ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ನಲ್ಲಿ ತನ್ನದೆಯಾದ ಅಪಾರ ಅಬಿಮಾನಿಗಳನ್ನು ಹೊಂದಿದoತಹ ನಟ. ಕಾರ‍್ಡಿಯಾ ಅಟ್ಯಾಕ್‌ನಿಂದಾಗಿ ಅಕಾಲಿಕ ನಿಧನವಾದರು. ಕೇವಲ ನಟನೆ, ಡ್ಯಾನ್ಸ್ ಅಲ್ಲದೆ ಸೊಗಸಾಗಿ ಹಾಡುಗಳನ್ನು ಸಹ ಹಾಡುತ್ತಿದ್ದಂತಹ ಕಲಾವಿದ. ತಮ್ಮದೇ ಚಿತ್ರವಲ್ಲದೆ ಬೇರೆ ಚಿತ್ರಗಳಿಗು ಹಾಡುಗಳನ್ನು ಹಾಡುತ್ತಿದ್ದ ಪುನೀತ್, ಹಾಡು ಹಾಡುವುದಕ್ಕೆಂದು ಪಡೆಯುತ್ತಿದ್ದ ಸಂಭಾವನೆಯನ್ನು ಸಮಾಜಮುಕಿ ಕಾರ್ಯಗಳಿಗೆ ಹಾಗೂ ತಮ್ಮ ಶಕ್ತಿಧಾಮದ ಕಾರ್ಯಗಳಿಗೆ ನೀಡುತ್ತಿದ್ದರು. ಅಲ್ಲದೆ ಅಂತಹ ಸಮಾಜಮುಕಿ ಕೆಲಸಗಳಿಗೆಂದೆ ಪುನೀತ್ ಹಾಡಲು ಒಪ್ಪಿಕೊಳ್ಳುತ್ತಿದ್ದರು. ಯಾರೆ ಕಷ್ಟಯೆಂದು ಅಪ್ಪು ಬಳಿ ಹೋದರು ಅವರಿಗೆ ನೆರವಾಗುತಿದ್ದರು, ಆದರೆ ಅವರು ಸಹಯಾ ಮಾಡಿದ ವಿಷಯವನ್ನು ಎಲ್ಲೂ ಹೇಳುತ್ತಿರಲಿಲ್ಲ. ಇಂತಹ ಸಹೃದಯಿ ಮನಸಿನ ಅಪ್ಪು ಅಘಲಿಕೆಗೆ ಈಡಿ ರಾಜ್ಯವೆ ಸಂತಾಪ ಸೂಚಿಸುತ್ತಿದೆ.
ಈ ಮಧ್ಯೆ ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಸದ್ದು ದೊಡ್ಡದಾಗಿ ಕೇಳಿಬರುತ್ತಿದ್ದು. ಇದರ ಬಗ್ಗೆ ಇಂದು ಮಾತನಾಡಿರುವ ಸಿಎಂ ಬೊಮ್ಮಾಯಿ “ಇವತ್ತು ಪುನೀತ್ ಪುಣ್ಯಸ್ಮರಣೆ ಇದೆ ನಾನು ಕ್ಯಾಬಿನೆಟ್ ಮುಗಿದಮೇಲೆ ಭಾಗಿಯಾಗ್ತಿದ್ದೇನೆ. ನೀವೊಬ್ಬರು ಕುಟುಂಬದ ಸದಸ್ಯರಾಗಿ, ಆತ್ಮಿಯರಾಗಿ ರ‍್ಲೇಬೇಕು, ಎಲ್ಲಾ ನೀವು ನಿಂತು ಮಾಡಿಕೊಟ್ಟಿದ್ದೀರಿ ಆದರಿಂದ ಇದು ಕುಟುಂಬದ ಒಂದು ಪುಣ್ಯಸ್ಮರಣೆ ಇದೆ ತಾವು ಬರಬೇಕು ಅಂತ ಅವರು ಹೇಳಿದ್ದಾರೆ ಇಗಾಗಿ ಅದನ್ನು ಅಟೆಂಡ್ ಆಗ್ತಿದ್ದೀನಿ” ಎಂದರು, ಇನ್ನೂ ಪದ್ಮಶ್ರೀ ಬಗ್ಗೆ “ಇವೆಲ್ಲವು ಕೂಡ ಸೂಕ್ತಸಮಯದಲ್ಲಿ ಎಲ್ಲಾ ಚರ್ಚೆಮಾಡಿ ಅದರ ಒಂದು ಪರ‍್ಮಾಲಿಳಿಸ್ ಇದೆ ಯಾವ್ತರ ಮಾಡ್ಬೆಕು ಅಂತ ಅದೆಲ್ಲವನ್ನು ನೋಡ್ಕೊಂಡು ಅಂತಿಮವಾಗಿ ತೀರ್ಮಾನ ಮಾಡ್ತೆನೆ ಕುಟುಂಬದ ಜೊತೆ ಸದಸ್ಯರ ಜೊತೆ ಕೂಡ ಚರ್ಚೆ ಮಾಡ್ತೇನೆ’ ಎಂಬoತಹ ಮಾತುಗಳನ್ನು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಮೊದಲು ಮಾತನಾಡಿದ್ದ ವಿಪಕ್ಷನಾಯಕ ಸಿದ್ದರಾಮಯ್ಯನವರು “ಯಾರು ಜನಪ್ರಿಯರಾಗಿರುತ್ತಾರೆ, ಜನರ ಪ್ರೀತಿ ವಿಶ್ವಾಸಗಳಿಸಿರುತ್ತಾರೆ ಅವರಿಗೆ ಮಾತ್ರ ಈ ಗೌರವ ಸಿಗಲು ಸಾಧ್ಯ ಅದ್ದರಿಂದ ಇಷ್ಟುದೊಡ್ಡ ಗೌರವವನ್ನ ಚಿಕ್ಕವಯಸಿನಲ್ಲೆ ಸಂಪಾದಿಸಿದAತ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ಅಘಲಿದ್ದಾರೆ, ಕೇಂದ್ರ ಸರ್ಕಾರಕ್ಕೆ ವತ್ತಾಯ ಮಾಡ್ತೆನೆ ಮನವಿ ಮಾಡ್ತೆನೆ ಪುನೀತ್ ರಾಜ್ ಕುಮಾರ್ ಅವರಿಗೆ ರಾಷ್ಟçದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ನೀಡಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದರು.
ಹಾಗೆಯೆ ಈ ಬಗ್ಗೆ ನಿರ್ಮಾಪಕರು ಹಾಗೂ ಬಿಜೆಪಿ ಪಕ್ಷದ ಶಾಸಕರಾದಂತ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು,” ಪದ್ಮಶ್ರೀ ಕೊಡೊದ್ರಲ್ಲಿ ಯಾವುದೆ ತಪ್ಪಿಲ್ಲಾ, ಪದ್ಮಶ್ರೀ ಕೊಡ್ಬೆಕು, ಪುನೀತ್ ರಾಜ್‌ಕುಮಾರ್ ಅವರು ಬರಿ ನಾಯಕ ನಟನಾಗಿ ಇದ್ದು ನಮ್ಮನ್ನಗಲಿದ್ದಾರೆ ಅನ್ನೋದಕಿಂತ ಅವರ ಸೇವೆಗಳನ್ನ ಗುರುತಿಸಿ, ಇಷ್ಟು ಚಿಕ್ಕವಯಸಲ್ಲಿ ಅವರು ಮಾಡಿದಂತ ಸೇವೆಗಳು ಗೋಶಾಲೆ ರ‍್ಬೋದು, ಅನಾಥಾಶ್ರಮ ರ‍್ಬೋದು, ವ್ರುದ್ದಾಶ್ರಮ ಮತ್ತೆ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ, ನಿಜವಾಗಲು ಹೇಳ್ತಿನಿ ಬಹಳ ಅವಶ್ಯಕತೆ, ಬಹಳ ಸಂತೋಷರವಾದ, ಯಾವ್ದನ ವಿಷಯ ಇದ್ದರೆ ಅದು ನಮ್ಮ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಕೊಡಲೇಬೇಕು ಅನ್ನೋದು ನನ್ನ ಒಂದು ಆಗ್ರಹ” ಎಂಬoತಹ ಮಾತುಗಳನ್ನು ತಿಳಿಸಿದ್ದರು.
ನಟನೆ, ಡ್ಯಾನ್ಸ್, ಹಾಡುವುದು, ಹಾಗೂ ತಮ್ಮ ಒಳ್ಳೆಯ ವ್ಯಕ್ತಿತ್ವದಿಂದ ಅನೇಕರ ಮನಗೆದ್ದಿದರು. ಚಿಕ್ಕ ವಯ್ಯಸಿನಲ್ಲೆ ಅಘಲಿದ ಪುನೀತ್, ತಮ್ಮ 10ನೇ ವಯಸ್ಸಿನಲ್ಲೆ ಬೆಟ್ಟದ ಹೂ ಸಿನಿಮಾದ ಮನೋಘ್ನ ಅಭಿನಯಕ್ಕೆ ರಾಷ್ಟç ಪ್ರಶಸ್ತಿಯನ್ನು ದಕ್ಕಿಸಿ ಕೊಂಡಿದ್ದರು, ಒಟ್ಟಾರೆ 46 ಸಿನಿಮಾಗಳಲ್ಲಿ ಪುನೀತ್ ಅಭಿನಯಿಸಿದ್ದರು. ಸಿನಿಮಾ ಮಾತ್ರವಲ್ಲದೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿರುವ ಪುನೀತ್‌ಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.