Saturday, November 23, 2024

Latest Posts

AAP: ವಿಧಾನಪರಿಷತ್ತಿನ ಕಲಾಪಗಳ ನ್ಯೂನತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಚಂದ್ರು ಮನವಿ

- Advertisement -

ರಾಜಕೀಯ: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದು ಬೆಳಗ್ಗೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ರವರನ್ನು ಸೌಹಾರ್ದ ಭೇಟಿ ಮಾಡಿದರು. ಭೇಟಿಯ ಸಂದರ್ಭದಲ್ಲಿ ಸಭಾಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಾರ್ಯಕಲಾಪಗಳ ಅನೇಕ ನ್ಯೂನತೆಗಳನ್ನು ಸರಿಪಡಿಸಲು ಮನವಿಯನ್ನು ಮಾಡಿಕೊಂಡರು.

ಪರಿಷತ್ತಿನ ಮಾಜಿ ಸದಸ್ಯರು ಆಗಿರುವ ಮುಖ್ಯಮಂತ್ರಿ ಚಂದ್ರು ಪರಿಷತ್ತಿನ ಗೌರವವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸಭಾಪತಿಗಳು ಮುಂದಾಗಬೇಕೆಂದು ಕೇಳಿಕೊಂಡರು. ಅಂದಿನ ಸದನಗಳಲ್ಲಿ ಮುಖ್ಯಮಂತ್ರಿ ಚಂದ್ರು ರವರ ಜೊತೆಗಿನ ಮಹತ್ವದ ಚರ್ಚೆ ಮತ್ತು ಅವರ ಪ್ರತಿವಾದಗಳನ್ನು ಮೆಲಕು ಹಾಕಿ ಸಭಾಪತಿಗಳಾದ ಹೊರಟ್ಪ್ರಟಿಯವರು ಪ್ರಶಂಸಿಸಿದರು. ಪರಿಷತ್ತಿನ ನಡವಳಿಕೆ ವಿಚಾರವಾಗಿ ಅನೇಕ ಸುಧಾರಣಾ ಅಂಶಗಳನ್ನು ಒಳಗೊಂಡ ಪತ್ರವನ್ನು ಸಲ್ಲಿಸಿದರು.

ಪತ್ರದ ಸಾರಾಂಶ

ಇತ್ತೀಚಿಗೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಜನರು ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ರಾಜ್ಯದಲ್ಲಿ ಸುಭದ್ರ ಸರ್ಕಾರ ನಡೆಸಲು ಜನರು ನಾಂದಿ ಹಾಡಿದ್ದಾರೆ. ಯಾವುದೇ ಬದಲಾವಣೆಗಳಿಲ್ಲದೇ ತಾವು ವಿಧಾನ ಪರಿಷತ್ತಿನ ಸಭಾಪತಿಯಾಗಿ ಮುಂದುವರದಿದ್ದಿರಿ, ತಮಗೆ ಅಭಿನಂದನೆಗಳು.

ಇತ್ತೀಚಿಗಷ್ಟೇ ಮುಗಿದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾರ್ಯಕಲಾಪಗಳನ್ನು ಗಮನಿಸಿದಾಗ ಅನೇಕ ನ್ಯೂನತೆಗಳು ಕಂಡು ಬಂದಿದ್ದು, ವಿಧಾನ ಪರಿಷತ್ತಿನ ಮಾಜಿ ಸದಸ್ಯನಾಗಿ ಹಾಗು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಕ್ಷನಾಗಿ, ಇದರಲ್ಲಿ ಕೆಲವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಕೆಳಗಿನ ನ್ಯೂನತೆಗಳನ್ನು ನಿವಾರಿಸಿ ವಿಧಾನ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುತ್ತೀರಿ ಎಂದು ಭಾವಿಸುತ್ತೇನೆ.

1. ಗೌರವಾನ್ವಿತ ಸಚಿವರು ಸಭೆಗೆ ತಡವಾಗಿ ಬರುವುದು
2. ಸದಸ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿರುವುದು
3. ವಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೇ ಅವರು ಬಾವಿಗಿಳಿಯುವಂತೆ ಮಾಡಿರುವುದು
4. ಗೊಂದಲಮಯ ವಾತಾವರಣ ಸೃಷ್ಟಿಸಿ ಕಲಾಪದ ಕಾಲಹರಣ
5. ವಿಪಕ್ಷದ ಸದಸ್ಯರು ಹದ್ದು ಮೀರಿ ವರ್ತಿಸಿದ್ದು
6. ವಿನಾಕಾರಣ ಕಲಾಪದ ಸಮಯ ಪೋಲಾಗಿರುವುದು
7. ರಾಜ್ಯ ಸಮಸ್ಯೆಗಳನ್ನು ಚರ್ಚಿಸಲು ಇರುವ ಸದನವನ್ನು ರಾಜಕೀಯ ದೋಷಾರೋಪಣೆಗೆ ದುರ್ಬಳಕೆ

ಸಭಾಪತಿಗಳಾಗಿ ತಾವು ಅನೇಕ ಸಂದರ್ಭಗಳಲ್ಲಿ ಕಲಾಪಗಳನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡಿರುವಿರಿ. ಅದಾಗ್ಯೂ ಕೆಲವು ಸದಸ್ಯರುಗಳ ವರ್ತನೆ, ಸಭಾಧ್ಯಕ್ಷರಾದ ತಮ್ಮ ವರ್ಚಸ್ಸನ್ನು ಕಡಿಮೆ ಮಾಡುತ್ತಿರುವುದು ನಾಡಿನ ಜನರಿಗೆ ಮತ್ತು ನಿಯಮ ಪಾಲಿಸುವ ಸದಸ್ಯರಿಗೆ ಬೇಸರ ತಂದಿದೆ.

ನಾಡಿನ ಹೆಮ್ಮಯ ಪ್ರತೀಕವಾಗಿರುವ ಈ ಸದನವು ರಾಜ್ಯದ ಅಭಿವೃದ್ದಿಯ ಚರ್ಚೆಗಳಿಗೆ ವೇದಿಕೆಯಾಗಲಿ ಎಂದು ಆಶಿಸುತ್ತೇನೆ. ನಮ್ಮ ಪಕ್ಷವು ವಿಧಾನ ಮಂಡಲದಲ್ಲಿ ಇಲ್ಲದಿದ್ದರೂ, ರಾಷ್ಟ್ರೀಯ ಪಕ್ಷವಾಗಿ ಹೊರಗಿನಿಂದಲೇ ಸರ್ಕಾರದ ನೀತಿ ನಡವಳಿಕೆಯ ಬಗ್ಗೆ ಮಾತನಾಡುತ್ತಾ ಜನರ ಹಿತ ಕಾಪಾಡುತ್ತೇವೆ ಎಂದು ಈ ಮೂಲಕ ತಿಳಿಸುತ್ತೇನೆ.

Kalabugri: ಗೃಹಜ್ಯೋತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

Praladh Joshi: ರಾಜ್ಯ ಸರ್ಕಾರ ವರ್ಗಾವಣೆಗಳನ್ನು ಹರಾಜು ಮಾಡುತ್ತಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ.

Siddaramaiah Challange: ತಾಕತ್ತಿದ್ದರೆ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

- Advertisement -

Latest Posts

Don't Miss