Sunday, October 13, 2024

Latest Posts

ಸಿಎಂ ಕುಮಾರಸ್ವಾಮಿ ಮೊದಲ ಗ್ರಾಮ ವಾಸ್ತವ್ಯ ಎಲ್ಲಿ ಗೊತ್ತಾ…?

- Advertisement -

ಯಾದಗಿರಿ: ಗ್ರಾಮ ವಾಸ್ತವ್ಯ ಮಾಡಿ ಸೈ ಎನಿಸಿಕೊಂಡಿದ್ದ ಕುಮಾರಸ್ವಾಮಿ ಇದೀಗ ತಮ್ಮ ಎರಡನೇ ಅವಧಿಯಲ್ಲೂ ಮುಂದುವರಿಸುತ್ತಿದ್ದು ಯಾದಗಿರಿ ಜಿಲ್ಲೆಯ ಗ್ರಾಮವೊಂದವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದ ಬಾರಿಯ 20-20 ಸರ್ಕಾರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಸಿಎಂ ಇದೀಗ ಮತ್ತೆ ಗ್ರಾಮ ವಾಸ್ತವ್ಯ ಶುರುಮಾಡಲಿದ್ದಾರೆ. ಅನಾರೋಗ್ಯ ಹಾಗೂ ನಾನಾ ಕಾರಣಗಳಿಂದಾಗಿ ಇಷ್ಟುದಿನ ಗ್ರಾಮ ವಾಸ್ತವ್ಯದಿಂದ ಕುಮಾರಸ್ವಾಮಿ ದೂರ ಉಳಿದಿದ್ರು. ಇದೀಗ ಯಾದಗಿರಿ ಜಿಲ್ಲೆಯ ಗುರುಮಿಟಕಲ್ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಇನ್ನು ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಇರೋ ಗುರುಮಿಟಕಲ್ ಕ್ಷೇತ್ರದ ಈ ಗ್ರಾಮದಲ್ಲಿ ಜೂನ್ 21ರಂದು ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ವಿನಯ್ ಗುರೂಜಿ ಈ ನಿರ್ಧಾರಕ್ಕೆ ಕಾರಣವೇನು…??ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=I58oW6jlJi4
- Advertisement -

Latest Posts

Don't Miss