Saturday, March 2, 2024

Latest Posts

‘ಅಗ್ನಿಸಾಕ್ಷಿ’ ನಟನಿಗೆ ಎದುರಾಗಿದೆ ಸಂಕಷ್ಟ..!

- Advertisement -

ಬೆಂಗಳೂರು: ವರದಕ್ಷಿಣೆಗಾಗಿ ತನಗೆ ಚಿತ್ರ ಹಿಂಸೆ ನೀಡಿ, ಇತರರೊಂದಿಗೆ ಅಕ್ರಮ ಸಂಬಂಧಹೊಂದಿದ್ದ ಎಂದು ಪತ್ನಿಯೇ ಅಗ್ನಿಸಾಕ್ಷಿ ಧಾರಾವಾಹಿಯ ನಟ ರಾಜೇಶನ ಮೇಲೆ ದೂರು ನೀಡಿದ್ ಹಿನ್ನೆಲೆಯಲ್ಲಿ ಇದೀಗ ಚಾರ್ಜ್ ಶೀಟ್ ದಾಖಲಾಗಿದ್ದು ನಟನಿಗೆ ಸಂಕಷ್ಟ ಎದುರಾಗಿದೆ.

2013ರಲ್ಲಿ ತನ್ನನ್ನು ಪ್ರೀತಿಸಿ ರಿಜಿಸ್ಟರ್ಡ್ ಮ್ಯಾರೇಜ್ ಆಗಿ ನಂತರ ನನ್ನನ್ನು ವರದಕ್ಷಿಣೆಗಾಗಿ ಪೀಡಿಸಿ, ನಂತರ ಇತರೆ ಯುವತಿಯರೊಂದಿಗೆ ಅಕ್ರಮ ಸಂಬಂಧಹೊಂದಿರೋದಾಗಿ ನಟ ರಾಜೇಶ್ ಪತ್ನಿ ಆರೋಪಿಸಿದ್ದಾರೆ. ಈ ಕುರಿತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪತ್ನಿ ದೂರು ದಾಖಲಿಸಿದ್ರು. ಈ ಹಿನ್ನೆಲೆಯಲ್ಲಿ ಇದೀಗ ನಟನ ವಿರುದ್ಧ 49 ಪುಟಗಳ ಜಾರ್ಜ್ ಶೀಟನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದಾರೆ.

ಜಾರ್ಜ್ ಶೀಟ್ ನಲ್ಲಿ ನಟ ರಾಜೇಶ್ ರೆಜಿಸ್ಟರ್ಡ್ ಮಾರೇಜ್ ಆದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆದ್ರೆ ಧಾರಾವಾಹಿಯಲ್ಲಿ ನಟನೆ ಅವಕಾಶ ಸಿಕ್ಕ ನಂತರ ಕೆಲಸ ಬಿಟ್ಟು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ. ಈ ವೇಳೆ ಹಲವಾರು ಯುವತಿಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಪತ್ನಿಯನ್ನು ಜರಿಯಲು ಆರಂಭಿಸಿದ್ದನಂತೆ. ತನ್ನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಗೆ ಬೆದರಿಕೆಯೊಡ್ಡಿ ಬಾಯಿ ಮುಚ್ಚಿಸಿದ್ದನಂತೆ. ಬಳಿಕ ಮದುವೆ ವಿಚಾರ ತಿಳಿದ ಪತ್ನಿ ಮನೆಯವರು ಸಾಂಪ್ರದಾಯಿಕ ವಿವಾಹ ನಿಗದಿ ಮಾಡಲು ಮುಂದಾದಾಗ ಮೊದಲಿಗೆ ನಿರಾಕರಿಸಿದ್ದ ರಾಜೇಶ್, ನಂತರ ಕಂಡೀಷನ್ ಹಾಕಿ ಮದುವೆಗೆ ಒಪ್ಪಿದ್ದಾನೆ. ನನ್ನ ಮದುವೆಗೆ ಸಾಕಷ್ಟು ನಟ-ನಟಿಯರು ಬರುತ್ತಾರೆ. ಹೀಗಾಗಿ ಮದುವೆ ಗ್ರ್ಯಾಂಡ್ ಆಗಿ ಮಾಡುವಂತೆ ಪತ್ನಿ ಮನೆಯವರಿಗೆ ತಾಕೀತು ಮಾಡಿದ್ದನಂತೆ. ಅದರಂತೆ ಅದ್ದೂರಿಯಾಗಿ ಸಾಂಪ್ರದಾಯಿಕ ವಿವಾಹ ಮಾಡಿಕೊಡಲಾಗಿತ್ತು.

ಕೆಲ ದಿನಗಳ ವರೆಗೆ ಚೆನ್ನಾಗಿಯೇ ಇದ್ದ ರಾಜೇಶ ಬಳಿಕ ಪತ್ನಿಗೆ ಹಿಂಸೆ ನೀಡಲು ಶುರುವಿಟ್ಟಿದ್ದನಂತೆ. ನೀನು ಕೆಲಸಕ್ಕೆ ಹೋಗಿ ಸಂಬಳ ತರಲೇಬೇಕು ಅಂತ ಪತ್ನಿಗೆ ಹಿಂಸೆ ಮಾಡಿ ಕೆಲಸಕ್ಕೆ ಕಳುಹಿಸಿದ್ದನಂತೆ.ಅಲ್ಲದೆ ಸ್ವಂತ ಮನೆ ಮಾಡಿಕೊಳ್ಳೋದಕ್ಕೆ ಹೇಗಾದ್ರೂ ಮಾಡಿ ಹಣವನ್ನು ಹೊಂದಿಸು, ನಿನ್ನ ತವರು ಮನೆಯವರು ಮದುವೆ ಸಮಯದಲ್ಲಿ ನನಗೆ ಏನೂ ಕೊಟ್ಟಿಲ್ಲ , ದುಡ್ಡು ತೆಗೆದಕೊಂಡು ಬಾ ಅಂತ ಸದಾ ಹಿಂಸೆ ನೀಡುತ್ತಿದ್ದನಂತೆ. ತದನಂತರ ಪತ್ನಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಸರಿಯಾಗಿ ಮನೆಗೂ ಬಾರದೆ ಪತ್ನಿಯನ್ನು ಉಪವಾಸಗೆಡವಿಸಿದ್ದನಂತೆ. ನಿನಗೂ ನನಗೂ ಸರಿಬರೋದಿಲ್ಲ, ನೀನು ಎಲ್ಲಿಗೆ ಬೇಕಾದ್ರೂ ಹೋಗು ಅಂತ ಪತ್ನಿಗೆ ಹೇಳಿ ಜನವರಿ 23ರಂದು ಮನೆಯಲ್ಲಿರೋ ಎಲ್ಲಾ ವಸ್ತುಗಳನ್ನು ತನ್ನೊಂದಿಗೆ ತೆಗೆದುಕೊಂಡು ಮನೆ ಖಾಲಿ ಮಾಡಿ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಹೀಗಂತ ಅಗ್ನಿಸಾಕ್ಷಿ ನಟ ರಾಜೇಶನ ಪತ್ನಿಯ ಆರೋಪದ ಮೇರೆಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು ನಟ ರಾಜೇಶ್ ಗೆ ಬಂಧನದ ಭೀತಿ ಎದುರಾಗಿದೆ.

ಕಿರುತೆರೆ ನಟ ರಾಜೇಶ್ ಮೇಲೆ ದಾಖಲಾಗಿರುವ FIR ಪ್ರತಿ

ಮೊದಲ ಬಾರಿಗೆ ಈ ಪಾತ್ರ ಮಾಡ್ತಿದ್ದಾಳೆ ಡಿಂಪಲ್ ಕ್ವೀನ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=LOWKS3un2HE
- Advertisement -

Latest Posts

Don't Miss