- Advertisement -
ಅರುಣಾಚಲ ಪ್ರದೇಶದ ಐವರು ನಾಗರಿಕರನ್ನ ಚೀನಾಸ ಪೀಪಲ್ಸ್ ಲಿಬರೇಷನ್ ಸೇನೆ ಅಪಹರಿಸಿದೆ ಎಂಬ ಆರೋಪವನ್ನ ಚೀನಾ ತಳ್ಳಿ ಹಾಕಿದೆ.

ಭಾರತ -ಚೀನಾ ಗಡಿಯ ಪೂರ್ವ ವಲಯದಲ್ಲಿ ಚೀನಾ ಸೇನೆ ತಟಸ್ಥವಾಗಿದೆ. ನಮ್ಮ ದೇಶದ ಸೈನಿಕರು ಅರುಣಾಚಲ ಪ್ರದೇಶದ ಯಾವುದೇ ನಾಗರಿಕರನ್ನ ನಾವು ಅಪಹರಿಸಿಲ್ಲ ಅಂತಾ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹಾವೋಲಿಜಿಯಾನ್ ಹೇಳಿದ್ದಾರೆ. ಅಲ್ಲದೇ ನಮ್ಮದೇ ನಾಗರಿಕರನ್ನ ನಾವು ಅಪಹರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರುಣಾಚಲ ಪ್ರದೇಶ ತಮಗೆ ಸೇರಿದ ಪ್ರದೇಶ ಎಂಬ ಮಾತನ್ನ ಚೀನಾ ಪುನರುಚ್ಚರಿಸಿದೆ.

- Advertisement -