೆ ಮಾತ್ರ ಗೌರವ, ಮರ್ಯಾದೆ ಸಿಗುತ್ತದೆ. ಆದರೆ ಚಾಣಕ್ಯರ ಪ್ರಕಾರ, ದುಡ್ಡಿದ್ದರೆ ಜೀವನದಲ್ಲಿ ಚೆನ್ನಾಗಿ ಬದುಕಬಹುದು. ಆದರೆ ನೆಮ್ಮದಿಯಾಗಿ ಬದುಕಲು ಕೆಲವು ವಿಷಯಗಳು ಮುಖ್ಯ ಎಂದಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ದುಡ್ಡಿಗಿಂತ ಏನು ಮುಖ್ಯ ಅಂತಾ ತಿಳಿಯೋಣ ಬನ್ನಿ..
ಸಂಬಂಧ. ದುಡ್ಡಿಗಿಂತಲೂ ಸಂಬಂಧ ಮುಖ್ಯ ಎನ್ನುತ್ತಾರೆ ಚಾಣಕ್ಯರು. ನಾವು ದುಡ್ಡು ಗಳಿಸುವುದರ ಜೊತೆಗೆ, ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಬೇಕು. ಆದರೆ ಇಂದಿನ ಕಾಲದಲ್ಲಿ ಚಾಣಕ್ಯರ ಈ ಮಾತು ಬುಡ ಮೇಲಾಗುತ್ತಿದೆ. ರಕ್ತ ಸಂಬಂಧದಲ್ಲೂ ದುಡ್ಡೇ ಹೆಚ್ಚು ಎನ್ನುವಂತಾಗಿದೆ. ದುಡ್ಡು ಇಲ್ಲದ ಮಗನನ್ನು ಅಪ್ಪ ಅಮ್ಮನೇ ಪ್ರಾಣಿಗಿಂತ ಕಡೆಯಾಗಿ ಕಾಣುತ್ತಾರೆ.
ಧರ್ಮ. ದುಡ್ಡಿಗಿಂತ ಹೆಚ್ಚು ಧರ್ಮಕ್ಕೆ ಬೆಲೆ ಕೊಡಬೇಕು ಎನ್ನುತ್ತಾರೆ ಚಾಣಕ್ಯರು. ನಾವು ನಮ್ಮ ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ದುಡ್ಡು ಸಂಪಾದನೆಯ ಜೊತೆಗೆ, ಧರ್ಮ ರಕ್ಷಣೆಯೂ ಮುಖ್ಯ ಅಂತಾರೆ ಚಾಣಕ್ಯರು. ನಾವು ಧರ್ಮ ಕಾರ್ಯಗಳನ್ನು ಮಾಡಿದಷ್ಟು ಅದರ ಧನಾತ್ಮಕ ಪರಿಣಾಮ ನಮ್ಮ ಜೀವನದ ಮೇಲೆ ಬೀರುತ್ತದೆ.
ಆತ್ಮಗೌರವ. ಇನ್ನು ದುಡ್ಡು ಎಷ್ಟು ಮುಖ್ಯವೋ ಅಷ್ಟೇ ಆತ್ಮಗೌರವ ಮುಖ್ಯ. ಇಂದಿನ ಕಾಲದಲ್ಲಿ ಹೆಣ್ಣಾಗಲಿ, ಗಂಡಾಗಲಿ ಸಂಪಾದನೆ ಮಾಡುವವರಿಗಷ್ಟೇ ಬೆಲೆ. ಹಾಗಂತ ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಗೌರವವಿಲ್ಲದಿದ್ದರೆ, ಅಂಥ ಸ್ಥಳದಲ್ಲಿ ಹೆಚ್ಚು ದಿನ ಇರುವುದು ಉತ್ತಮವಲ್ಲ.
ಪ್ರೀತಿ, ಕಾಳಜಿ. ಕೆಲವೊಮ್ಮೆ ಬದುಕಲು ಪ್ರೀತಿ, ಕಾಳಜಿಯೂ ಮುಖ್ಯ. ಯಾಕಂದ್ರೆ ಎಷ್ಟೋ ಶ್ರೀಮಂತರ ಮಕ್ಕಳಿಗೆ ಅಪ್ಪ ಅಮ್ಮನ ಪ್ರೀತಿ ಕಾಳಜಿಯ ಬಗ್ಗೆ ಗೊತ್ತೇ ಇರುವುದಿಲ್ಲ. ಯಾಂತ್ರಿಕ ಜೀವನದಲ್ಲಿ ಆ ಮಕ್ಕಳು ಬೆಳೆದಿರುತ್ತಾರೆ. ಅಪ್ಪ ಅಮ್ಮ ಬೆಳಿಗ್ಗೆ ಕೆಲಸಕ್ಕೆ ಹೋದರೆ, ರಾತ್ರಿ ಬರುತ್ತಾರೆ. ಮಕ್ಕಳು ಪ್ಲೇ ಸ್ಕೂಲಿನಲ್ಲಿ ಬೆಳೆದಿರುತ್ತಾರೆ. ಹಾಗಾಗಿ ಚಾಣಕ್ಯರು ದುಡ್ಡಿಗಿಂತ ಹೆಚ್ಚು ಪ್ರೀತಿ, ಕಾಳಜಿ ತೋರಿಸಿ, ಅದಕ್ಕೆ ಬೆಲೆ ಕೊಡಿ ಎಂದಿದ್ದಾರೆ.
ಜೀವೀಸುವ ರೀತಿ. ಶ್ರೀಮಂತರಷ್ಟೇ ನೆಮ್ಮದಿಯಾಗಿ ಬದುಕುತ್ತಾರೆ ಎನ್ನುವುದು ಭ್ರಮೆ. ಕೆಲವೊಮ್ಮೆ ಶ್ರೀಮಂತಿಕೆ, ಪ್ರೀತಿಸುವ ಮಕ್ಕಳು, ಚೆಂದದ ಹೆಂಡತಿ ಎಲ್ಲವೂ ಇದ್ದರೂ, ಬದುಕೇ ಬೇಡವೆಂದು ಆತ್ಮಹತ್ಯೆಗೆ ಶರಣಾದವರಿದ್ದಾರೆ. ಯಾಕಂದ್ರೆ ಅಂಥವರಿಗೆ ಜೀವಿಸುವ ರೀತಿ ಗೊತ್ತಿರುವುದಿಲ್ಲ. ಆದರೆ ಮಧ್ಯಮ ವರ್ಗದ ಜನರು, ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು, ಜೀವನ ನಿಭಾಯಿಸಿಕೊಂಡು ಹೋಗುತ್ತಾರೆ. ಯಾಕಂದ್ರೆ ಅವರಿಗೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿ, ಜೀವಿಸುವ ರೀತಿ ಗೊತ್ತಿರುತ್ತದೆ.