Viral News: ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸೇಫ್ ಅಂತಾ ಯಾವುದಾದರೂ ಉತ್ತರ ಭಾರತೀಯ ಹುಡುಗಿ ಹೇಳಿದರೆ, ಅದು ಸತ್ಯಕ್ಕೂ ಅತ್ಯುತ್ತಮ ಕಾಂಪ್ಲಿಮೆಂಟ್. ಇತ್ತೀಚಿನ ದಿನಗಳಲ್ಲಿ ಕನ್ನಡ್ ಬರಲ್ಲಾ, ಮೈ ಕನ್ನಡ್ ಬಾತ್ ನೈ ಕರ್ತಿ ಅಂತಾ ನಖರಾ ತೋರಿಸೋ ಜಾಯಮಾನದವರಿರುವಾಗ, ಇಲ್ಲೋರ್ವ ಯುವತಿ, ನನಗೆ ದಕ್ಷಿಣ ಭಾರತ ಅದರಲ್ಲೂ ಬೆಂಗಳೂರೇ ಸೇಫ್ ಸಿಟಿ ಎನ್ನಿಸುತ್ತದೆ ಎಂದಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಈ ಯುವತಿ, ದಕ್ಷಿಣ ಭಾರತವನ್ನು, ಇಲ್ಲಿನ ಜನರನ್ನು ಮೆಚ್ಚಿದ್ದಾಳೆ. ಈಕೆ ದೆಹಲಿಯಲ್ಲಿ ಹುಟ್ಟಿ ಬೆಳೆದು, ಅಲ್ಲೇ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವತಿ.
ಈಕೆ ಹೇಳುವ ಪ್ರಕಾರ, ಈಕೆ ದೆಹಲಿ ಅಥವಾ ಯಾವುದೋ ಉತ್ತರಭಾರತದ ಕಡೆ ಹೋದರೆ, ಮದುವೆಯಾಗಿ ಮಕ್ಕಳಾಗಿದ್ದರೂ ಅಲ್ಲಿನ ಹಲವು ಯುವಕರು, ಹೆಂಗಸರನ್ನು ಮೇಲಿನಿಂದ ಕೆಳಗೆ ಗುರಾಯಿಸುತ್ತಾರೆ. ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ.
ಆದರೆ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮದುವೆಗೂ ಮುಂಚೆ ಮತ್ತು ಮದುವೆ ಆಗಿ, ಮಕ್ಕಳಾದ ಬಳಿಕವೂ ನಾನು ಸೇಫ್ ಫೀಲ್ ಮಾಡುತ್ತಿದ್ದೇನೆ. ನಾನು ಮಾತ್ರವಲ್ಲದೇ, ನನ್ನ ಹಲವು ಉತ್ತರಭಾರತೀಯ ಸ್ನೇಹಿತೆಯರು ಈ ಮಾತನ್ನು ಹೇಳಿದ್ದಾರೆ.
ಸ್ವಲ್ಪ ಬಿಳಿ ಬಣ್ಣ, ಸ್ವಲ್ಪ ಇಂಗ್ಲೀಷ್ ಬಂದರೆ ಸಾಕು, ಉತ್ತರ ಭಾರತೀಯರು ಧಿಮಾಕು ತೋರಿಸಲು ಶುರು ಮಾಡುತ್ತಾರೆ. ಆದರೆ ದಕ್ಷಿಣ ಭಾರತೀಯರು ಅಂದ್ರೆ ಕನ್ನಡಿಗರು, ತಮಿಳಿಗರು, ತೆಲುಗು ಜನ, ಮಳಿಯಾಳಿಗಳು ಇವರೆಲ್ಲರೂ ವಿದ್ಯಾವಂತರಾಗಿದ್ದಾರೆ.
ಉತ್ತಮ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಅತ್ಯುತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಆದರೆ ಅವರೆಂದೂ ಅಹಂಕಾರದಿಂದ ಇರುವುದಿಲ್ಲ. ಎಲ್ಲರ ಜತೆ ಗೌರವದಿಂದ ಮಾತನಾಡುತ್ತಾರೆ. ಹಾಗಾಗಿ ನನಗೆ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಅತ್ಯುತ್ತಮ ಎನ್ನಿಸುತ್ತದೆ ಎಂದು ಹೇಳಿದ್ದಾರೆ.




