Saturday, November 15, 2025

Latest Posts

ಬ್ರಹ್ಮಪುತ್ರನಿಗೆ ಚೀನಾ ಅಡ್ಡಗಾಲು! – ಭಾರತದ ಮೇಲೆ ಜಲಯುದ್ಧ!

- Advertisement -

ಭಾರತದಲ್ಲಿ ಸಾವಿರಾರು ನದಿಗಳು ಹರೀತಿವೆ.. ಆದ್ರೆ ಅದ್ರಲ್ಲಿ ಮುಖ್ಯವಾಗಿ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರಾ.. ಭಾರತದಲ್ಲಿ ಗಂಗಾ ನದಿ 2525 ಕಿಲೊಮೀಟರ್ ದೂರ ಹರಿದರೆ, ಬ್ರಹ್ಮಪುತ್ರ ನದಿ ಭಾರತದಲ್ಲಿ 916 ಕಿಲೋಮೀಟರ್ ದೂರ ಹರಿಯುತ್ತೆ.. ಈ ಬ್ರಹ್ಮಪುತ್ರ ನದಿ ಹುಟ್ಟೋದು ಟಿಬೆಟ್​​​ನ ಮಾನಸ ಸರೋವರದಲ್ಲಿ.. ಚೀನಾದಲ್ಲಿ ಇದೇ ಬ್ರಹ್ಮಪುತ್ರ ನದಿಯನ್ನ ಯಾರ್ಲುಂಗ್ ಜಂಗ್​​ಬೋ ಅಂತ ಕರೀತಾರೆ.. ಇಡೀ ಬ್ರಹ್ಮಪುತ್ರ ನದಿಯ ಉದ್ದ 2900 ಕಿಲೋಮೀಟರ್ ಇದೆ. ಆದ್ರೆ ಭಾರತದ ಭೂ ಪ್ರದೇಶದಲ್ಲಿ ಕೇವಲ 916 ಕಿಲೋಮೀಟರ್ ಹರಿಯುತ್ತೆ.. ಈ ಬ್ರಹ್ಮಪುತ್ರಾ ನದಿ ಬಾಂಗ್ಲಾದೇಶದಲ್ಲಿ ಗಂಗಾನದಿಯನ್ನ ಸೇರಿ, ಮುಂದೆ ಹೋಗಿ ಬಂಗಾಳ ಕೊಲ್ಲಿ ಸೇರುತ್ತೆ. ಈಗ ಇದೇ ನದಿ ಮೇಲೆ ಹಕ್ಕು ಸಾಧಿಸೋಕೆ ಚೀನಾ ದೇಶ ಮುಂದಾಗಿದೆ.

ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ.. ಜಲ ವಿದ್ಯುತ್‌ ಉದ್ದೇಶಕ್ಕೆ ಡ್ಯಾಂ ಕಟ್ಟೋದಾಗಿ ಚೀನಾ ಹೇಳ್ತಿದೆ.. ಇದಕ್ಕೆ ಅವ್ರು ಬರೋಬ್ಬರಿ 137 ಬಿಲಿಯನ್ ಲಕ್ಷ ಕೋಟಿ ರೂ. ಅನ್ನು ಖರ್ಚು ಮಾಡ್ತಿದ್ದಾರೆ.. ಚೀನಾದಲ್ಲಿ ಥ್ರೀ ಗೋರ್ಜಸ್‌ ಹೆಸರಿನ ಇನ್ನೊಂದು ಜಲಾಶಯ ಇದೆ. ಇದು ಇಷ್ಟು ದಿನದ ಚೀನಾದ ಅತಿ ದೊಡ್ಡ ಜಲವಿದ್ಯುತ್ ಉತ್ಪಾದಿಸೋ ಡ್ಯಾಂ ಆಗಿತ್ತು.. ಆದ್ರೀಗ ಅರುಣಾಚಲಪ್ರದೇಶದ ಗಡಿಯಲ್ಲಿ ಕಟ್ಟುತ್ತಿರೋ ಡ್ಯಾಂನಿಂದ ಮೂರು ಪಟ್ಟು ಹೆಚ್ಚು ವಿದ್ಯುತ್‌ ಅನ್ನು ಉತ್ಪಾದಿಸಲು ಚೀನಾ ಮುಂದಾಗಿದೆ. ವಾರ್ಷಿಕವಾಗಿ ಸುಮಾರು 300 ಬಿಲಿಯನ್‌ ಕಿಲೋವ್ಯಾಟ್‌-ಅವರ್ಸ್‌ ವಿದ್ಯುತ್‌ ಅನ್ನು ಬ್ರಹ್ಮಪುತ್ರ ಡ್ಯಾಂ ಉತ್ಪಾದಿಸಲಿದೆ.

ಈ ಬೃಹತ್‌ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಬರೋಬ್ಬರಿ 137 ಬಿಲಿಯನ್‌ ಅಮೆರಿಕನ್‌ ಡಾಲರ್‌ ಅನ್ನು ಖರ್ಚು ಮಾಡ್ತಿದೆ.. ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಯೋಜನೆಯಾಗಿದ್ದು, ಇದುವರೆಗೂ ಯಾವುದೇ ಪ್ರಾಜೆಕ್ಟ್‌ಗಳು ಇಷ್ಟೊಂದು ದೊಡ್ಡ ಮೊತ್ತದಲ್ಲಿ ನಿರ್ಮಾಣ ಆಗಿಲ್ಲ. ಥ್ರಿ ಗೋರ್ಜಸ್‌ ಡ್ಯಾಂಗೆ ಚೀನಾ 35 ಬಿಲಿಯನ್‌ ಡಾಲರ್‌ ಅಷ್ಟೇ ಖರ್ಚು ಮಾಡಿತ್ತು. ಈ ಭೂಗ್ರಹದಲ್ಲೇ ದೊಡ್ಡ ಡ್ಯಾಂ ಪ್ರಾಜೆಕ್ಟ್ ಇದು.

ಚೀನಾದ ಈ ಡ್ಯಾಂ ನಿರ್ಮಾಣಕ್ಕೆ ಕೆಲ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಸವಾಲುಗಳಿವೆ. ಅರುಣಾಚಲ ಪ್ರದೇಶದ ಗಡಿಯಿಂದ ಸುಮಾರು 50 ಕಿಮೀ ಅಂತರದಲ್ಲೇ ಬ್ರಹ್ಮಪುತ್ರ (ಯಾರ್ಲುಂಗ್ ಜಾಂಗ್ಬೋ) ನದಿ ಇದೆ. ಈ ನದಿ ಗಡಿ ಪ್ರದೇಶದಲ್ಲಿ ಒಂದು ಕಡೆ ಸುಮಾರು 2,000 ಮೀಟರ್‌ ಎತ್ತರದಿಂದ ಕೆಳಗೆ ಧುಮುಕುತ್ತದೆ. ಇಲ್ಲೇ ಚೀನಾ ಜಲವಿದ್ಯುತ್ ಉತ್ಪಾದನೆಗೆ ಪ್ರಶಸ್ತವಾದ ಜಾಗ ಅಂತ ಗುರುತು ಮಾಡಿದ್ದಾರೆ. ಆದರೆ, ಈ ಸಾಮರ್ಥ್ಯವನ್ನು ಕರೆಂಟ್‌ ಉತ್ಪಾದನೆಗೆ ಬಳಸಿಕೊಳ್ಳಲು ನದಿಯ ಹರಿವಿನ ಅರ್ಧದಷ್ಟು ನೀರನ್ನು ಸೆಕೆಂಡ್‌ಗೆ ಸುಮಾರು 2,000 ಕ್ಯೂಬಿಕ್ ಮೀಟರ್‌ಗಳಲ್ಲಿ ಹರಿಸ್ಬೇಕು.. ಹೀಗೆ ಮಾಡ್ಬೇಕು ಅಂದ್ರೆ ನಮ್ಚಾ ಬರ್ವಾ ಅನ್ನೋ ಪರ್ವತದಲ್ಲಿ 20 ಕಿಮೀ ಉದ್ದದ ಸುಮಾರು 6 ಸುರಂಗಗಳನ್ನು ನಿರ್ಮಿಸಬೇಕಾಗುತ್ತೆ.. ಈ ನಮ್ಚಾ ಬರ್ವಾ ಪ್ರದೇಶ ಭೂಕಂಪಗಳು ಜಾಸ್ತಿ ಸಂಭವಿಸುವ ಜಾಗ. ಈ ಪರ್ವತದ ಪ್ರದೇಶದಲ್ಲೇ ಡ್ಯಾಂ ನಿರ್ಮಿಸ್ತಿದ್ದಾರೆ. ಭೂಕಂಪದ ಪ್ರದೇಶದ ಸ್ಥಳದಲ್ಲೇ ಡ್ಯಾಂ ಕಟ್ಟಿದ್ರೆ ಯಾವಾಗ ಬೇಕಿದ್ರೂ ಅದು ಒಡೆಯುವ ಸಾಧ್ಯತೆಯೂ ಇದ್ದೇ ಇದೆ.

ಚೀನಾ ನಿರ್ಮಿಸುತ್ತಿರುವ ಬೃಹತ್‌‌ ಅಣೆಕಟ್ಟು ಭಾರತ ಹಾಗೂ ಬಾಂಗ್ಲಾದೇಶಗಳ ಪಾಲಿಗೆ ಆತಂಕ ಮೂಡಿಸಿದೆ.. ಈ ಯೋಜನೆಯಿಂದ ಬ್ರಹ್ಮಪುತ್ರ ನದಿಯ ಬಹುಪಾಲು ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸುತ್ತೆ.. ನೀರಿನ ಹರಿವು ನಿರ್ಧರಿಸೋದು ಇನ್ಮುಂದೆ ಚೀನಾ ಆಗಲಿದೆ. ನಮ್ಮ ದೇಶದಲ್ಲಿ ಹುಟ್ಟುವ ನದಿ, ನಾವು ಕೊಟ್ಟಷ್ಟು ನೀವು ಬಳಸ್ಕೊಳ್ಳಿ ಅಂತ ಚೀನಾ ಕ್ಯಾತೆ ತೆಗೆಯುತ್ತೆ.. ಅವ್ರು ಡ್ಯಾಂ ಗೇಟ್ ಓಪನ್ ಮಾಡಿದ್ರಷ್ಟೇ ಭಾರತಕ್ಕೆ ನೀರು.

ಅರುಣಾಚಲ ಪ್ರದೇಶದಲ್ಲಿ ಭಾರತ ಕೂಡ 12 ಜಲವಿದ್ಯುತ್ ಘಟಕಗಳನ್ನ ನಿರ್ಮಿಸೋಕೆ ಪ್ಲಾನ್ ಮಾಡಿತ್ತು. ಈಗ ಚೀನಾ ಇದಕ್ಕೂ ಮೇಲ್ಭಾಗದಲ್ಲೇ ಡ್ಯಾಂ ನಿರ್ಮಿಸುತ್ತಿರುವುದು ಭಾರತಕ್ಕೆ ಸಂಕಷ್ಟ ತರಲಿದೆ..
ಚೀನಾ 4 ವರ್ಷದ ಹಿಂದೆ ಈ ಯೋಜನೆ ಘೋಷಣೆ ಮಾಡಿತ್ತು. ಕಳೆದ ವಾರವಷ್ಟೇ ಡ್ಯಾಂ ಕಟ್ಟೋಕೆ ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ..

- Advertisement -

Latest Posts

Don't Miss