Friday, August 29, 2025

Latest Posts

ಛಬ್ಬಿ ಸಿಂಧೂರ ಗಣಪತಿಗೆ 199 ವರ್ಷದ ಸಂಭ್ರಮ: ಇಷ್ಟಾರ್ಥ ಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

- Advertisement -

Hubli News: ಹುಬ್ಬಳ್ಳಿ: ಸಿಂಧೂರ ವರ್ಣದ ಛಬ್ಬಿ ಗಣಪತಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿಗೆ ಈಗ 199ನೇ ವರ್ಷದ ಸಂಭ್ರಮ.

ವಿಘ್ನ ನಿವಾರಕ, ಭಕ್ತಿ ಪ್ರದಾಯಕ, ಗೌರಿಸುತ ವಿನಾಯಕನ ಆರಾಧನೆ ದೇಶಾದ್ಯಂತ ಜೋರಾಗಿದೆ. ಆದರೆ ಛಬ್ಬಿಯಲ್ಲಿ ಮೂರು ದಿನಗಳ ಗಣಪತಿ ಆಚರಣೆ ಬಹಳಷ್ಟು ವಿಶೇಷವಾಗಿದೆ. ಹೌದು..ದಶತಮಾನದ ಆಚರಣೆ ಹೊಸ್ತಿಲಲ್ಲಿರುವ ಕುಲಕರ್ಣಿ ಮನೆತನಗಳ ಐತಿಹಾಸಿಕ ಛಬ್ಬಿಯ ಕೆಂಪು ಗಣಪತಿ ದರ್ಶನಕ್ಕೆ ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಹರಕೆ ಕಟ್ಟಿಕೊಳ್ಳುತ್ತಾರೆ. ಛಬ್ಬಿಯ ಕುಲಕರ್ಣಿ ಮನೆತನದ 7 ಮನೆಗಳು ಕೆಂಪು ಗಣಪತಿ ಪ್ರತಿಷ್ಟಾಪನೆ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿರುತ್ತಾರೆ.

ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೊಡಲಿ ಮಗದೊಂದು ಕೈಯಲ್ಲಿ ತ್ರಿಶೂಲ, ಸಿಂಧೂರ ಮೈಬಣ್ಣದ ಗಂಡು ಕಚ್ಚೆ ಧರಿಸಿದ ಈ ವಿಶಿಷ್ಟ ಗಣಪತಿಯನ್ನು ನೋಡಲು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಹೋಗಬೇಕು. ಛಬ್ಬಿ ಗ್ರಾಮದ ಕುಲಕರ್ಣಿ ಮನೆತನಗಳಲ್ಲಿ ಪೂಜಿಸಲಾಗುವ ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ. ಶ್ರೀ ಗಣಪತಿಯೂ ಜಾಗೃತನೆಂದು ನಾಡಿನ ನಾನಾ ಮೂಲೆಗಳಿಂದ ಅಲ್ಲದೆ ನೆರೆ ರಾಜ್ಯಗಳ ಭಕ್ತರು ಇಲ್ಲಿ ಆಗಮಿಸಿ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಬೇಡಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಗಣಪತಿ ವಿಶೇಷ ಆಚರಣೆಗೆ ಛಬ್ಬಿ ಗ್ರಾಮ ಸಾಕ್ಷಿಯಾಗಿದ್ದು, ಲಕ್ಷಾಂತರ ಜನರು ದರ್ಶನ ಪಡೆದು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುವ ಮೂಲಕ ಭಕ್ತಿಯನ್ನು ಸಮರ್ಪಣೆ ಮಾಡುವುದು ನಿಜಕ್ಕೂ ವಿಶೇಷವಾಗಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss