Sunday, September 8, 2024

Latest Posts

ಉಳಿದಿರುವ ಚಪಾತಿಯಿಂದ ಮಾಡಿ ರುಚಿಯಾದ ತಿಂಡಿ..!

- Advertisement -

New Recipe

ಮನೆಯಲ್ಲಿ ಚಪಾತಿಗಳು ಉಳಿದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಈ ರೀತಿ ಉಳಿದ ಚಪಾತಿಗಳಿಂದ ಹೇಗೆ ರುಚಿಯಾದ ತಿಂಡಿಯನ್ನು ಮಾಡಬಹುದೆಂದು ನಾವು ಹೇಳುತ್ತೇವೆ. ಇದಕ್ಕೆ ‘ಚಪಾತಿ ಉಪ್ಪಿಟ್ಟು’ ಅಥವಾ ಚಪಾತಿ ವಗ್ಗರಣಿ ಎಂದು ಕರೆಯಬಹುದು. ಇದನ್ನು ತಯಾರಿಸುವುದು ಸುಲಭ ಮತ್ತುಇದು ತುಂಬಾ ರುಚಿಕರವಾಗಿರುತ್ತದೆ. ಒಂದು ಸಲ ರುಚಿಮಾಡಿದರೆ ನೀವು ಉದ್ದೇಶಪೂರ್ವಕವಾಗಿ ಪ್ರತಿದಿನ ಹೆಚ್ಚು ಚಪಾತಿಗಳನ್ನು ತಯಾರಿಸುತ್ತೀರಿ.

ಚಪಾತಿ ಉಪ್ಪಿಟ್ಟು ಮಾಡುವ ವಿಧಾನ ತಿಳಿಯೋಣ ಬನ್ನಿ..

1.ಮೊದಲನೆಯದಾಗಿ ಚಪಾತಿಯನ್ನು ಕೈಯಿಂದ ಒರಟಾಗಿ ಪುಡಿ ಮಾಡಿಕೊಳ್ಳಿ. (ಬೇಕಿದ್ದರೆ ಮಿಕ್ಸಿಯಲ್ಲೂ ಪುಡಿ ಮಾಡಿಕೊಳ್ಳಬಹುದು ಆದರೆ ನುಣ್ಣಗೆ ಆಗಬಾರದು)

  1. ನಂತರೆ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ.

3.ಒಂದು ಬಾಣಲೆಗೆ ಎಣ್ಣೆ ಹಾಕಿ ಗ್ಯಾಸ್ ಮೇಲೆ ಬಿಸಿ ಮಾಡಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ ನಂತರ ಕರಿಬೇವು, ಕಡಲೆಬೇಳೆ ಹಾಕಿ ಸ್ವಲ್ಪ ಹುರಿದುಕೊಂಡ ನಂತರ ಹಸಿಮೆಣಸಿಕಾಯಿ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.

  1. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಉಪ್ಪು,ಅರಿಶಿನಪುಡಿ, ದನಿಯಾಪುಡಿ ಸೆರಿಸಿ ಚೆನ್ನಾಗಿ ಬೆರೆಸಿ, ಈಗ ಒರಟಾಗಿ ಪುಡಿ ಮಾಡಿಟ್ಟುಕೊಂಡಿರುವ ಚಪಾತಿಯನ್ನುಬೆರೆಸಿ ಚೆನ್ನಾಗಿ ಕಲಸಿ, ನಂತರ ನಿಂಬೆ ರಸವನ್ನು ಸೇರಿಸಿ ಎಲ್ಲಾ ಮಸಾಲೆಯ ಮಿಶ್ರಣವನ್ನು ಕಲಸಿಕೊಳ್ಳಿ. ಈಗ ಅದರ ಮೇಲೆ ಸ್ವಲ್ಪ ನೀರು ಚುಮುಕಿಸಿ 2 ರಿಂದ 3 ನಿಮಿಷದವರೆಗೆ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ.
  2. ಚೆನ್ನಾಗಿ ಮಿಶ್ರಣವಾದ ಮೇಲೆ ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಚಪಾತಿ ಉಪ್ಪಿಟ್ಟು ಸವಿಯಲು ಸಿದ್ಧ.
- Advertisement -

Latest Posts

Don't Miss