ಬೆಂಗಳೂರು: ಇವರಿಬ್ಬರು ಒಂದೇ ಏರಿಯಾದ ವಾಸಿಗಳು. ಕಷ್ಟಕ್ಕೆ ಆಗುತ್ತೆ ಅಂತ ಚೀಟಿ ವ್ಯವಹಾರದಲ್ಲಿ ಜೊತೆಯಾಗಿದ್ದರು. ಆದರೆ ಕಷ್ಟ ಬಂದಾಗ ಸಹಾಯ ಮಾಡುವ ನೆಪದಲ್ಲಿ ಮೋಸ ಮಾಡಿದ್ದರಂತೆ. ಇದನ್ನು ಪ್ರಶ್ನಿಸಿ ಠಾಣೆ ಮೆಟ್ಟಿಲೇರಿದ ಆ ಕುಟುಂಬಕ್ಕೆ ಏನಾಯ್ತು ಗೊತ್ತಾ? ನಾವು ಹೇಳ್ತೀವಿ ಈ ಸ್ಟೋರಿ ಓದಿ.
ಬೆಂಗಳೂರಿನ ಕೊತ್ತನೂರಿನ 3ನೇ ಅಡ್ಡರಸ್ತೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೈಕ್‌ಗಳಿಗೆ ಬೆಂಕಿ ಹಾಕಿ ಬಂಧನ ಆಗಿದ್ದಾನೆ ನಂಜುಂಡಬಾಬು. ಕಳೆದ ಕೆಲವು ದಿನಗಳ ಹಿಂದೆ ಪುಷ್ಪಾಗೆ ನಂಜುಂಡಬಾಬು ನಾಯಿ ಕಚ್ಚಿತ್ತಂತೆ. ಈ ವೇಳೆ ಠಾಣೆಗೆ ದೂರು ಕೊಡೋದು ಬೇಡ, ಹಣ ಸಹಾಯ ಮಾಡ್ತೀವಿ ಅಂತಾ ಭರವಸೆ ನೀಡಿದ್ದರಂತೆ.
ಹಣ ಸಹಾಯ ಮಾಡಿಲ್ಲ, ಚೀಟಿ ಹಣ ಬಳಕೆ
ನಾಯಿ ಕಚ್ಚಿದ್ದಕ್ಕೆ ಹಣ ಸಹಾಯ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಸಹಾಯ ಮಾಡಿಲ್ಲ. ಆ ಬಳಿಕ ನಾಯಿ ಮಾಲೀಕ ನಂಜುಂಡಬಾಬು ತಾಯಿ ಗೌರಮ್ಮ ಬಳಿ ಚೀಟಿ ಹಾಕಿದ್ದರಂತೆ. ನಾಯಿ ಕಚ್ಚಿದ್ದರಿಂದ ಚೀಟಿ ಹಣವನ್ನು ಕೊಡದೆ ಟ್ರೀಟ್‌ಮೆಂಟ್‌ಗೆ ಬಳಸಿಕೊಂಡಿದ್ದರಂತೆ. ಇದರಿಂದ ಕುಪಿತಗೊಂಡ ನಂಜುಂಡಬಾಬು ಕಳೆದ 23ರಂದು ಪುಷ್ಪಗೆ ಧಮ್ಕಿ ಹಾಕಿ, 2 ಗಾಡಿಗಳಿಗೆ ಬೆಂಕಿ ಹಾಕಿದ್ದ ಎನ್ನಲಾಗಿದೆ.
ಗಾಡಿಗಳಿಗೆ ಬೆಂಕಿ ಹಾಕಿದ್ದರ ಬಗ್ಗೆ ದೂರು ದಾಖಲಾಗ್ತಿದ್ದಂತೆ ವಿಚಾರಣೆ ನಡೆಸಿದ ಕೊತ್ತನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಯಿ ಕಚ್ಚಿದ್ದರ ಬಗ್ಗೆಯೇ ದೂರು ನೀಡಿದರೆ ಇಷ್ಟೆಲ್ಲಾ ರಂಪಾಟ ಆಗ್ತಿರಲಿಲ್ಲ. ಆದರೆ ಹಣ ಕೊಡ್ತೀವಿ ಅಂತಾ ಯಾಮಾರಿಸಿ, ಈಗ ಚೀಟಿ ಹಣ ಕೊಡಲಿಲ್ಲ ಅಂತ ಬೆಂಕಿ ಹಾಕಿದ್ದು ತಪ್ಪೇ ಸರಿ. ಇದೀಗ ಮಾಡಿದ್ದು ಉಣ್ಣೋ ಮಹರಾಯ ಎನ್ನುವಂತೆ ಕಂಬಿ ಹಿಂದೆ ಸೇರಿದ್ದಾರೆ.
Droupadi Murmu : ಇಂದು ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ