Political News: ಇಂದು ಬಿಜೆಪಿ ನಾಯಕರು, ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿದ್ದರಾಮಯ್ಯ, ಇವತ್ತು ಬಿಜೆಪಿ ಹಾಗೂ ಜೆಡಿಎಸ್ ನವರು ತೈಲ ದರ ಹೆಚ್ಚು ಮಾಡಿದ್ದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ಡಿಸೇಲ್ ಕೇವಲ ಮೂರು ರೂಪಾಯಿ ಹೆಚ್ಚಿಸಿದ್ದೇವೆ. ಆದ್ರೆ ಬಿಜೆಪಿವವರು ನಮ್ಮವಿರುದ್ದ ಅಲ್ಲ, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಬೇಕು. ಈ ಹಿಂದೆ ಕೇಂದ್ರದಲ್ಲಿ ಗ್ಯಾಸ್ ಹಾಗೂ ತೈಲ ದರ ಹೆಚ್ಚಿಸಿದಾಗ ಗುಜರಾತ್ ಸಿಎಂ ಆಗಿದ್ದಾಗ ಮೋದಿ ದೊಡ್ಡ ಹೇಳಿಕೆಕೊಟ್ಟಿದ್ರು. ನಂತ್ರ ಪ್ರಧಾನಿ ಆದ್ಮೇಲೆ ತೈಲ ಹಾಗೂ ಗ್ಯಾಸ್ ಬೆಲೆ ಇಳಿಸುತ್ತೇವೆ ಎಂದಿದ್ರು. ಈಗ ಅವರು ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಪ್ರಧಾನಿ ಆದ್ಮೇಲೆ ಪೆಟ್ರೋಲ್ ಬೆಲೆ 72.26 ರೂಪಾಯಿ ಇತ್ತು. ಅದನ್ನ ಜೂನ್ 24 ರಲ್ಲಿ 104 ರೂಪಾಯಿ ಆಗಿತ್ತು. ಈಗ ಕಡಿಮೆ ಆಗಿದೆ. ಡಿಸೇಲ್ ಬೆಲೆ 67.28 ಇತ್ತು. ಅದನ್ನ 91 ರೂಪಾಯಿ ಮಾಡಿದ್ರು. ಈಗ 84 ರೂಪಾಯಿ ಕ್ರೂಡ್ ಆಯಿಲ್ ಬೆಲೆ ಇದೆ. 2015 ರಲ್ಲಿ 50 ರೂಪಾಯಿ ಆಯ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಹೆಚ್ಚಾದ್ರೆ ಇಲ್ಲಿ ಕಡಿಮೆ ಆಗ್ತಿತ್ತು. ಆದ್ರೆ ಇಲ್ಲಿ ತದ್ವಿರುದ್ಧವಾಗಿದೆ. ಹಾಗಾದ್ರೆ ಯಾರ ವಿರುದ್ದ ಪ್ರತಿಭಟನೆ ಮಾಡಬೇಕು? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಬಡವರು, ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ರೆ ಬೆಲೆ ಕಡಿಮೆ ಮಾಡಬೇಕಿತ್ತು. ಕೇಂದ್ರ ಸರ್ಕಾರಜಿಎಸ್ ಟಿ ತಂದ್ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಹೆಚ್ಚಿಸೋದಕ್ಕೆ ಕಡಿಮೆ ಆಯ್ತು. ಸ್ಟ್ಯಾಂಪ್ ಡ್ಯೂಟಿ, ಮೋಟರ್ ಟ್ಯಾಕ್ಸ್ ಬಿಟ್ಟು ಎಲ್ಲಾ ಕೇಂದ್ರವೇ ನಿರ್ಧಾರ ಮಾಡುತ್ತೆ. ಕರ್ನಾಟಕಕ್ಕೆ 186000 ಕೋಟಿನಷ್ಟವಾಗಿದೆ. ಕರ್ನಾಟಕಕ್ಕೆ ಬರೋ ತರಿಗೆ ಕಡಿಮೆಯಾಯಿತು. ರಾಜ್ಯದ ಪರ ಬಿಜೆಪಿಯವರು ಒಂದು ದಿನವೂ ಮಾತನಾಡಿಲ್ಲ. ರಿಂಗ್ ರೋಡ್ ಹಣ ನೀಡುತ್ತೇವೆ ಹಾಗೂ ಕೆರೆ ಅಭಿವೃದ್ಧಿ, ಅಪ್ಪರ್ ಭದ್ರಾ ಬಗ್ಗೆ ಮಾತು ಆಡಿಲ್ಲ ಎಂದು ಸಿಎಂ ಹೇಳಿದ್ದಾರೆ.