ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು ಸರ್ಪ್ರೈಸ್ ಕೊಟ್ಟಿದ್ದಾರೆ.

ಇನ್ನು ಈ ಫ್ಯಾನ್ ಬಿಡಿಸಿರುವ ಆರ್ಟ್‌ಗೆ ಮೇಘನಾ ಫಿದಾ ಆಗಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ. ಚಿರು ಫ್ಯಾನ್ಸ್ ಕೂಡ ಈ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ. ಇನ್ನು ಮೇಘನಾ ಸೀಮಂತದ ಟೈಮಲ್ಲಿ ಕಲಾವಿದ ಕರಣ್ ಆಚಾರ್ಯ ಕೂಡ ಈ ರೀತಿಯ ಗ್ರಾಫಿಕ್ಸ್ ಮಾಡಿದ್ರು. ಮೇಘನಾ ಜೊತೆ ಚಿರು ಇರುವಂತೆ ಫೋಟೋವನ್ನ ಕ್ರಿಯೇಟ್ ಮಾಡಿದ್ದು, ಈ ಕಲೆಗೆ ಚಿರು ಫ್ಯಾನ್ಸ್ ಫುಲ್ ಫಿದಾ ಆಗಿದ್ದರು.

ಇನ್ನು ಮೊನ್ನೆ ಮೊನ್ನೆ ಚಿರು ಮಗು ಸೇರಿ ಮೇಘನಾ ರಾಜ್ ಕುಟುಂಬಕ್ಕೆ ಕೊರೊನಾ ಸೋಂಕಿರುವುದು ಧೃಡ ಪಟ್ಟಿದ್ದು, ಎಲ್ಲರೂ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾರೆ.
