Spiritual: ಕೆಲವು ಅವಿವಾಹಿತರನ್ನು ನೀವು ಯಾಕೋ ಇನ್ನೂ ಮದುವೆಯಾಗಿಲ್ಲವೆಂದು ಕೇಳಿದಾಗ, ನೆಮ್ಮದಿಯಾಗಿದ್ದೀನಿ. ಯಾಕೆ ಇಂಥ ಪ್ರಶ್ನೆ ಕೇಳಿ ನೆಮ್ಮದಿ ಹಾಳು ಮಾಡ್ತೀರಾ ಎಂದು ಹೇಳುತ್ತಾರೆ. ಅವರ್ಯಾಕೆ ಹಾಗೆ ಹೇಳುತ್ತಾರೆ ಎಂದರೆ, ವಿವಾಹಿತರ ಗೋಳನ್ನ ಅವರು ನೋಡಿರುತ್ತಾರೆ. ಯಾಕಂದ್ರೆ ಮದುವೆಯಾದ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಲೇ ಇರುತ್ತಾರೆ. ಚಾಣಕ್ಯರು ಹೇಳುವ ಪ್ರಕಾರ, ಪತಿ-ಪತ್ನಿಯ ಕೆಲ ಗುಣಗಳೇ ಮನೆಯಲ್ಲಿ ಜಗಳವಾಗಲು ಕಾರಣವಂತೆ. ಹಾಗಾದ್ರೆ ಚಾಣಕ್ಯರು ಈ ಬಗ್ಗೆ ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಅಹಂಕಾರ: ಜಗಳವಾದಾಗ, ಅಥವಾ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಾಗ, ನಾನೇಕೆ ಮೊದಲು ಮಾತನಾಡಿಸಲಿ..? ಬೇಕಾದ್ರೆ ಅವರೇ ಬಂದು ಮಾತನಾಡಿಸಲಿ, ಎಂದು ಯಾರಿಗೆ ಅಹಂಕಾರವಿರುತ್ತದೆಯೋ, ಅಂಥ ಜೋಡಿಗಳು ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಇಬ್ಬರಲ್ಲಿ ಒಬ್ಬರಾದರೂ ಅಹಂಕಾರ ಬಿಟ್ಟು ಮಾತನಾಡಬೇಕು.
ಬೇರೆಯವರ ಮುಂದೆ ಒಬ್ಬರನ್ನೊಬ್ಬರು ದೂರುವುದು: ಬೇರೆಯವರ ಎದುರು, ಅಥವಾ ಸಂಬಂಧಿಕರ ಎದುರು ಅಥವಾ ಮನೆಯವರ ಎದುರೇ, ಒಬ್ಬರನ್ನೊಬ್ಬರು ಬೈದುಕೊಳ್ಳುವುದು. ಒಬ್ಬರ ಬಗ್ಗೆ ಇನ್ನೊಬ್ಬರು ಕಂಪ್ಲೇಂಟ್ ಹೇಳುವುದೆಲ್ಲ ಮಾಡಿದಾಗ, ಪ್ರೀತಿ ಕಡಿಮೆಯಾಗುತ್ತದೆ. ಗೌರವ ಕಡಿಮೆಯಾಗುತ್ತದೆ. ಆಗ ಹೊಂದಾಣಿಕೆ ಎಲ್ಲಿಗೆ..? ಬರೀ ಜಗಳವೇ ಆಗುತ್ತಿರುತ್ತದೆ.
ಸಂಬಂಧಿಕರಿಗೆ ಬೆಲೆ ಕೊಡದಿರುವುದು: ಪತಿಯಾದವನು ಪತ್ನಿಯ ಮನೆಯವರಿಗೆ ಮತ್ತು ಪತ್ನಿಯಾದವಳು ಪತಿಯ ಮನೆಯವರಿಗೆ ಗೌರವಿಸಬೇಕು. ಬೇರೆಯವರ ಎದುರು ಪರಸ್ಪರ ಸಂಬಂಧಿಕರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಅವಮಾನಿಸುವುದು ಮಾಡಿದಾಗಲೇ, ಪತಿ-ಪತ್ನಿ ಸಂಬಂಧದಲ್ಲಿ ಬಿರುಕು ಮೂಡುತ್ತದೆ.




