ಹುಬ್ಬಳ್ಳಿ: ಬೀದಿಯಲ್ಲಿ ನಿಂತು ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗಳನ್ನು ಚೆನ್ನಮ್ಮ ಪಡೆ ಕಾರ್ಯಾಚರಣೆ ನಡೆಸಿ 8 ಮಂದಿಯನ್ನು ಬಂಧಿಸಿದೆ.
ಹುಬ್ಬಳ್ಳಿಯ ನೆಹರೂ ಕಾಲೇಜು ಬಳಿ ನಡೆದು ಹೋಗುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣರಿಗೆ ಚೆನ್ನಮ್ಮಾ ಪಡೆ ತಕ್ಕ ಶಾಸ್ತಿ ಮಾಡಿದೆ. ಪ್ರತಿನಿತ್ಯ ಈ ರೋಡ್ ರೋಮಿಯೋಗಳ ಕಾಟದಿಂದ ಯುವತಿಯರು ಬೇಸತ್ತು ಹೋಗಿದ್ರು. ಈ ಹಿನ್ನೆಲೆಯಲ್ಲಿ ಹೇಗಾದ್ರೂ ಮಾಡಿ ಇವರ ಹೆಡೆಮುರಿ ಕಟ್ಟಲೇಬೇಕು ಎಂದು ಪಣ ತೊಟ್ಟ ಚೆನ್ನಮ್ಮಾ ಪಡೆ, ಇವತ್ತು ಮಧ್ಯಾಹ್ನ ಮಫ್ತಿಯಲ್ಲಿ ಕಾರ್ಯಾಚರಣೆಗಿಳಿದಿತ್ತು. ಎಂದಿನಂತೆ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು 8 ಮಂದಿಯನ್ನು ಬಂಧಿಸಿದ್ದಾರೆ. ಆರೀಫ್, ತೌಸಿಫ್, ತನ್ವೀರ್, ಸಮೀರ್, ಉಮರ್ ಫಾರುಖ್, ಉಸ್ಮಾನ್, ಉಮರಫಾರುಕ್ ಸೇರಿದಂತೆ 8 ಮಂದಿ ಬೀದಿ ಕಾಮಣ್ಣರು ಇದೀಗ ಕಂಬಿ ಎಣಿಸುತ್ತಿದ್ದಾರೆ.
ನಿಮ್ಮ ಬಳಿ 10 ರೂಪಾಯಿ ಕಾಯಿನ್ ಇದೆಯಾ..?ಇನ್ಮುಂದೆ ಚಿಂತೆ ಬೇಡ. ಮಿಸ್ ಮಾಡದೇ ಈ ವಿಡಿಯೋ ನೋಡಿ