ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ

International News: ಭಾರತದಲ್ಲಿ ಈಗ ರಾಮನದ್ದೇ ಸುದ್ದಿ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಜನವರಿ 22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಮಾರಂಭವಿರುವ ಕಾರಣ, ಎಲ್ಲ ಬಾಯಲ್ಲೂ ರಾಮನಾಮ ಜಪ. ಆದರೆ ಇಸ್ಲಾಂ ದೇಶವಾಗಿರುವ ಪಾಕಿಸ್ತಾನದಲ್ಲೂ ರಾಮನಾಮ ಜಪ ಮೊಳಗುತ್ತಿದೆ ಅಂದ್ರೆ ನೀವು ನಂಬಲೇಬೇಕು.

ಹೌದು ಪಾಕ್ ಮಾಜಿ ಕ್ರಿಕೇಟಿಗ ಡ್ಯಾನಿಶ್ ಕನೇರಿಯಾ, ಕೇಸರಿ ಧ್ವಜ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ, ಜೈ ಶ್ರೀರಾಮ್ ಎಂದಿದ್ದಾರೆ. ಅಲ್ಲದೇ, ನಮ್ಮ ರಾಜ ಶ್ರೀರಾಮನ ಭವ್ಯ ಮಂದಿರ ತಯಾರಾಗಿದೆ. ಇನ್ನು 8 ದಿನಗಳ ಕಾತುರವಿದೆ ಎಂದು ಬರೆದುಕೊಂಡಿದ್ದಾರೆ.

ಜನವರಿ22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ರಾಮಮಂದಿರದ ಎಲ್ಲ ಅರ್ಚಕರು, ಸಿಬ್ಬಂದಿಗಳು, ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ನಾಯಕರು, ಸಿನಿಮಾ ತಾರೆಯರು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ವಿರಾಟ್‌ನನ್ನು ಅಪ್ಪಿಕೊಂಡು ನಿಯಮ ಉಲ್ಲಂಘಿಸಿದ ಅಭಿಮಾನಿ: ನರೇಂದ್ರ ಹಿರ್ವಾನಿ ಪೊಲೀಸರ ವಶಕ್ಕೆ

ರಾಮಮಂದಿರ ಉದ್ಘಾಟನೆಗೆ ಹೋಗಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಜಗ್ಗಿ ವಾಸುದೇವ್

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

About The Author