ರಾಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಾಗಲೇ, ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಭಜರಂಗದಳವನ್ನ ಬ್ಯಾನ್ ಮಾಡ್ತೀವಿ ಎಂದು ಹೇಳಿದ್ದಾರೆ. ಹಾಗಾಗಿ ಹಲವರು ಇದನ್ನು ವಿರೋಧಿಸಿ, ಪ್ರತಿಭಟನೆಯೂ ನಡೆಸಿದ್ದಾರೆ. ಹಲವಾರು ಕಡೆ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮವೂ ಆಗಿದೆ. ಇದೀಗ ಛತ್ತೀಸ್‌ಘಡದ ಸಿಎಂ ಕೂಡ ಈ ಬಗ್ಗೆ ಮಾತನಾಡಿದ್ದು, ಅಗತ್ಯ ಬಿದ್ದರೆ, ಛತ್ತೀಸ್‌ಘಡದಲ್ಲೂ ಭಜರಂಗದಳವನ್ನ ಬ್ಯಾನ್ ಮಾಡಲಾಗತ್ತೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಛತ್ತೀಸ್‌ಘಡದ ಸಿಎಂ ಭೂಪೇಶ್ ಭಗೇಲ್, ನಮ್ಮ ರಾಜ್ಯದಲ್ಲೂ ಭಜರಂಗದಳದ ಕಾರ್ಯಕರ್ತರು ಹಲವು ಅಹಿತಕರ ಘಟನೆ ನಡೆಯಲು ಕಾರಣರಾಗಿದ್ದರು. ಆದರೆ ಅದನ್ನೆಲ್ಲ ನಾವು ಸರಿಪಡಿಸಿದ್ದೇವೆ. ಆದರೆ ಈ ಗೊಂದಲ ಸೃಷ್ಟಿಸುವ ಕೆಲಸ ಹೀಗೆ ಮುಂದುವರೆದರೆ, ಭಜರಂಗದಳವನ್ನ ಛತ್ತೀಸ್‌ಘಡದಲ್ಲೂ ಬ್ಯಾನ್ ಮಾಡುವ ಬಗ್ಗೆ ನಾವು ಯೋಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಬಘೇಲ್ ಹೇಳಿಕೆಗೆ, ಛತ್ತೀಸ್‌ಘಡದ ಬಿಜೆಪಿ ನಾಯಕರು, ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ವಿರುದ್ಧ ಮತಚಲಾಯಿಸಿ, ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಬಿಜೆಪಿ ನಾಯಕ ಬ್ರಿಜಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.
ಹೇಮಾವತಿ ನಗರದಲ್ಲಿ ಸ್ವರೂಪ್‌ಗೆ ಅದ್ಧೂರಿ ಸ್ವಾಗತ: ಸುಳ್ಳಾಯ್ತಾ ಪ್ರೀತಂ ಚಾಲೆಂಜ್..?
ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..