Sunday, September 8, 2024

Latest Posts

ಚಿಕ್ಕಬಳ್ಳಾಪುರ: ರಾಮಲಿಂಗಪ್ಪ ನೇತೃತ್ವದ ಉಚಿತ ಕಣ್ಣಿನ ತಪಾಸಣ ಶಿಬಿರ

- Advertisement -

Political News:

Feb:25: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಮಲಿಂಗಪ್ಪ ಜನಪರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡ್ತಿರೋ ರಾಮಲಿಂಗಪ್ಪ, ಈ ಬಾರಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಂಡಿದ್ರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಮಲಿಂಗಪ್ಪ, ಗುಡಿಬಂಡೆ ತಾಲ್ಲೂಕಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ರು. ಚಿಕ್ಕಬಳ್ಳಾಪುರ ಬಿಜೆಪಿಯ ಜಿಲ್ಲಾಧ್ಯಕ್ಷರೂ ಆಗಿರೋ ರಾಮಲಿಂಗಪ್ಪ, ಈ ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನ ಮಾಡ್ತಿರೋ ರಾಮಲಿಂಗಪ್ಪ, ಇತ್ತೀಚೆಗಷ್ಟೇ ಗುಡಿಬಂಡೆ ತಾಲ್ಲೂಕಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದ್ರು.

ಇದಕ್ಕೂ ಮೊದಲೇ ಅಂದರೆ ಫೆಬ್ರವರಿ 18 ರಂದು ಬಾಗೇಪಲ್ಲಿ ನಗರದ ದ್ವಾರಕ ಪಾರ್ಟಿ ಹಾಲ್ ನಲ್ಲಿ ಚೇಳೂರು ಹಾಗೂ ಬಾಗೇಪಲ್ಲಿ ತಾಲ್ಲೂಕಿನ ಜನರಿಗೂ ಕೂಡಾ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಉಚಿತ ಕಣ್ಣಿನ ತಪಾಸಣಾ ಶಿಬಿರ ಗಳಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಮಾಡಲಾಯ್ತು.

ಸಮಾಜ ಸೇವಕರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ರಾಮಲಿಂಗಪ್ಪ ನವರ ನೇತೃತ್ವ ದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಹಾಗೂ ಪ್ರಭಾಕರ ರೆಡ್ಡಿ ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ, ಬಾಗೇಪಲ್ಲಿ.

ಭವಾನಿ ರೇವಣ್ಣಗೆ ಟಿಕೇಟ್ ಪಕ್ಕಾ..?! ಅನುಮಾನ ಮೂಡಿಸಿದ ಭವಾನಿ ನಡೆ…!

ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”

ನಟ ಉಪೇಂದ್ರ ಪಕ್ಷಕ್ಕೆ “ಆಟೋ ರಿಕ್ಷಾ” ಅಧಿಕೃತವಾಗಿ ಚಿಹ್ನೆ ನೀಡಿದ ಕೇಂದ್ರ ಚುನಾವಣೆ ಆಯೋಗ

- Advertisement -

Latest Posts

Don't Miss