Kolar News: ಕೋಲಾರ: ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಸಚಿವ ಕೆ ಎಚ್ ಮುನಿಯಪ್ಪ ಬಣದ ನಡುವೆ ಗಲಾಟೆ ನಡೆದಿದೆ.
ಬ್ಯಾನರ್‌ನಲ್ಲಿ ನಾಯಕರ ಪೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ನಡೆದಿದ್ದು, ಬ್ಯಾನರ್ ನಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಬೆಂಬಲಿಗರ ಪೋಟೋ ಹಾಕಿಲ್ಲವೆಂದು ಆರೋಪಿಸಿ, ಗಲಾಟೆ ಮಾಡಲಾಗಿದೆ. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಗುಂಪು ಮತ್ತು ಊರುಬಾಗಿಲು ಶ್ರೀನಿವಾಸ್ ಗುಂಪಿನ ನಡುವೆ ಬಡಿದಾಟ ನಡೆದಿದೆ. ಇಂದು ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕೋಲಾರ ಕಾಂಗ್ರೆಸ್ ಉಸ್ತುವಾರಿ ರಾಜ್ ಕುಮಾರ್ ನೇತ್ರತ್ವದಲ್ಲಿ ಸಭೆ ನಡೆಯುತ್ತಿತ್ತು.
ಚುನಾವಣಾ ದಿನದಂದು ಬೂತ್ ಗಳಿಗೆ ಏಜೆಂಟ್ ನೇಮಕ ಕುರಿತು ಸಭೆ ಮಾಡಲಾಗುತ್ತಿತ್ತು, ಈ ವೇಳೆ ಫ್ಲೆಕ್ಸ್ ನಲ್ಲಿ ಯಾವುದೇ ನಾಯಕರ ಪೋಟೋ ಇಲ್ಲದಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಕಚೇರಿಯಲ್ಲಿ ಹಾಕಲಾಗಿದ್ದ ಬ್ಯಾನರ್ ನಲ್ಲಿ ಕೊತ್ತೂರು ಮಂಜುನಾಥ್, ರಮೇಶ್ ಕುಮಾರ್ ನಜೀರ್ ಅಹಮದ್ ಪೋಟೋ ಇಲ್ಲದ ಕಾರಣ, ಕೊತ್ತೂರು ಮಂಜುನಾಥ್ ಬೆಂಬಲಿಗರು ಮುಖಂಡ ಊರು ಬಾಗಿಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಈ ಸಭೆಯಲ್ಲಿ ಹಾಜರಿದ್ದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಮೂಕ ಪ್ರೇಕ್ಷರಂತೆ ನಿಂತರೆ, ಗದ್ದಲ ತಡೆಯಲಾಗದೆ ಕಾಂಗ್ರೆಸ್ ಉಸ್ತುವಾರಿಗಳಾದ ರಮೇಶ್ ಹಾಗೂ ರಾಜ್ ಕುಮಾರ್ ಸುಮ್ಮನೆ ಕುಳಿತಿದ್ದರು.
ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?
ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್



