ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಸರ್ಕಾರಿ ದುಡ್ಡು, ಜನರ ದುಡ್ಡಲ್ಲಿ ಬಿಜೆಪಿ ಕಾರ್ಯಕ್ರಮ ಮಾಡಿದೆ. ಪಕ್ಷತೀತವಾಗಿ ಮಾಡದೆ ಪಕ್ಷದ ಕಾರ್ಯಕ್ರಮ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ HDD ಆಹ್ವಾನದ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ ಮಾಜಿ ಸಚಿವರು, ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಕರೆಯಬೇಕಿತ್ತು. ಬಿಜೆಪಿ ಕಾರ್ಯಕ್ರಮ ಮಾಡದಿದ್ದರೆ. ಮಾಜಿ ಪ್ರಧಾನಿ HDD ಅವರನ್ನು ಕರೆಯಬೇಕಿತ್ತು. ಚುನಾವಣಾ ಉದ್ದೇಶದಿಂದ ನರೇಂದ್ರ ಮೋದಿ ಕರೆಸಿದ್ದಾರೆ. ಪಕ್ಷದ ಕಾರ್ಯಕ್ರಮವನ್ನ ಸಿಎಂ ಮಾಡಿದ್ದಾರೆ. ಸಚಿವ ಸಂಪುಟ ಅಶ್ವಥ್ ನಾರಾಯಣ, ಅಶೋಕ್, ಸುಧಾಕರ್ ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ. ಸರ್ಕಾರಿ ದುಡ್ಡು, ಜನರ ದುಡ್ಡಲ್ಲಿ ಮಾಡಿದ್ದಾರೆ. ಈ ತರಹದ ಕಾರ್ಯಕ್ರಮವನ್ನ ಪಕ್ಷತೀತವಾಗಿ ಮಾಡಬೇಕು. ಮಾಜಿ ಪ್ರಧಾನಿ ದೇವೇಗೌಡರ ಆಹ್ವಾನ ಮಾಡದಿರುವುದು ತಪ್ಪು ಎಂದು ಚಲುವನಾರಾಯಣ ಸ್ವಾಮಿ ಹೇಳಿದ್ದಾರೆ.
‘ಕಟೀಲ್‌ನ ನಾಲಿಗೆ-ಮೆದುಳಿಗೆ ಕನೆಕ್ಷನ್ ಇಲ್ಲ, ಕಟೀಲ್-ಸಿಟಿ ರವಿನಾ ಆಸ್ಪತ್ರೆಗೆ ಸೇರಿಸಿ’