Political News: ಹುಬ್ಬಳ್ಳಿ: ಮುಸ್ಲಿಂರಿಗೆ ದೇಶದ ಸಂಪತ್ತು ಹಂಚುತ್ತೇವೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿರುವುದು ನೂರಕ್ಕೆ ನೂರು ಸತ್ಯ ಇದೆ. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನದವರಾ..? ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಕಾಂಗ್ರೆಸ್ ಮುಖಂಡ ಅನೀಲಕುಮಾರ್ ಪಾಟೀಲ ಅವರ ಮಗನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ದೇಶದಲ್ಲಿ ಇರುವ ಎಲ್ಲರೂ ಈ ದೇಶದ ಪ್ರಜೆಗಳೇ. ಈ ದೇಶದಲ್ಲಿ ಇರುವವರನ್ನು ಪಾಕಿಸ್ತಾನಕ್ಕೆ ಕಳಸ್ತೀರಾ..? ಅವರಿಗೇನೂ ಈ ಭೂಮಿ ಮೇಲೆ ಹಕ್ಕು ಇಲ್ಲವಾ..? ಎಂದು ತಿಮ್ಮಾಪೂರ ಪ್ರಶ್ನಿಸಿದರು.
ಬೆಳಗ್ಗೆ ಎದ್ದು ಹಿಂದೂ-ಮುಸ್ಲಿಂ ಗಲಾಟೆ ನಮ್ಮ ಸಂಸ್ಕೃತಿನಾ..? ಅವರು ನಮ್ಮವರೇ,ಎಲ್ಲರ ಜೊತೆಗೆ ನಾವು ಅವರಿಗೆ ಕೊಡ್ತೀವಿ ಎಂದ ಅವರು, ಮುಸ್ಲಿಂರ ಒಲೈಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಯಾರನ್ನು ಒಲೈಕೆ ಮಾಡ್ತಾರೆ. ಅವರು ಹಿಂದೂಗಳನ್ನ ಒಲೈಕೆ ಮಾಡಲ್ವಾ. ಎಸ್.. ನಾನು ಹಿಂದೂ ಸಿದ್ದರಾಮಯ್ಯ ಹಿಂದೂ. ಹಿಂದೂತ್ವ ಇವರ ಮನೆ ಆಸ್ತಿನಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಂತ ಮನೆ ಆಸ್ತಿಗೆ ಹಿಂದೂತ್ವ ಉಪಯೋಗ ಮಾಡ್ತಾರೆ. ಹಿಂದೂತ್ಚ ಮುಸ್ಲಿಂ ಗಲಾಟೆ ಈ ದೇಶದ ಸಂಸ್ಕೃತಿ ಅಲ್ಲ. ಸಿದ್ದರಾಮಯ್ಯ ಹೇಳಿರೋದು ನೂರಕ್ಕೆ ನೂರು ಸತ್ಯ. ಇಲ್ಲಿ ಹುಟ್ಟಿರೋರು ಈ ದೇಶದ ಪ್ರಜೆಗಳು. ಎಲ್ಲರಿಗೂ ಹಕ್ಕಿದೆ. ಅಧಿವೇಶನದಲ್ಲಿ ಬಿಜೆಪಿ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ನಿರಾಸಕ್ತಿ ತೋರಿದೆ. ನಾವು ಸಮಸ್ಯೆ ಚರ್ಚೆ ಮಾಡಲು ಸಿದ್ದರಿದ್ದೇವೆ. ಅದಕ್ಕೆ ಉತ್ತರ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಚಿವ ತಿಮ್ಮಾಪೂರ ಹೇಳಿದರು.
‘ಅಲ್ಪಸಂಖ್ಯಾತ ಇಲಾಖೆಗೆ ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ’
‘ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ’