Saturday, July 27, 2024

Latest Posts

SDPI ಜೊತೆ ಕೈ ಜೋಡಿಸಿದ್ರಾ ಚಿಕ್ಕಮಗಳೂರು ಬಿಜೆಪಿ ನಾಯಕರು?

- Advertisement -

Chikkamagaluru News: ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಸ್ಥಳೀಯ ಬಿಜೆಪಿ ನಾಯಕರು (BJP Leaders) ಎಸ್ಡಿಪಿಐ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರು ನಗರಸಭೆಯಲ್ಲಿ‌ ಬಿಜೆಪಿ ಸದಸ್ಯರು ಎಸ್ಡಿಪಿಐ (SDPI) ಬೆಂಬಲ ಕೇಳಿದ್ದಾರೆ ಎನ್ನಲಾಗಿದೆ. ಹಾಲಿ ನಗರಸಭಾಧ್ಯಕ್ಷ ವೇಣುಗೋಪಾಲ್ ಅವರನ್ನು ಕೆಳಗಿಳಿಸಲು ಬದ್ಧವೈರಿಗಳ ಜೊತೆಯಲ್ಲಿ ಕೈ ಜೋಡಿಸಲು ಕಮಲ ನಾಯಕರು (BJP Leaders) ಮುಂದಾಗಿದ್ದರಂತೆ. ಈ ಮಾತುಕತೆಯ ಹಿನ್ನೆಲೆಯಲ್ಲಿ ಬಿಜೆಪಿ ಸಭೆಯಲ್ಲಿ ಎಸ್ಡಿಪಿಐ ಮತ್ತು ಜೆಡಿಎಸ್ (JDS) ಸದಸ್ಯರು ಭಾಗಿಯಾಗಿರೋದು ಅಚ್ಚರಿಗೆ ಕಾರಣವಾಗಿದೆ.

ಬಿಜೆಪಿ ಪಕ್ಷದ ಆಂತರಿಕ ಒಪ್ಪದ ಪ್ರಕಾರ, ಸಿ.ಟಿ.ರವಿ ಅವರ ಆಪ್ತರಾಗಿರುವ ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದ್ರೆ ರಾಜೀನಾಮೆ ನೀಡದ ಹಿನ್ನೆಲೆ ಇನ್ನುಳಿದ ಬಿಜೆಪಿ ಸದಸ್ಯರು ವೇಣುಗೋಪಾಲ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಂದಾಗಿದ್ದು, ಈ ಹಿನ್ನೆಲೆ ಎಸ್ಡಿಪಿಐ ಬೆಂಬಲ ಕೇಳಿದೆ ಎನ್ನಲಾಗಿದೆ.

ಅವಿಶ್ವಾಸ ನಿರ್ಣಯ ಮಂಡಿಸಲು ಪ್ಲಾನ್!

ಎಸ್ಡಿಪಿಐ ಜೊತೆಗೆ ಜೆಡಿಎಸ್ ಬೆಂಬಲ ಪಡೆದು ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರು ನಗರಸಭೆ ಸಂಖ್ಯಾಬಲ

35 ಸದಸ್ಯರ ಸಂಖ್ಯಾಬಲ ಹೊಂದಿರುವ ನಗರಸಭೆಯಲ್ಲಿ 18 ಮಂದಿ ಬಿಜೆಪಿ ಸದಸ್ಯರು, 3 ಜೆಡಿಎಸ್, ಎಸ್ಡಿಪಿಐ‌ 1, ಪಕ್ಷೇತರ, ಕಾಂಗ್ರೆಸ್ ಪಕ್ಷದಿಂದ ‌13 ಮಂದಿ ಆಯ್ಕೆಯಾಗಿದ್ದಾರೆ. ಹಲವು ಹೈಡ್ರಾಮಗಳಿಗೆ ಚಿಕ್ಕಮಗಳೂರು ನಗರಸಭೆ ಸಾಕ್ಷಿ ಆಗುತ್ತಿದೆ.

ಹುಟ್ಟಿದ ಮಗುವಿಗೆ ಸ್ನಾನ ಬೇಕೋ..? ಬೇಡವೋ..?

ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಎರಡು ಬಣಗಳಿವೆ: ಮಾಜಿ ಸಚಿವ ಶ್ರೀರಾಮುಲು

ಹಾಸನಾಂಬ ದೇಗುಲದ ಕಳಸ ಪ್ರತಿಷ್ಠಾಪನೆಗೆ ಕರಿಯಲಿಲ್ಲವೆಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ

- Advertisement -

Latest Posts

Don't Miss