ಮಂಡ್ಯ: ಸಾಲಬಾಧೆಯಿಂದ ತಾಳಲಾರದೆ ಸಿಎಂ ಉದ್ದೇಶಿಸಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ನಿನ್ನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಂತೇಬಾಚಳ್ಳಿಯ ಅಘಲಯ ಗ್ರಾಮದ ರೈತ ಸುರೇಶ್(45) ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಡಿಯೋದಲ್ಲಿ ರೈತ ಸುರೇಶ್ ಸಿಎಂ ಕುಮಾರಸ್ವಾಮಿ ಇನ್ನೂ 4 ವರ್ಷ ಸಿಎಂ ಆಗಿ ಮುಂದುವರಿಯಬೇಕು. ಸಿಎಂ ಬಡ ರೈತರ ಸಮಸ್ಯೆಯನ್ನು ನೀಗಿಸ್ತಾರೆ ಅನ್ನೋ ನಂಬಿಕೆ ನನಗಿದೆ ಅಂತ ಹೇಳಿಕೊಂಡಿದ್ರು. ಅಲ್ಲದೆ ಸಿಎಂ ಕುಮಾರಸ್ವಾಮಿ ತನ್ನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬೇಕಂದು ವಿಡಿಯೋ ಮೂಲಕ ಸಾವಿಗೂ ಮುನ್ನ ಸುರೇಶ್ ಹೇಳಿಕೊಂಡಿದ್ದರು. ಆದ್ರೆ ನಿನ್ನೆ ರೈತ ಸುರೇಶ್ ಅಂತ್ಯಸಂಸ್ಕಾರದ ಬಳಿಕ ಕುಟುಂಬಸ್ಥರಿಗೆ ಈ ವಿಡಿಯೋ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅಘಲಯಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.
ದೇವೇಗೌಡರ ಮಾಸ್ಟರ್ ಪ್ಲಾನ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ