Sunday, October 13, 2024

Latest Posts

ಸಿಎಂ ಹೊಸ ಲೆಕ್ಕಾಚಾರ- ಜೆಡಿಎಸ್ ನ 6 ಸಚಿವರ ತಲೆದಂಡ…!!

- Advertisement -

ಮೈತ್ರಿ ಸರ್ಕಾರವನ್ನ ಬೀಳಿಸೋಕೆ ನಾನಾ ಪ್ರಯತ್ನ ಮಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಸದ್ಯ ಕಾದು ನೋಡೋ ತಂತ್ರ ಅನುಸರಿಸಿದ್ದಾರೆ. ಇತ್ತ ಸಿಎಂ ಕುಮಾರಸ್ವಾಮಿ ಮಾತ್ರ ಮ, ಸೈಲೆಂಟ್ ಆಗಿದ್ರೆ ನಮಗೇ ತೊಂದ್ರೆ ಅಂತ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸರ್ಕಾರ ಉಳಿಸಿಕೊಳ್ಳಲು ತಾವೇ ಅಖಾಡಕ್ಕೆ ಇಳಿದಿದ್ದಾರೆ.. ಅಸಮಾಧಾನಗೊಂಡಿರೋ ಕಾಂಗ್ರೆಸ್ ಶಾಸಕರನ್ನ ತಾವೇ ಚೌಕಾಸಿ ಅವರನ್ನೆಲ್ಲಾ ಯಡಿಯೂರಪ್ಪ ಕ್ಯಾಂಪ್ ಸೇರದಂತೆ ಸಿಎಂ ಮನವೊಲಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಗೆ ನಮ್ಮ ಬೆಂಬಲ ಅಂತಿದ್ದ ಪಕ್ಷೇತರ ಶಾಸಕರನ್ನೂ ಕೂಡ ತಮ್ಮತ್ತ ಸೆಳೆದುಕೊಳ್ಳುವಲ್ಲಿ ದೋಸ್ತಿಗಳು ಸಕ್ಸಸ್ ಆಗಿದ್ದಾರೆ. ಈ ನಡುವೆ ಕಾಂಗ್ರೆಸ್ನ ಮತ್ತಷ್ಟು ಶಾಸಕರು ಬಹಿರಂಗವಾಗಿ ನನಗೆ ಸಚಿವ ಸ್ಥಾನ ಕೊಡಿ ಇಲ್ಲದಿದ್ರೆ ಬಿಜೆಪಿಯವರು ನನ್ನನ್ನ ಕರೀತಿದ್ದಾರೆ, ನಾವು ಹೋಗ್ತೇವೆ ಅಂತ ಒತ್ತಡ ತರುತ್ತಿದ್ದಾರೆ.

ಇದೀಗ ಏನಾದ್ರೂ ಮಾಡಿ ಅಸಮಾಧಾನಿತರ ಮನವೊಲಿಕೆ ಮಾಡ್ಲೇಬೇಕು ಅಂತ ಟಾರ್ಗೆಟ್ ಇಟ್ಟುಕೊಂಡಿರೋ ಸಿಎಂ ಇದೀಗ ತಮ್ಮದೇ ಪಕ್ಷದ  6 ಕ್ಕೂ ಹೆಚ್ಚು ಸಚಿವರ ತಲೆದಂಡ ಮಾಡಿ ಕಾಂಗ್ರೆಸ್ ಭಿನ್ನಮತೀಯ ಶಾಸಕರಿಗೆ ಮಂತ್ರಿಗಿರಿ ಕೊಡಲು ಮುಂದಾಗಿದ್ದಾರೆ.

ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಗೆಲ್ಲಿಸೋಕ್ಕೆ ವಿಫಲವಾಗಿರೋ ಸಚಿವ ಪುಟ್ಟರಾಜು, ಸಾ.ರಾ ಮಹೇಶ್ ತಲೆ ದಂಡ ಬಹುತೇಕ ಫಿಕ್ಸ್ ಆಗಿದೆ. ಇನ್ನು ಡಿ.ಸಿ ತಮ್ಮಣ್ಣರನ್ನ ಸಂಪುಟದಿಂದ ತೆಗೆದುಹಾಕಲು ಕುಮಾರಸ್ವಾಮಿ ಮುಂದಾಗಿದ್ರು ಸಹೋದರ ಡಾ. ರಮೇಶ್ ಸುತಾರಾಂ ಒಪ್ತಿಲ್ಲ.

ಇತ್ತ ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಮುಖಭಂಗ ಮಾಡಿರೋ ಸಚಿವ ಜಿ.ಟಿ ದೇವೇಗೌಡರನ್ನ ಸಂಪುಟದಿಂದ ತೆಗೆದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಗೆ ಪಟ್ಟಕಟ್ಟಲು ಯೋಚನೆ ಮಾಡಲಾಗ್ತಿದೆ.  ತುಮಕೂರಿನ ಎಸ್.ಆರ್ ಶ್ರೀನಿವಾಸ್ ಸಚಿವ ಸ್ಥಾನಕ್ಕೂ ಕಂಟಕ ಎದುರಾಗಿದೆ. ಇನ್ನು ವಯಸ್ಸಿನ ಕಾರಣ ನೀಡಿ ವಿಜಯಪುರದ ಎಂ.ಸಿ ಮನಗಳಿ ಸಚಿವ ಸ್ಥಾನ ಕಳೆದುಕೊಳ್ಳೊದು ಬಹುತೇಕ ಫಿಕ್ಸ್ ಆಗಿದೆ. ಇದಕ್ಕೆ ಸಚಿವರೂ ಕೂಡ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನಲಾಗ್ತಿದ್ದು, ಈಗಾಗಲೇ ಸರ್ಕಾರ ಉಳಿಸಿಕೊಳ್ಳೋದಕ್ಕೆ ನಾವು ಯಾವುದೇ ತ್ಯಾಗಕ್ಕೂ ರೆಡಿ ಅಂತ ಸಾ.ರಾ ಮಹೇಶ್ ಹೇಳಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.

ಹಾಗೆ ನೋಡಿದ್ರೆ, ಜೆಡಿಎಸ್ನಲ್ಲಿ ಗೌಡರ ಕುಟುಂಬದವರ ಬಳಿ ಮಾತ್ರ ಅಧಿಕಾರ ಉಳಿಯಲಿದ್ದು ಸರ್ಕಾರ ಉಳಿಸಿಲು ಜೆಡಿಎಸ್ನ ಇತರೆ ಸಚಿವರ ಅಧಿಕಾರವೂ ಕೈತಪ್ಪೋದು ಗ್ಯಾರಂಟಿ.

ಬಂಡಾಯ ಏನಾಯ್ತು, ಆಪರೇಷನ್ ಏನಾಯ್ತು…? ಈ ವಿಡಿಯೋ ತಪ್ಪದೇ ನೋಡಿ

- Advertisement -

Latest Posts

Don't Miss