Saturday, October 5, 2024

Latest Posts

ವಿಜಯ್ ಮಲ್ಯರನ್ನ ಹಿಡಿದು, ಗ್ರೇಟ್ ಕ್ಯಾಚ್ ಎಂದ ಗೇಲ್..!

- Advertisement -

ಭಾರತೀಯ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ, ಭಾರತದಿಂದ ಪರಾರಿಯಾಗಿರುವ ಮಧ್ಯದ ದೊರೆ ವಿಜಯ್ ಮಲ್ಯ ಇಂಗ್ಲೆಂಡ್ ನಲ್ಲಿ ಬಿಂದಾಸ್ ಜೀವನ ಸಾಗಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಗೊಮ್ಮೆ ಈಗೊಮ್ಮೆ ಕ್ಯಾಮರಾ ಕಣ್ಣಿಗೆ ಬೀಳುವ ಜೊತೆಗೆ, ಭಾರತೀಯರ ಕೈಗೆ ಸಿಕ್ಕು ಚೀಟರ್ ಅಂತ ಕರೆಸಿಕೊಳ್ಳುವ ಮಲ್ಯ, ಸದ್ಯ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಮಲ್ಯ ಹೆಗಲ ಮೇಲೆ ಕೈ ಹಾಕಿ, ತೆಗೆಸಿಕೊಂಡಿರುವ ಫೋಟೋವೊಂದನ್ನ ಟ್ವೀಟ್ ಮಾಡಿರುವ ಗೇಲ್, ‘ಗ್ರೇಟ್​ ಕ್ಯಾಚ್​ ಅಪ್​ ವಿತ್ ಬಿಗ್​ ಬಾಸ್’ ಅಂತ ಕ್ಯಾಪ್ಷನ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಯ, ‘ಯುನಿವರ್ಸಲ್ ಬಾಸ್ ಹಾಗೂ ನನ್ನ ಆತ್ಮೀಯ ಮಿತ್ರನ ಜೊತೆ ಒಂದು ಫೋಟೋ’ ಅಂತ ಹೇಳಿದ್ದಾರೆ. ಅಲ್ಲದೇ ತಮ್ಮನ್ನು ಚೋರ್ ಅಂತ ಕರೆಯುವವರಿಗೂ ಕಮೆಂಟ್​ನಲ್ಲಿಯೇ ಉತ್ತರಿಸಿರೋ ಮಲ್ಯ, ನಿಮ್ಮ ಬ್ಯಾಂಕ್​ಗಳನ್ನು ಹೋಗಿ ಕೇಳಿ ನಾನು ಸಂಪೂರ್ಣ ಸಾಲವನ್ನ ಹಿಂದಿರುಗಿಸಲು ಸಿದ್ಧನಿದ್ದೇನೆ ಅಂತ ಕಳೆದ ಒಂದು ವರ್ಷದಿಂದ ಹೇಳುತ್ತಿದ್ದೇನೆ.

ಈಗ ನಿರ್ಧರಿಸಿ ಯಾರು ಚೋರ್ ಅಂತ, ಎಂದು ಕಮೆಂಟ್ ಮಾಡಿದ್ದಾರೆ. ಇನ್ನು, ಗೇಲ್ ಈ ಫೋಟೋ ಟ್ವೀಟ್​ಗೆ ಟ್ವಿಟ್ಟಿಗರಿಂದ ತಹರೇವಾರಿ ಕಮೆಂಟ್ ಬಂದಿದ್ದು. ಮೊದಲು ನಿಮ್ಮ ಪರ್ಸ್ ಚೆಕ್ ಮಾಡ್ಕೊಳ್ಳಿ ಬಾಸ್​ ಅಂತ ವ್ಯಂಗ್ಯವಾಡಿದ್ದಾರೆ.

https://www.youtube.com/watch?v=d83tIbWd5dM

ನಂದನ್ ಸ್ಪೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ

- Advertisement -

Latest Posts

Don't Miss