Monday, December 11, 2023

Latest Posts

‘ಒಂದೆಡೆ ಬೆನ್ನು ತಟ್ತಾರೆ, ಮತ್ತೆ ಭಿನ್ನರಾಗ ಹಾಡ್ತಾರೆ’- ಬಿಜೆಪಿಗೆ ಸಿಎಂ ತಿರುಗೇಟು

- Advertisement -

ಬೆಂಗಳೂರು: ಗ್ರಾಮವಾಸ್ತವ್ಯದ ಕುರಿತಾಗಿ ನಾನಾ ಟೀಕೆ ಮಾಡುತ್ತಿರೋ ಪ್ರತಿಪಕ್ಷ ಬಿಜೆಪಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕಲಬರುಗಿಯಲ್ಲಿ ಇಂದು ನಡೆಯಬೇಕಿದ್ದ ಗ್ರಾಮವಾಸ್ತವ್ಯ ಮುಂದೂಡಿಕೆಯಾಗಿದ್ದರ ಬಗ್ಗೆ ಬಿಜೆಪಿ ಟೀಕಿಸಿತ್ತು. ಬರ ಪೀಡಿತ ಪ್ರದೇಶಗಳನ್ನು ಸಿಎಂ ನಿರ್ಲಕ್ಷ್ಯಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೂ ಸಿಎಂ ಪ್ರತ್ಯುತ್ತರ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ.ಗ್ರಾಮ ವಾಸ್ತವ್ಯ ಕುರಿತ ವಿರೋಧ ಪಕ್ಷದ ನಾಯಕರ ಹುರುಳಿಲ್ಲದ ಟೀಕೆಗೆ ಇದೇ ನನ್ನ ಉತ್ತರ. ಸರ್ಕಾರ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ನಾನು ನಿನ್ನೆ ಗ್ರಾಮ ವಾಸ್ತವ್ಯ ಮಾಡಿರುವುದು ಸಹ ಬರಪೀಡಿತ ಯಾದಗಿರಿ ಜಿಲ್ಲೆಯಲ್ಲೇ ಅಂತ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಇನ್ನು ಬಿಜೆಪಿ ನಾಯಕರು ಒಂದೆಡೆ ಅಧಿಕಾರಿಗಳ ಬೆನ್ನು ತಟ್ಟಿ ಮತ್ತೊಂದೆಡೆ ಮಾಧ್ಯಮದ ಮುಂದೆ ಮತ್ತೇನೋ ಹೇಳ್ತಾರೆ ಅಂತ ಸಿಎಂ ಕಿಡಿ ಕಾರಿದ್ದಾರೆ.

ಯಾದಗಿರಿಗೆ ಸಿಎಂ ಕೊಟ್ಟ ಬಂಪರ್ ಆಫರ್ ಏನ್ ಗೊತ್ತಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=3KeJni-Pkb8


- Advertisement -

Latest Posts

Don't Miss