Chikkodi News: ಚಿಕ್ಕೋಡಿ: ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ, ಸಪ್ತಸಾಗರ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿದ್ದು, ನೀರು ಮನೆಗೆ ನುಗ್ಗಿ, ನೂರಾರು ಕುಟುಂಬಗಳು ಬೀದಿಗೆ ಬಿದ್ದಿದೆ. ಇನ್ನು ಕಳೆದ 15 ದಿನಗಳಿಂದ ನದಿ ನೀರಿನಿಂದಾಗಿ ಇಲ್ಲಿನ ವೃದ್ಧೆಯೊಬ್ಬಳು ನರಕಯಾತನೆ ಅನುಭವಿಸುತ್ತಿದ್ದಾರೆ. ವಿಷಯ ಗೊತ್ತಿದ್ದರೂ ಕೂಡ, ಯಾವ ಅಧಿಕಾರಿಗಳು ಕೂಡ, ಸ್ಥಳಕ್ಕೆ ಧಾವಿಸಿ, ಈ ವೃದ್ಧಿಗೆ ಸಹಾಯ ಮಾಡುವ ಕೆಲಸಕ್ಕೆ ಬರಲಿಲ್ಲ.
ಕಷ್ಟ ಅನುಭವಿಸುತ್ತಿರುವ ಅಜ್ಜಿ, ನಾನು ನದಿಗೆ ಬಿದ್ದು ಸತ್ತೋಗ್ತೀನಿ ಎಂದು ದುಃಖ ಪಡುತ್ತಿದ್ದಾರೆ. ಈಕೆಯ ಅವಸ್ಥೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದರೆ, ಊಟಕ್ಕೂ ಸಹ ಈ ವೃದ್ಧೆ ಪರದಾಡುತ್ತಿದ್ದಾರೆ. ಇನ್ನು ಅಥಣಿ ತಾಲೂಕಾಡಳಿತ, ಕಾಟಾಚಾರಕ್ಕೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಇಂಥ ಕಷ್ಟದ ಸಮಯದಲ್ಲಿ ಗ್ರಾಮದ ಪಿಡಿಓ ನಾಪತ್ತೆಯಾಗಿದ್ದಾರೆ. ಹಾಗಾಗಿ ಪಿಡಿಓ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.