Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿನಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಅದೇ ರೀತಿ ಚಾಣಕ್ಯರು ನಾಯಿಯನ್ನು ನೋಡಿ ನಾವು ಯಾವ ವಿಷಯಗಳನ್ನು ಕಲಿಯಬೇಕು ಅಂತ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ.
ತೃಪ್ತಿ: ನಾಯಿಗೆ ನೀವು ಸ್ವಲ್ಪ ಅನ್ನ ಹಾಾಕಿದರೂ ತೃಪ್ತಿಯಾಗುತ್ತದೆ. ಆದರೆ ಅನ್ನ ಹಾಕಬೇಕು ಅಷ್ಟೇ. ಆದರೆ ಮನುಷ್ಯನಿಗೆ ತೃಪ್ತಿ ಅನ್ನುವುದಿಲ್ಲ. ಆತ ಸದಾಕಾಲ ಮತ್ತೂ ಬೇಕು ಮತ್ತೂ ಬೇಕು ಎನ್ನುತ್ತಿರುತ್ತಾನೆ. ಮನುಷ್ಯನೂ ನಾಯಿಯಂತೆ ಅಲ್ಪ ಸಿಕ್ಕರೂ ತೃಪ್ತನಾಗಿರಬೇಕು ಅಂತಾರೆ ಚಾಣಕ್ಯರು.
ನಿಯತ್ತು: ನಾಯಿಗಿರುವ ನಿಯತ್ತು, ಮನುಷ್ಯರಿಗೆ ಬರಲು ಸಾಧ್ಯವೇ ಇಲ್ಲ ಎನ್ನೋ ಮಾತಿದೆ. ಯಾಕಂದ್ರೆ ನಾಯಿಗೆ ನೀವು ಎಷ್ಟೇ ಬಡಿಯಿರಿ, ಬೈಯ್ಯಿರಿ, ಏನೇ ಮಾಡಿ, ಅದು ಸಾಯುವವರೆಗೂ ನಿಮ್ಮನ್ನು ಮರೆಯುವುದಿಲ್ಲ. ಏಕೆಂದರೆ ನೀವು ಅದಕ್ಕೆ ಅನ್ನ ಹಾಕಿದವರು. ಅದೇ ಮನುಷ್ಯ ಯಾರಾದರೂ ಅನ್ನ ಹಾಕಿದರೂ, ಅವರಿಂದ ಸಣ್ಣ ತಪ್ಪಾದರೂ, ಅವರನ್ನು ಮರೆತುಬಿಡುತ್ತಾನೆ. ಮನುಷ್ಯನಿಗೂ ನಿಯತ್ತಿರುವುದು ತುಂಬಾ ಮುಖ್ಯ ಅಂತಾರೆ ಚಾಣಕ್ಯರು.
ಎಚ್ಚರಿಕೆ: ನಾಯಿ ಅದೆಷ್ಟು ಎಚ್ಚರಿಕೆಯಿಂದಿರುತ್ತದೆ ಎಂದರೆ, ದೂರದಲ್ಲಿ ಯಾರೋ ಮಾತನಾಡಿದರೂ, ಅದು ಎಚ್ಚೆತ್ತು ಕೂಗಲು ಶುರು ಮಾಡುತ್ತದೆ. ಅದೇ ರೀತಿ ಮನುಷ್ಯ ಕೂಡ ಸದಾಕಾಲ ಎಚ್ಚರಿಕೆಯಿಂದ ಇದ್ದರೆ, ಆತ ಹಲವು ಸಮಸ್ಯೆಯಿಂದ ಪಾರಾಗಬಲ್ಲ.
ಧೈರ್ಯ: ನಾಯಿಗಳಿಗೆ ಹೆಚ್ಚು ಧೈರ್ಯವಿರುತ್ತದೆ. ತನಗೇನಾದರೂ ಅಡ್ಡಿಲ್ಲ ತನ್ನನ್ನು ಸಾಕಿದವರಿಗೆ ಏನೂ ಆಗಬಾರದು ಎಂದು ನಾಯಿ ದಾಳಿ ಮಾಡಿದವರ ವಿರುದ್ಧ ಹೋರಾಡುತ್ತದೆ. ಸಾವು ಸಂಭವಿಸುತ್ತದೆ ಅಂತ ತಿಳಿದಿದ್ದರೂ, ಧೈರ್ಯಗೇಡದೇ, ತನ್ನ ಕೈಲಾದಷ್ಟು ಬಡಿದಾಡುತ್ತದೆ. ಮನುಷ್ಯ ಕೂಡ ಧೈರ್ಯದಿಂದ ಬಂದಿದ್ದನ್ನು ಎದುರಿಸಬೇಕು ಅಂತಾರೆ ಚಾಣಕ್ಯರು.