ಚೆನ್ನೈ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೋಮವಾರ ಬೆಳಿಗ್ಗೆ 5.50 ರಂದು ಚೆನ್ನೈನ ಎಮ್.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಿಲಿದೆ.
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತಿಚೇಗಷ್ಟೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿತ್ತು. ವಂದೇ ಭಾರತ್ 2.0 ರೈಲುಗಳ ‘ಕವಚ’ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0ರಿದ 100 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ನ.10 ರಂದು ರೈಲು ಅಧಿಕೃತವಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಭರವಸೆ : ಎರಡು ದಿನದಲ್ಲಿ ಆದೇಶ
‘ಉತ್ತರಕಾಂಡ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಎಂಟ್ರಿ..!