International News: ಗಾಜಾದ ಪರಿಸ್ಥಿತಿ ಅದೆಷ್ಟು ಭೀಕರವಾಗಿದೆ ಎಂಬ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಅಲ್ಲಿನ ಶಿಬಿರದಲ್ಲಿ 50 ಸಾವಿರ ಜನ ನಿರಾಶ್ರಿತರಿದ್ದಾರೆ. ಅವರಿಗೆ ಬಳಸಲು ಬರೀ 4 ಟಾಯ್ಲೇಟ್ ಇದ್ದು, ಅವುಗಳಿಗೆ ಬರೀ 4 ತಾಸು ಅಷ್ಟೇ ನೀರು ಬಿಡಲಾಗುತ್ತಿದೆ. ಇನ್ನು ಪುಟ್ಟ ಪುಟ್ಟ ಮಕ್ಕಳಿಗೆ ನೀರು ಮತ್ತು ಆಹಾರಕ್ಕಾಗಿ ತತ್ವಾರ ಉಂಟಾಗಿದ್ದು, ಪ್ರತಿದಿನ ಹಲವು ಮಕ್ಕಳ ಮಾರಣಹೋಮ ನಡೆಯುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಜಾದಲ್ಲಿ ಪ್ರತೀ 10 ನಿಮಿಷಕ್ಕೆ ಒಂದು ಮಗು ಸಾವನ್ನಪ್ಪುತ್ತಿದೆ. ಮತ್ತು ಅಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಈಗಾಗಲೇ ಗಾಜಾದ ಆಸ್ಪತ್ರೆಗಳಲ್ಲಿ ಜನ ತುಂಬಿ ಹೋಗಿದ್ದಾರೆ. ಯುದ್ಧದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಚಿಕಿತ್ಸೆ ತೆಗೆದುಕೊಳ್ಳಲು ಬಂದರೆ, ಚಿಕಿತ್ಸೆ ಕೊಟ್ಟ ಬಳಿಕವೇ, ಅವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳದೇ, ಡಿಸ್ಚಾರ್ಜ್ ಮಾಡಿ ಕಳುಹಿಸಲಾಗುತ್ತಿದೆ.
ಇನ್ನು ಸರಿಯಾಗಿ ಚಿಕಿತ್ಸೆ ದೊರೆಯದೇ, ಎಷ್ಟೋ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಈ 35 ದಿನಗಳಲ್ಲಿ ಗಾಜಾದಲ್ಲಿ ನಡೆದ ಹಮಾಸ್- ಇಸ್ರೇಲ್ ಯುದ್ಧದಲ್ಲಿ 11 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಇಲ್ಲಿ ಬದುಕುಳಿದಿರುವ ನಿರಾಶ್ರಿತರಲ್ಲಿ ಕೆಲವರು ಶಿಬಿರದಲ್ಲಿದ್ದರೆ, ಇನ್ನು ಕೆಲವರು ಸಿಕ್ಕ ಸಿಕ್ಕ ಕಟ್ಟಡಗಳಲ್ಲಿ ಅಡಗಿ ಕುಳಿತು, ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ. ದುರಾದೃಷ್ಟವೆಂದರೆ, ಇವರಿಗೆ ತಿನ್ನಲು ಸರಿಯಾದ ಆಹಾರ ಮತ್ತು ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಇದೇ ಕಾರಣಕ್ಕೆ, 10 ನಿಮಿಷಕ್ಕೊಂದು ಪುಟ್ಟ ಪುಟ್ಟ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇನ್ನು ಈವರೆಗೆ ಗಾಜಾದಲ್ಲಿ ಸಾವನ್ನಪ್ಪಿದ ಜನರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ..
ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ
ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ