Spiritual Story: ಕೆಲ ಕೆಲಸ ಮಾಡುವಾಗ ನಾವು ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಯಾಕಂದ್ರೆ ಅಂಥ ಕೆಲಸ ಮಾಡುವಾಗ ನಾವು ನಾಚಿಕೊಂಡರೆ, ನಾವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ ಅಂತಾರೆ ಚಾಣಕ್ಯರು. ಹಾಗಾದರೆ ಯಾವ ಕೆಲಸ ಮಾಡುವಾಗ, ನಾವು ನಾಚಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ..
ದುಡಿಯುವಾಗ. ಕೆಲಸ ಮಾಡುವ ಜಾಗದಲ್ಲಿ ನಾಚಿಕೆಯಿಂದ ಇರಬಾರದು. ಹಾಗಿದ್ದರೆ, ನಾವು ಕೆಲಸ ಕಲಿಯಲು ಆಗುವುದಿಲ್ಲ. ನಾವು ಚೆನ್ನಾಗಿ ಕೆಲಸ ಕಲಿತು, ಅದರಲ್ಲಿ ಸಫಲರಾಗಿ, ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದಲ್ಲಿ, ನಾವು ಕೆಲಸ ಮಾಡುವ ಜಾಗದಲ್ಲಿ ನಾಚಿಕೆ ಪಡುವಂತೆ ಇರಬಾರದು.
ಸಾಲ ಮರಳಿ ಕೇಳುವಾಗ. ನಾವು ಕೊಟ್ಟ ಹಣವನ್ನು ಮರಳಿ ಕೇಳುವಾಗ ನಾವು ನಾಚಿಕೊಳ್ಳಬಾರದು. ಅವರು ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆನೋ ಎಂಬ ಮುಜುಗರವಿರಬಾರದು. ನೀವು ಕಷ್ಟಪಟ್ಟು ದುಡಿದ ಹಣವನ್ನು, ಕಷ್ಟದಲ್ಲಿ ಇರುವವರಿಗೆ ಕೊಟ್ಟು, ನೀವು ಕಷ್ಟದಲ್ಲಿ ಇರುವಾಗ, ಆ ಹಣವನ್ನು ಮರಳಿ ಕೇಳುವುದರಲ್ಲಿ ಏನೂ ತಪ್ಪಿಲ್ಲ. ಹಾಗಾಗಿ ಸಾಲ ವಾಪಸ್ ಕೇಳುವಾಗ, ಎಂದಿಗೂ ನಾಚಿಕೊಳ್ಳಬೇಡಿ ಅಂತಾರೆ ಚಾಣಕ್ಯರು.
ಊಟ ಮಾಡುವಾಗ. ನೀವು ಯಾರದ್ದಾದರೂ ಮನೆಗೆ ಹೋದಾಗ, ಅಥವಾ ಯಾರ ಜೊತೆಗಾದರೂ ಕುಳಿತು ಊಟ ಮಾಡುವಾಗ, ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು. ಹೀಗೆ ನಾಚಿಕೊಂಡರೆ, ನಮ್ಮ ಹೊಟ್ಟೆ ತುಂಬುವುದಿಲ್ಲ. ಅಲ್ಲದೇ ಹಲವು ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ಊಟ ಮಾಡುವಾಗ, ನಾಚಿಕೊಳ್ಳಬಾರದು ಅಂತಾರೆ ಚಾಣಕ್ಯರು.
ವಿದ್ಯಾಭ್ಯಾಸದ ವೇಳೆ. ನಾವು ಶಿಕ್ಷಣ ಪಡೆಯುವಾಗ ಎಂದಿಗೂ ನಾಚಿಕೊಳ್ಳಬಾಾರದು ಅಂತಾರೆ ಚಾಣಕ್ಯರು. ಇಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ವಿದ್ಯಾರ್ಥಿಗಳು ನಾಚಿಕೊಳ್ಳಬಹುದು. ಆ ಬಗ್ಗೆ ಶಿಕ್ಷಕರಲ್ಲಿ ಕೇಳಲು ಹಿಂಜರಿಯಬಹುದು. ಇಂಥ ಸಂದರ್ಭದಲ್ಲಿ ಅವರಿಗೆ ಬೇಕಿದ್ದ ಉತ್ತರ ಸಿಗದಿದ್ದಲ್ಲಿ, ಆ ವಿಷಯದಲ್ಲಿ ಅವರಿಗೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ವಿದ್ಯೆ ಕಲಿಯುವ ಸಮಯದಲ್ಲಿ ನಾಚಿಕೊಳ್ಳದೇ, ಹೆದರದೇ ಧೈರ್ಯದಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ ಚಾಣಕ್ಯರು.