China: ಚೀನಾದಲ್ಲಿ ಈ ನಿಯಮ ಅನುಸರಿಸುವ ಕಾರಣಕ್ಕೆ ಅಲ್ಲಿ ಬೀದಿನಾಯಿ ದಾಳಿ ಕಡಿಮೆ

China News: ಚೀನಾ ದೇಶ ಬುದ್ಧಿವಂತ ದೇಶ. ಹಾಗಂತ ಭಾರತದಲ್ಲಿ ಬುದ್ಧಿವಂತರ ಸಂಖ್ಯೆ ಕಡಿಮೆ ಎಂದಲ್ಲ. ಬದಲಾಗಿ ಅಲ್ಲಿನ ಜನ ಜನ ಜೀವನ ಸುಗಮವಾಗಿಸಲು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಾರೆ.

ಅಲ್ಲಿನ ಜನ ತನಗಿಂದ ಮುನ್ನ ದೇಶ ಎನ್ನುವ ನಿಯಮ ಪಾಲಿಸುತ್ತಾರೆ. ಅಂಥ ಕೆಲ ನಿಯಮಗಳ ಕಾರಣದಿಂದಲೇ, ಅಲ್ಲಿ ಬೀದಿನಾಯಿ ದಾಳಿ ಕಡಿಮೆ ಎನ್ನಲಾಗಿದೆ. ಹಾಗಾದ್ರೆ ಯಾವ ರೀತಿ ಬೀದಿ ನಾಯಿ ದಾಳಿ ಕಡಿಮೆ ಅಂತಾ ತಿಳಿಯೋಣ ಬನ್ನಿ.

ಚೀನಾ ಜನ ಬೀದಿ ನಾಯಿಗಳ ಕುತ್ತಿಗೆಗೆ ಕೋಲು ಕಟ್ಟುತ್ತಾರೆ. ಏಕೆಂದರೆ, ಹೀಗೆ ಮಾಡುವುದರಿಂದ ನಾಯಿ ಸುಲಭವಾಗಿ ಯಾರನ್ನೂ ಕಚ್ಚಲು ಸಾಧ್ಯವಿಲ್ಲ. ಏಕೆಂದರೆ, ನಾಾಯಿ ಕಚ್ಚಲು ಬಂದಾಗ, ಕೋಲು ಅಡ್ಡ ಬರುತ್ತದೆ. ನಡೆಯಲು ಸಮಸ್ಯೆ ಮಾಡುತ್ತದೆ. ಹಾಗಾಗಿ ಅನಾಮಿಕನನ್ನು ಕಂಡು ನಾಯಿ ಸಡನ್‌ ಆಗಿ ದಾಳಿ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ಕೆಲ ಬುದ್ಧಿವಂತ ನಾಯಿಗಳು ಆ ಕೋಲನ್ನು ಬಾಯಲ್ಲಿ ಹಿಡಿದು ಓಡುತ್ತದೆ. ಇದಿಂದ ಕೂಡ ದಾರಿಹೋಕರನ್ನು ನಾಯಿ ಸುಲಭವಾಗಿ ಕಚ್ಚಲು ಸಾಧ್ಯವಾಗುವುದಿಲ್ಲ. ಇದರಿಂದ ಬೀದಿ ನಾಯಿಗಳು ಸೇಫ್, ದಾರಿಹೋಕ ಕೂಡ ಸೇಫ್.

About The Author