Friday, November 22, 2024

Latest Posts

ಸಂಸದೆ ಸುಮಲತಾ ಅಂಬರೀಷ್ ಮನವಿಗೆ ಸ್ಪಂದಿಸಿದ ಸಿಎಂ..

- Advertisement -

ಮಂಡ್ಯದ ಮಳವಳ್ಳಿಯಲ್ಲಿ ಅತ್ಯಾಚಾರ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ, ಸಂಸದೆ ಸುಮಲತಾಾ ಸಿಎಂ ಬಳಿ ಪರಿಹಾರ ನೀಡಲು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಿಎಂ ಸ್ಪಂದಿಸಿದ್ದಾರೆಂದು, ಸಂಸದರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಅಮಾನುಷ ಕೃತ್ಯದಿಂದ ಸಾವಿಗೀಡಾದ ಮಳವಳ್ಳಿಯ ಬಾಲಕಿಯ ಕುಟುಂಬಕ್ಕೆ ಪರಿಹಾರ ಕೋರಿ ನಾನು ಮಾಡಿದ ಮನವಿಗೆ ಕೂಡಲೇ ಸ್ಪಂದಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ರೂ.10 ಲಕ್ಷ ವರ್ಗಾವಣೆ ಮಾಡಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಆ ಕುಟುಂಬದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಜಿಲ್ಲೆಯ 6 ಶಾಸಕರಿಗೂ ಸವಾಲು ಹಾಕಿದ ಸಂಸದೆ ಸುಮಲತಾ ಅಂಬರೀಶ್..

ವಿಶೇಷ ಪ್ರಕರಣದಡಿ ಮಂಜೂರಾಗಿರುವ ಈ ಹಣವನ್ನು ಕೂಡಲೇ ಆ ಹುಡುಗಿಯ ಕುಟುಂಬಕ್ಕೆ ವರ್ಗಾಯಿಸುವ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಇದು ಒಂದು ಸಣ್ಣ ಸಾಂತ್ವಾನವಾದರೆ, ಇದಕ್ಕೂ ಮಿಗಿಲಾಗಿ ಅಪರಾಧಿಗೆ ಕಾನೂನು ರೀತಿ ಅತ್ಯಂತ ಕಠಿಣ ಶಿಕ್ಷೆ ಆದಷ್ಟು ಶೀಘ್ರ ಸಿಗುವಂತಾದರೆ ಆಕೆಯ ಕುಟುಂಬಕ್ಕೆ ಮತ್ತು ಎಲ್ಲಾ ಮಹಿಳೆಯರಿಗೂ ಸ್ವಲ್ಪ ಸಮಾಧಾನ ತರಲಿದೆ.

ಈ ವಿಷಯವನ್ನೂ ಕೂಡ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡಿದ್ದು ಅವರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಸಂಪೂರ್ಣ ಭರವಸೆ ಇದೆ. ಆ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರುತ್ತಾ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

- Advertisement -

Latest Posts

Don't Miss