Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅತ್ಯಂತ ಸಣ್ಣ ಗ್ರಾಮ. ಈ ಗ್ರಾಮದಲ್ಲಿ ವರುಷಕ್ಕೊಮ್ಮೆ ಪ್ರತಿಷ್ಠಾಪನೆ ಮಾಡುವ ಗಣಪತಿಗಳನ್ನು ನೋಡಲು ನಾಡಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಮಕ್ಕಳಿಲ್ಲದವರು, ಮದುವೆ ಯಾಗದವರು, ನೌಕರಿ ಇಲ್ಲದವರು, ವಿದ್ಯೆ ಬುದ್ದಿ ಬೇಕಾದವರು ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಭಕ್ತರಿಗೆ ಇಲ್ಲಿನ ಗಣಪತಿ ಸಂಕಷ್ಟಗಳನ್ನು ನಿವಾರಣೆ ಮಾಡಿ ಅಶೀರ್ವಾದ ಮಾಡ್ತಾನೆ ಅನ್ನೋ ಪ್ರತೀತಿ ಇದೆ.
ಹೌದು..ಮೂರು ದಿನಗಳ ಕಾಲ ಪ್ರತಿಷ್ಠಾನೆಯಾಗುವ ಗಣಪತಿಯನ್ನು ರಾತ್ರಿ ಹಗಲು ಎನ್ನದೇ ಐದಾರು ಕಿಲೋ ಮೀಟರಗಳ ಉದ್ದುದ್ದ ಸರದಿ ಸಾಲಿನಲ್ಲಿ ನಿಂತಕೊಂಡು ಜನ ದರ್ಶನ ಪಡಿತಾರೆ. ಗಣೇಶ ಹಬ್ಬ ಎಂದರೆ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಸಮಯದಲ್ಲಿ ಬ್ರೀಟಿಷರ ವಿರುದ್ಧ ಹೋರಾಟ ಮಾಡಲು ಎಲ್ಲಾ ವರ್ಗದ ಜನರನ್ನು ಒಂದೆಡೆ ಕೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಇದನ್ನು ಹುಟ್ಟು ಹಾಕಿರುವ ಕೀರ್ತಿ ಸಲ್ಲುತ್ತದೆ. ಆದರೆ ಇದಕ್ಕೂ ಮುಂಚೆಯೇ ಅಂದರೆ 75 ವರ್ಷಗಳ ಹಿಂದೆಯೇ ಛಬ್ಬಿ ಗ್ರಾಮದಲ್ಲಿ ಈ ಆಚರಣೆ ಆರಂಭವಾಗಿದ್ದು ವಿಶೇಷವಾಗಿ ಕಂಡು ಬರುತ್ತದೆ. ಅದ್ರಲ್ಲೂ ಛಬ್ಬಿ ಕೆಂಪು ಗಣಪನನ್ನು ನೋಡುವುದೇ ಒಂದು ಭಾಗ್ಯ. ಆತನ ದರ್ಶನದಿಂದ ಇಷ್ಟಾರ್ಥ ಪೂರೈಸುತ್ತೆ ಎಂಬ ನಂಬಿಕೆ ಸಹಸ್ರಾರು ಭಕ್ತರಲ್ಲಿ ಇಂದಿಗೂ ಇದೆ.
ಇನ್ನೂ ಶ್ರೀಕೃಷ್ಟ್ಣೇಂದ್ರ ಸ್ವಾಮಿಗಳು ಹಾಗೂ ಶತಾವಧಾನಿ ಶ್ರೀ ಚಿದಂಬರ ಮಹಾಸ್ವಾಮಿಗಳು ಕುಲಕರ್ಣಿ ಮನೆತನದ ರಕ್ತ ವರ್ಣದ ಗಣಪನನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದು, ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ.